HOSANAGARA ; ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ 2023-24ನೇ ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಹೊಸನಗರದ ಮಾಧುರಿ ದೇವಾನಂದ ಅವರು ನಡೆಸುತ್ತಿರುವ ಶ್ರೀ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ರಮ್ಯಾ ಚಂದ್ರು ಶೇ. 95 ಫಲಿತಾಂಶ ಗಳಿಸಿ ಪ್ರಥಮ ಸ್ಥಾನ ಗಿಟ್ಟಿಸಿದ್ದಾರೆ.
ಉಳಿದಂತೆ ಕು. ಶಾರ್ವರಿ ಉಡುಪ ಶೇ
86.5, ಕು. ನಿಶ್ಮಿತಾ ಎಸ್ ಪೂಜಾರಿ ಶೇ. 86, ಕು. ಧನ್ಯಶ್ರೀ ಶೇ. 82 ಫಲಿತಾಂಶ ಗಳಿಸಿದ್ದಾರೆ.
ಇವರುಗಳ ಸಾಧನೆಗೆ ಹೊಸನಗರ ಪಟ್ಟಣದ ನಾಗರಿಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ