ರಿಪ್ಪನ್ಪೇಟೆ : ‘ಜೈನ ಧರ್ಮಿಯರು ಜೈನ ಸಿದ್ಧಾಂತಗಳನ್ನು ಅನೂಚಾನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯ ಆದರ್ಶಪ್ರಾಯವಾಗುತ್ತದೆ’ ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ನೂಲು ಹುಣ್ಣಿಮೆಯಂದು ತಿಳಿಸಿದರು.

‘ಯಜ್ಞೋಪವೀತ ಧಾರಣೆಯು ರತ್ನತ್ರಯಗಳ ಧಾರಣೆಯ ಸಂಕೇತವಾಗಿದ್ದು, ಜೀವನಕ್ಕೆ ಶ್ರೀರಕ್ಷೆ ಆಗಿದೆ’ ಎಂದು ಭಕ್ತರನ್ನು ಆಶೀರ್ವದಿಸಿ ಹರಸಿದರು.

ಪ್ರಾತಃಕಾಲ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಅಭೀಷ್ಠವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂರ್ವ ಪರಂಪರೆಯ ಜಿನಾಗಮೋಕ್ತ ಪೂಜಾ ವಿಧಿ-ವಿಧಾನಗಳು ಪೂಜ್ಯ ಸ್ವಸ್ತಿಶ್ರೀಗಳ ಸಾನಿಧ್ಯದಲ್ಲಿ ನೆರವೇರಿತು.

ಶ್ರೀ ಕುಂದಕುಂದ ವಿದ್ಯಾಪೀಠ ಗುರುಕುಲದ ವಿದ್ಯಾರ್ಥಿ ವೃಂದದವರು ಹಾಗೂ ಊರ ಪರವೂರ ಭಕ್ತಸಮುದಾಯದವರು ಶ್ರೀಗಳವರಿಂದ ಯಜ್ಞೋಪವೀತ ಪಡೆದು ಧನ್ಯರಾದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.