ಹೊಸನಗರ: ಮೂಕಾಂಬಿಕ ಅಭಯಾರಣ್ಯದ ಜಲಪಾತ ವೀಕ್ಷಣೆಗೆ ಅಕ್ರಮ ಪ್ರವೇಶ ನಿಷಿದ್ಧ

Written by Koushik G K

Published on:

ಹೊಸನಗರ: ತಾಲೂಕಿನ ಚಕ್ರಾ ಜಲಾಶಯದ ಸಮೀಪ, ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿಯೊಳಗೆ ಅಡಗಿರುವ ಅಪರೂಪದ ಜಲಪಾತವೊಂದು ಪ್ರಕೃತಿ ಪ್ರೇಮಿಗಳ ಕಣ್ಮನ ಸೆಳೆಯುತ್ತಿದೆ. ಆದಾಗ್ಯೂ, ಈ ಜಲಪಾತ ವೀಕ್ಷಣೆಗೆ ಅಕ್ರಮ ಪ್ರವೇಶ ನಿಷಿದ್ಧವಾಗಿದೆ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

WhatsApp Group Join Now
Telegram Group Join Now
Instagram Group Join Now

ಮಳೆಗಾಲದಲ್ಲಿ ಮಲೆನಾಡಿನ ಅನೇಕ ಜಲಪಾತಗಳು ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುವಂತಿದ್ದರೂ, ಈ ಜಲಪಾತದ ಸ್ಥಾನವು ಅಭಯಾರಣ್ಯದ ಒಳಭಾಗದಲ್ಲಿರುವುದರಿಂದ ಪ್ರವೇಶ ನಿಯಂತ್ರಣದಲ್ಲಿದೆ. ಸ್ಥಳೀಯರು “ಚಕ್ರಾ ಸುಂದರಿ” ಎಂದು ಕರೆಯುವ ಈ ಜಲಪಾತ, ಚಕ್ರಾ ಜಲಾಶಯದಿಂದ ಮೂಡೋದು. ಜಲಾಶಯದಿಂದ ಸುಮಾರು ಮೂರು ಕಿಲೋಮೀಟರ್ ದೂರದ ವರೆಗೆ ಅರಣ್ಯದೊಳಗೆ ಸಾಗಿದರೆ, ಈ ಜಲಪಾತದ ದೃಶ್ಯ ಕಣ್ಣಿಗೆ ಬೀಳುತ್ತದೆ.

ಸುಮಾರು 200 ಅಡಿ ಎತ್ತರದಲ್ಲಿ ಮೂರು ಹಂತಗಳಲ್ಲಿ ಧುಮ್ಮಿಕ್ಕುವ ಈ ಜಲಧಾರೆ, ಕೊನೆಗೆ 100 ಅಡಿ ಎತ್ತರದಿಂದ ಬೋರ್ಗೆರೆಯುವ ದೃಶ್ಯ ಆಕರ್ಷಕವಾಗಿದ್ದು, ಡ್ರೋನ್ ಮೂಲಕ ವೀಕ್ಷಿಸಿದರೆ ಶ್ವೇತವರ್ಣದ ಜಲದ ಹಾದಿ ಹಚ್ಚ ಹಸಿರಿನಲ್ಲಿ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ.

ಆದರೆ, ಈ ಪ್ರದೇಶವು ಮೂಕಾಂಬಿಕ  ಅಭಯಾರಣ್ಯ ವ್ಯಾಪ್ತಿಗೆ ಸೇರುವ ಕಾರಣದಿಂದ, ಯಾವುದೇ ರೀತಿಯ ಅಕ್ರಮ ಪ್ರವೇಶ ಅಥವಾ ಚಿತ್ರೀಕರಣ ಕಾನೂನುಬಾಹಿರವಾಗಿದೆ. ಅರಣ್ಯ ಇಲಾಖೆ ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೆಟ್ಟಿಹಳ್ಳಿ ವನ್ಯಜೀವಿಧಾಮದ ಗಡಿ ಪರಿಷ್ಕರಣೆಗೆ ಸಚಿವ ಸಂಪುಟದ ಅಸ್ತು: ಅರಣ್ಯ ಸಚಿವ ಈಶ್ವರ ಖಂಡ್ರೆ

Leave a Comment