HOSANAGARA | ಮಳೆ(ಲೆ)ನಾಡಿನ ತವರು ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ವರುಣನಾರ್ಭಟ ಮುಂದುವರೆದಿದೆ.
Rain Damage | ಹೊಸನಗರ ತಾಲೂಕಿನಲ್ಲಿ ಈವರೆಗೆ ಎಲ್ಲೆಲ್ಲಿ ಏನೇನು ಅನಾಹುತವಾಗಿದೆ ?
ಶುಕ್ರವಾರ ಬೆಳಗ್ಗೆ 8:30 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 285 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಮತ್ತೆಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
- ಮಾಸ್ತಿಕಟ್ಟೆ : 235 mm
- ಹುಲಿಕಲ್ : 230 mm
- ಮಾಣಿ : 205 mm
- ಸಾವೇಹಕ್ಲು : 182 mm
- ಯಡೂರು : 175 mm
- ಬಿದನೂರುನಗರ : 143 mm
- ಕಾರ್ಗಲ್ (ಸಾಗರ) : 124.4 mm
- ಹೊಸನಗರ : 113.2 mm
- ಹುಂಚ : 103 mm
- ಅರಸಾಳು : 70 mm
- ರಿಪ್ಪನ್‌ಪೇಟೆ : 52 mm
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಶುಕ್ರವಾರ ಬೆಳಗ್ಗೆ 8 ಗಂಟೆಗೆ 1791.50 ಅಡಿ ತಲುಪಿದ್ದು ಕಳೆದ ಬಾರಿಗಿಂತ 33 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1758.35 ಅಡಿ ದಾಖಲಾಗಿತ್ತು.