Hosanagara

Rain Damage | ಹೊಸನಗರ ತಾಲೂಕಿನಲ್ಲಿ ಈವರೆಗೆ ಎಲ್ಲೆಲ್ಲಿ ಏನೇನು ಅನಾಹುತವಾಗಿದೆ ?

HOSANAGARA | ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಒಂದಿಲ್ಲೊಂದು ಅನಾಹುತಗಳನ್ನು ಸೃಷ್ಟಿಸುತ್ತಿದೆ.

WhatsApp Group Join Now
Telegram Group Join Now
Instagram Group Join Now

ಎಲ್ಲೆಲ್ಲಿ ಏನೇನಾಗಿದೆ ?

  • ಹೊಸಹಳ್ಳಿ ಹರೀಶ ಬಿನ್ ನಾಗಪ್ಪನವರ ವಾಸದ ಮನೆ ಹಾನಿ
  • ಹರತಾಳು ಗ್ರಾಮದಲ್ಲಿ ಮನೆ ಕುಸಿತ
  • ಮಾವಿನಕೊಪ್ಪ ಗ್ರಾಮದ ಜಯಲಕ್ಷ್ಮಿ ಗೋವಿಂದಪ್ಪನವರ ಮನೆ ಕುಸಿತ
  • ಬರುವೆ ಗ್ರಾಮದ ರತ್ನಮ್ಮ ಕೋಂ ತಿಮ್ಮಪ್ಪನವರ ಮನೆ ಕುಸಿತ
  • ಕಚಿಗೆಬೈಲು ಗ್ರಾಮದ ಗಾಯಿತ್ರಿ ಕೋಂ ದೇವರಾಜ ಮನೆ ಕುಸಿತ
  • ಹರಿದ್ರಾವತಿ ಹಳೇ ಬಾಣಿಗ ಲವಪ್ಪ ಬಿನ್ ಶಿವಪ್ಪನವರ ಕೊಟ್ಟಿಗೆ ಹಾನಿ
  • ಬಾಣಿಗ ಗ್ರಾಮದ ಸರ್ಕಾರಿ ಶಾಲೆಯ ಬಾವಿ ಕುಸಿತ
  • ಬೇಳೂರು ಗ್ರಾಮದ ಬಿ.ಜಿ ಲೋಕಪ್ಪ ಗೌಡ ಬಿನ್ ಗಂಗೆಗೌಡರವರ ಮನೆ ಗೋಡೆ ಕುಸಿತ
  • ಕರಿಮನೆ ಶೇಷಪ್ಪ ಬಿನ್ ಹೂವಪ್ಪನವರ ಮನೆ ಕುಸಿತ
  • ಕಿಳಂದೂರು ಗ್ರಾಮದ ರಾಮಕೃಷ್ಣ ಬಿನ್ ತಿಮ್ಮಪ್ಪ ಗೌಡರ ಮನೆ ಸಮೀಪ ಧರೆ ಕುಸಿತ
  • ಮೂಡುಗೊಪ್ಪ ಗ್ರಾಮದ ಮಂಜುಳಾ ಕೋಂ ಜಯಕುಮಾರ್‌ ಮನೆಯ ಗೋಡೆ ಕುಸಿತ
  • ಮೂಡುಗೊಪ್ಪ ಗ್ರಾಮದ ಹಿರೇಮಠದ ನಾಗರತ್ನ ಕೋಂ ಮುತ್ತಣ್ಣನವರ ಮನೆಯ ಗೋಡೆ ಕುಸಿತ
  • ಚಿಕ್ಕಜೇನಿ ಗ್ರಾಮದ ಶೇಖರರವರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ
  • ಮಾರುತಿಪುರ ಗ್ರಾಮದ ಕೃಷ್ಣರವರ ಜಮೀನಿನ ಮೇಲೆ ಹಳ್ಳ ಹರಿದು ತೋಟ ಸಂಪೂರ್ಣ ನಾಶ
  • ಮಾರುತಿಪುರ ರಸ್ತೆ ಸಂಪೂರ್ಣ ಹಾನಿ
  • ಮುತ್ತೂರು ಗ್ರಾಮದ ಕೆರೆದಂಡೆ ಒಡೆದು ರಾಜುರವರ ಖಾತೆ ಜಮೀನಿಗೆ ಹಾನಿ
📢 Stay Updated! Join our WhatsApp Channel Now →

ಒಟ್ಟಾರೇ ಹೊಸನಗರ ತಾಲ್ಲೂಕಿನಲ್ಲಿ ಮಳೆಯ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

ಭಾರಿ ಮಳೆಯಿಂದಾಗಿ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಿಕೊಪ್ಪದಲ್ಲಿ ಧರೆಕುಸಿದು ರಸ್ತೆ ಸಂಪರ್ಕ ಕಡಿತವಾಗಿದೆ. ಸುಮಾರು 25 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇದೀಗ ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿದೆ‌.

ಪರಿಶೀಲನೆ:

ಹೊಸನಗರ ತಾಲ್ಲೂಕಿನಲ್ಲಿ ಸುಮಾರು ಅಂದಾಜು 35 ಮನೆಗಳು, 5 ಕೊಟ್ಟಿಗೆಗಳು ಗದ್ದೆ, ತೋಟ, ಸಂಪೂರ್ಣ ಹಾಳಾಗಿದ್ದು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಆಯಾಯ ಭಾಗದ ಗ್ರಾಮ ಆಡಳಿತಾಧಿಕಾರಿ ಕೌಶಿಕ್, ನವೀನ್, ಸಿದ್ದಪ್ಪ ಲೋಹಿತ್, ದೀಪು ಇನ್ನೂ ಮುಂತಾದವರು, ಜೊತೆಗೆ ರೆವಿನ್ಯೂ ಇನ್ಸ್‌ಪೆಕ್ಟರ್ ರೇಣುಕಯ್ಯ ತಾಲ್ಲೂಕು ಕಛೆರಿಯ ಸಿಬ್ಬಂದಿಗಳು ಇವರ ಜೊತೆಗೆ ಶಾಸಕ ಬೇಳೂರು ಗೋಪಾಲಕೃಷ್ಣರವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಗಗ್ಗ ಬಸವರಾಜ್ ಇನ್ನೂ ಮುಂತಾದವರು ಸ್ಥಳ ಪರಿಶೀಲಿಸಿ ನೊಂದವರಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ.

ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ತಾಲ್ಲೂಕಿನ ಎಂ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾವಿನಕೊಪ್ಪ ಗ್ರಾಮದ ಸಾಗರ ರಸ್ತೆ ನಿವಾಸಿ ಜಯಲಕ್ಷ್ಮಿ ಕೋಂ ಗೋವಿಂದಪ್ಪ ಎಂಬುವರ ಮನೆಗೋಡೆ ಕುಸಿದಿರುವುದು‌.
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>