ಹೊಸನಗರ ; ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ 20 ಸೆಂ.ಮೀ ಮಳೆ ದಾಖಲು !

Written by malnadtimes.com

Published on:

ಹೊಸನಗರ ; ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು ಭಾನುವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ 20 ಸೆಂ.ಮೀ. ಮಳೆ ದಾಖಲಾಗಿದೆ.

WhatsApp Group Join Now
Telegram Group Join Now
Instagram Group Join Now

ಮತ್ತೆಲ್ಲೆಲ್ಲಿ ಎಷ್ಟೆಷ್ಟು ?

ಉಳಿದಂತೆ ಸಾವೆಹಕ್ಲು ಹಾಗು ಹುಲಿಕಲ್ಲಿನಲ್ಲಿ 18.4 ಸೆಂ.ಮೀ., ಮಾಸ್ತಿಕಟ್ಟೆ 16, ಮಾಣಿ 13 ಮತ್ತು ಯಡೂರಿನಲ್ಲಿ 10 ಸೆಂ.ಮೀ. ಮಳೆ ದಾಖಲಾಗಿದೆ.

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಗ್ಗೆ 08 ಗಂಟೆಗೆ 1764 ಅಡಿ ತಲುಪಿದ್ದು ಜಲಾಶಯಕ್ಕೆ 10954 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

Leave a Comment