ಹೊಸನಗರ ; ಚಾಮುಂಡೇಶ್ವರಿ ಕಾಫಿ ವರ್ಕ್ಸ್ ಮಾಲೀಕ ಕೆ.ಎಂ.ನಟರಾಜ್ ನಿಧನ

Written by Mahesha Hindlemane

Updated on:

HOSANAGARA ; ಇಲ್ಲಿನ ಬಸ್ ನಿಲ್ದಾಣ ಎದುರಿನಲ್ಲಿರುವ ಚಾಮುಂಡೇಶ್ವರಿ ಕಾಫಿವರ್ಕ್ಸ್ ಮಾಲೀಕರಾದ ಕೆ.ಎಂ. ನಟರಾಜ್ (78) ರವರು ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಇವರು ಪಟ್ಟಣ ಪಂಚಾಯತಿ ಸದಸ್ಯರಾಗಿ ಜನಹಿತ ಕೆಲಸವನ್ನು ಮಾಡುವುದರ ಜೊತೆಗೆ ಹೊಸನಗರದ ತಾಲ್ಲೂಕು ಆರ್ಯವೈಶ್ಯ ಸಂಘದ ಅಧ್ಯಕ್ಷ ಸದಸ್ಯರಾಗಿ ಪಾರ್ವತಿ-ಈಶ್ವರ ಗಣಪತಿ ದೇವಸ್ಥಾನಕ್ಕೆ, ಶ್ರೀ ದುರ್ಗಾಂಬ ದೇವಸ್ಥಾನಕ್ಕೆ, ರಾಘವೇಂದ್ರ ಸ್ವಾಮಿ ಬೃಂದಾವನಕ್ಕೆ ಸಾಕಷ್ಟು ದೇಣಿಗೆ ನೀಡಿದ್ದು ಹೊಸನಗರದಲ್ಲಿರುವ ಎಲ್ಲ ಸಂಘ-ಸಂಸ್ಥೆಗಳಿಗೆ ಖಾಯಂ ಸದಸ್ಯರಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.

ಇವರು ಪತ್ನಿ ಓರ್ವ ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು, ಅಪಾರ ಬಂಧು – ಬಳಗದವರನ್ನು ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.

ಸಂತಾಪ:

ಇವರ ನಿಧನಕ್ಕೆ ಆರ್ಯವೈಶ್ಯ ಸಂಘದ ಕನಕರಾಜ್, ವಿನಾಯಕ, ರಾಮಕೃಷ್ಣಮೂರ್ತಿ ಸದಾಶಿವ ಶ್ರೇಷ್ಠಿ, ಗಾಯಿತ್ರಿ ನಾಗರಾಜ್, ಕಲಗೋಡು ರತ್ನಾಕರ್, ದತ್ತಾತ್ರೇಯ ಉಡುಪ, ಎನ್ ಶ್ರೀಧರ ಉಡುಪ, ರಾಜಮೂರ್ತಿ, ಶ್ರೀನಿವಾಸ್ ಕಾಮತ್, ಸುದೇಶ್‌ಕಾಮತ್, ಸಂತೋಷ್‌ಕಾಮತ್ ಎನ್.ಆರ್ ದೇವಾನಂದ್, ಕೆ.ಎಸ್. ಗುರುರಾಜ್, ಬಿ.ಎಸ್. ಸುರೇಶ್, ಮಾರ್ಷಲ್ ಷಾರಂ, ಸುರೇಶ್ ಕುಮಾರ್ ಇನ್ನೂ ಮುಂತಾದವರು ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Comment