ಹೊಸನಗರ ; ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಚ್ಚಿಗೆಬೈಲು ಗ್ರಾಮದ ವಾಸಿ ಧರ್ಮಪ್ಪ ಮತ್ತು ವೇದಾವತಿ ದಂಪತಿಗಳ ಪುತ್ರಿ ಕು|| ಚಾಂದಿನಿ, ಈ ಬಾರಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪ್ರಯುಕ್ತ ನಡೆಯುವ ಕರ್ತವ್ಯ ಪಥದ ಪೆರೇಡ್ ನಲ್ಲಿ ಭಾರತೀಯ ಸೈನ್ಯವನ್ನು ಪ್ರತಿನಿಧಿಸಿ ಹೆಜ್ಜೆ ಹಾಕಲಿದ್ದಾಳೆ.
ಮಗಳು ಭಾರತೀಯ ಸೈನ್ಯ ಸೇರಬೇಕೆಂಬ ತನ್ನ ತಂದೆಯ ಕನಸನ್ನು ನನಸಾಗಿಸಿದ ಚಾಂದಿನಿ, ಪ್ರಸ್ತುತ ಸಿ.ಆರ್.ಪಿ.ಎಫ್ ಯೋಧೆಯಾಗಿ ಸೇವೆ ಸಲ್ಲಿಸುತ್ತಿರುವುದು ವಿಶೇಷ.

ಪ್ರಾಥಮಿಕದಿಂದ ಪದವಿ ಶಿಕ್ಷಣದವರೆಗೂ ಸರ್ಕಾರಿ ಶಾಲೆಯಲ್ಲೇ ಅಭ್ಯಾಸ ಮಾಡಿದ್ದ ಈಕೆ, ಇದುವರೆಗೆ ಒಟ್ಟು 3 ಬಾರಿ ಕರ್ತವ್ಯ ಪಥದ ಪೆರೇಡ್ ಗೆ ಆಯ್ಕೆಯಾಗಿದ್ದು, ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಜನವರಿ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್ ನಲ್ಲಿ ಹೆಜ್ಜೆ ಹಾಕಲಿದ್ದಾಳೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.