ಮೂಡಿಗೆರೆ : ತಾಲ್ಲೂಕಿನ ಸಾರಗೋಡು-ತತ್ಕೊಳ ಮೀಸಲು ಅರಣ್ಯ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಬಂದೂಕಿನ ಖಾಲಿ ಕ್ಯಾಟ್ರೇಜ್‌ಗಳು ಪತ್ತೆಯಾಗಿವೆ.
ಕನ್ನಗದ್ದೆ ಸಂಪರ್ಕ ರಸ್ತೆ ಬದಿಯಲ್ಲಿ ಕ್ಯಾಟ್ರೆಜ್‌ಗಳು ಸಿಕ್ಕಿವೆ. ಅರಣ್ಯ ಸ್ಥಳ ಪರಿಶೀಲಿಸಿ ಕ್ಯಾಟ್ರೇಜ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇಟ್ಟಿದ್ದಾರೆ.
‘ರಸ್ತೆ ಬದಿ 50 ಕ್ಕೂ ಹೆಚ್ಚು ಖಾಲಿ ಕ್ಯಾಟ್ರೇಜ್‌ಗಳು ಸಿಕ್ಕಿವೆ. ಈ ಬಗ್ಗೆ ಪೋಲಿಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ ತಿಳಿಸಿದ್ದಾರೆ.