ವಿಶ್ವ ಶಾಂತಿಗಾಗಿ ಸೈಕಲ್ ಯಾತ್ರೆ | ಪುನೀತ್ ಅಭಿಮಾನಿಯ ವಿನೂತನ ಪ್ರಯತ್ನ, ಮುತ್ತು ಸೆಲ್ವಂಗೆ ಹೊಸನಗರದಲ್ಲಿ ಅದ್ದೂರಿ ಸ್ವಾಗತ

0 598

ಹೊಸನಗರ: ಕನ್ನಡದ ಹೆಸರಾಂತ ನಟ ಕರ್ನಾಟಕ ರತ್ನ, ದಿ|| ಡಾ.ಪುನೀತ್ ರಾಜ್‍ಕುಮಾರ್ (Dr. Puneeth Rajkumar) ಅವರ ಅಪ್ಪಟ ಅಭಿಮಾನಿ ಆಗಿರುವ ತಮಿಳನಾಡಿನ ಕೊಯಮತ್ತೂರಿನ ಮುತ್ತು ಸೆಲ್ವಂ (Mutthu Selvam) ಅವರ ವಿಶ್ವಶಾಂತಿ ಕುರಿತಾಗಿ ಕೈಗೊಂಡಿರುವ ಸೈಕಲ್ ಯಾತ್ರೆಗೆ ಇಲ್ಲಿನ ಪಟ್ಟಣ ಪಂಚಾಯತಿ ಆಡಳಿತ ಅದ್ದೂರಿ ಸ್ವಾಗತ ಕೋರಿದೆ.

ಬುಧವಾರ ಕಚೇರಿ ಮುಂಭಾಗದಲ್ಲಿ ಮುಖ್ಯಾಧಿಕಾರಿ ಮುತ್ತು ಸೆಲ್ವಂ ಅವರನ್ನು ಹೂಗುಚ್ಛ ನೀಡುವ ಮೂಲಕ ಪಟ್ಟಣದ ನಾಗರೀಕರ ಪರವಾಗಿ ಭರಮಾಡಿಕೊಂಡರು.

ಈ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಮೂಲತಃ ಕೊಯಮತ್ತೂರಿನವನಾದ ನಾನು ಈವರೆಗೂ ನಟ ಪುನೀತ್ ರಾಜ್‍ಕುಮಾರ್ ಅವರ ಯಾವುದೇ ಚಲನಚಿತ್ರ ನೋಡಿಲ್ಲ. ಆದರೆ, ಅವರು ತೆರೆಮರೆಯಲ್ಲಿ ಕೈಗೊಂಡಿದ್ದ ಅನೇಕ ಜನಪರ ಸಾಮಾಜಿಕ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿದೆ. ಅನೇಕ ಶಾಲಾ-ಕಾಲೇಜುಗಳು, ಅನಾಥಾಶ್ರಮ ಸೇರಿದಂತೆ ವಿಕಲಚೇತನರಿಗೆ ದಾರಿದೀಪವಾಗಿದ್ದ ನಟ ಪುನೀತ್ ಅವರ ಆದರ್ಶದ ಬದುಕು ಹಲವರಿಗೆ ಮಾದರಿ ಆಗುವಂತದ್ದು. ಈ ಹಿನ್ನಲೆಯಲ್ಲಿ ಅವರ ಜೀವನಾದರ್ಶ ಕುರಿತಂತೆ ಪ್ರಚುರ ಪಡಿಸುವ ಸದ್ದುದ್ದೇಶ ತಮ್ಮದಾಗಿದ್ದು, ಪುನೀತ್ ಅವರ ಪತ್ನಿ ಅಶ್ವಿನಿ ಕೊಡುಗೆಯಾಗಿ ನೀಡಿದ ಸೈಕಲ್‌ನಿಂದಲೇ ದೇಶ ಪರ್ಯಟನೆಗೆ ಮುಂದಾಗಿರುವುದಾಗಿ ಅವರು ತಿಳಿಸಿದರು.

ಒಂದು 1,111 ದಿನಗಳಲ್ಲಿ ಸೈಕಲ್ ಮೂಲಕ ದೇಶದ 34 ರಾಜ್ಯಗಳ 733 ಜಿಲ್ಲೆಗಳ ಒಟ್ಟು 34 ಸಾವಿರ ಕಿ.ಮೀ. ಪ್ರವಾಸ ಮಾಡುವ ಗುರಿ ಹೊಂದಲಾಗಿದ್ದು, 2021ರ ಡಿ.21ರಂದು ಆರಂಭಗೊಂಡ ಈ ಪ್ರಯಾಣದಲ್ಲಿ ಈಗಾಗಲೇ ದೇಶದ 15 ರಾಜ್ಯಗಳ ಒಟ್ಟು 20.250 ಕಿ.ಮೀ ಪ್ರಯಾಣಿಸಿದ್ದು, ಉಳಿದ 14,200 ಕಿ.ಮೀ ತಮ್ಮ ಸೈಕಲ್ ಪಯಣವನ್ನು ಬರುವ 2025ರ ಜ.5ರಂದು ಬೆಂಗಳೂರಿನ ಪುನೀತ್ ಸಮಾಧಿ ಎದುರು ಪೂರ್ಣಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ಅಲ್ಲದೆ, ಸೈಕಲ್ ಜಾಥದ ಜೊತೆ ಜೊತೆಯಲ್ಲಿ ಸಾರ್ವಜನಿಕರಿಗೆ ಪರಿಸರ ಕುರಿತು ಜಾಗೃತಿ ಮೂಡಿಸುವ ಕಾರ್ಯಕೈಗೊಂಡಿದ್ದು ಈವರೆಗೂ 2.16 ಲಕ್ಷ ಗಿಡಗಳನ್ನು ನೆಟ್ಟಿದ್ದು, ಮುಂದೆಯೂ ತಮ್ಮ ಪರಿಸರ ಅಭಿಯಾನ ಮುಂದುವರೆಸುವುದಾಗಿ ತಿಳಿಸಿದರು.

ಇದೇ ವೇಳೆ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮುತ್ತು ಸ್ವೆಲಂ ಅವರ ಸೈಕಲ್ ಜಾಥಾ ಯಶಸ್ಸಿಗೆ ಮಾಲಾರ್ಪಣೆಯ ಮೂಲಕ ಶುಭಕೋರಿದರು.

ಈ ಸಂದರ್ಭದಲ್ಲಿ ಪ.ಪಂ. ಸಿಬ್ಬಂದಿಗಳು, ಹಲವು ನಾಗರೀಕರು ಹಾಜರಿದ್ದರು.

Leave A Reply

Your email address will not be published.

error: Content is protected !!