ಮುಳ್ಳುಹಂದಿ ಇದ್ದ ಸುರಂಗಕ್ಕೆ ಶಿಕಾರಿ ಮಾಡಲು ನುಗ್ಗಿ ಇಬ್ಬರು ಕೂಲಿ ಕಾರ್ಮಿಕರು ಸಾವು !

0 32

ಮೂಡಿಗೆರೆ : ಮುಳ್ಳು ಹಂದಿ ಇದ್ದ ಸುರಂಗಕ್ಕೆ ಶಿಕಾರಿ ಮಾಡಲು ನುಗ್ಗಿ ಇಬ್ಬರು ಕೂಲಿಕಾರ್ಮಿಕರು ಸಾವಪ್ಪಿದ ಘಟನೆ ನಡೆದಿದೆ
ಮುಳ್ಳು ಹಂದಿ ಶಿಕಾರಿ ಮಾಡಲು ಸುರಂಗದ ಒಳಗೆ ನುಗ್ಗಿದ ಪರಿಣಾಮ ಉಸಿರಾಟಕ್ಕೆ ತೊಂದರೆಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.


ತಾಲ್ಲೂಕಿನ ಬಾಳೂರು ಹೋಬಳಿಯ ಮಾಳಿಗನಾಡು ಎಂಬಲ್ಲಿ ಈ ಘಟನೆ ನಡೆದಿದೆ. ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಾದ ತಮಿಳುನಾಡು ಮೂಲದ ವಿಜಯ್ (28) ಮತ್ತು ಶರತ್ (26) ಸಾವನ್ನಪ್ಪಿದ್ದಾರೆ.


ಕಾಳು ಮೆಣಸು ಕುಯ್ಯಲು ಬಂದಿದ್ದ ತಮಿಳುನಾಡಿನ ಕಾರ್ಮಿಕರು ಮುಳ್ಳು ಹಂದಿ ಶಿಕಾರಿ ಮಾಡಲು ಗುಡ್ಡಕ್ಕೆ ತೆರಳಿದ್ದರು ಎನ್ನಲಾಗಿದೆ. ಸುರಂಗದ ಪ್ರವೇಶ ದ್ವಾರಕೆ ಹೊಗೆ ಹಾಕಿ ಇಬ್ಬರು ಅದರ ಒಳಗೆ ನುಗ್ಗಿದ ಪರಿಣಾಮ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಗುಹೆಯೊಳಗೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.


ಬಾಳೂರು ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್, ಪೊಲೀಸರು, ಮತ್ತು ಸ್ಥಳೀಯರು ಗುಹೆಯೊಳಗೆ ನುಗ್ಗಿ ಶವಗಳನ್ನು ಹೊರತೆಗೆಯಲಾಯಿತು. ಬಾಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!