ರಿಪ್ಪನ್‌ಪೇಟೆಯಲ್ಲಿ ಮೊಳಗಿದ ಕನ್ನಡದ ಕಹಳೆ ; ವಿವಿಧ ಜಾನಪದ ತಂಡಗಳಿಂದ ಹೆಚ್ಚಿದ ಮೆರಗು

0 544

ರಿಪ್ಪನ್‌ಪೇಟೆ: ಇಲ್ಲಿನ ಕಸ್ತೂರಿ ಕನ್ನಡ ಸಂಘ ಹಾಗೂ ದಿ.ಪುನಿತ್ ರಾಜ್ ಅಭಿಮಾನಿ ಬಳಗದ ಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಿಂದ ತಾಯಿ ಭುವನೇಶ್ವರಿ ಅಲಂಕೃತ ಭಾವಚಿತ್ರದ ರಾಜಬೀದಿ ಉತ್ಸವಕ್ಕೆ ಪಿಎಸ್‌ಐ ಪ್ರವೀಣ್ ಎಸ್.ಪಿ.ಚಾಲನೆ ನೀಡಿದರು. ಭುವನೇಶ್ವರಿ ಮೆರವಣಿಗೆಯಲ್ಲಿ ಮಂಗಳೂರಿನ ಶಬರಿ ಚಂಡೆ ತಂಡ, ಅಂಕದಮನೆ ಜಾನಪದ ಕಲಾತಂಡ ಚಂಡೆವಾದನ, ಬ್ರಹ್ಮಾವರ ಕಂಗಿಲು ನೃತ್ಯ ಹಾಗೂ ಶ್ರೀ ಮಹಾಗಣಪತಿ ಚಂಡೆ ಬಳಗ ಇವರಿಂದ ಆಕರ್ಷಕ ಚಂಡೆ ವಾದನದೊಂದಿಗೆ ಪುಟಾಣಿ ಮಕ್ಕಳ ಛದ್ಮವೇಷದ ಮೆರವಣಿಗೆ ಜನಾಕರ್ಷಣೆಯೊಂದಿಗೆ ಕನ್ನಡ ಕಹಳೆ ಮೊಳಗಿತು.

ಉದ್ಘಾಟನಾ ಸಮಾರಂಭ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ಕರ್ನಾಟಕದ ವೈಭವವನ್ನು ನೆನೆದು ನಾವು ಭವಿಷ್ಯದಲ್ಲಿ ಕಾಲಿಡಬೇಕು. ಮಕ್ಕಳಲ್ಲಿ ಭಾಷಾ ಸಂಸ್ಖೃತಿ ಬೆಳಸುವ ಮೂಲಕ ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡಬೇಕು. ಎಲ್.ಕೆ.ಜಿ ಮತ್ತು ಯು.ಕೆ.ಜಿಯಿಂದ ಮಕ್ಕಳಲ್ಲಿ ಅನ್ಯಭಾಷೆಯನ್ನು ಕಲಿಸುವುದರಿಂದಾಗಿ ಮುಂದೆ ಭಾರಿ ತೊಂದರೆ ಅನುಭವಿಸುವ ಕಾಲ ದೂರವಿಲ್ಲ. ಮಾತೃಭಾಷೆಯ ಶಿಕ್ಷಣದಿಂದ ಮಕ್ಕಳನ್ನು ಉತ್ತಮ ಸುಸಂಸ್ಕೃತರನ್ನಾಗಿ ಮಾಡಲು ಸಾಧ್ಯವೆಂದ ಅವರು, ಕನ್ನಡ ನಾಡಿನಲ್ಲಿ ಹುಟ್ಟಿದರೂ ಕೂಡಾ ಕನ್ನಡ ನಾಡು ನುಡಿಯ ಬಗ್ಗೆ ನಾವುಗಳು ಜಾಗೃತರಾಗಬೇಕಾದ ಅನಿರ್ವಾಯತೆ ಎದುರಾಗಿರುವುದು ವಿಷಾದನೀಯ ಸಂಗತಿಯಾಗಿದೆ.

ಇಂದಿನ ಮುಖ್ಯಮಂತ್ರಿಗಳು ಉಡುಗೊರೆ ನೀಡುವಾಗ ಪುಸ್ತಕಗಳನ್ನು ನೀಡಿ ಎಂದಿದ್ದಾರೆ ಅದನ್ನು ನಾವು ಮಂತ್ರಿ ಮಹೋದಯರಿಗೆ ನೀಡಿದರೆ ಅವರುಗಳು ನೋಡುವ ದೃಷ್ಠಿಯೇ ಬೇರೆಯಾಗಿರುತ್ತದೆಂದು ತಮ್ಮ ಅಂತರಾಳದ ನೋವನ್ನು ಬಿಚ್ಚಿಟ್ಟ ಅವರು, ಕನ್ನಡ ನಾಡು ಸಾಹಿತ್ಯದಿಂದಷ್ಟೇ ಅಲ್ಲ ಕಲೆಯಿಂದಲೂ ಸಂವೃದ್ದವಾಗಿದ್ದು ಇಂತಹ ಸಂವೃಧ್ದ ನಾಡನ್ನು ಕನ್ನಡಿಗರಾಗಿ ಉಳಿಸಿ ಬೆಳಸುವ ಮೂಲಕ ಕನ್ನಡದ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಬೇಕಾಗಿದೆ.ಇಂದಿನ ಶಿಕ್ಷಕರು ಮಕ್ಕಳಿಗೆ ಸೃಜನ್ಮಾನಕ ಶಿಕ್ಷಣ ನೀಡುವಂತೆ ಕರೆ ನೀಡಿದರು.

ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಉಲ್ಲಾಸ ತೆಂಕೋಲ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ನಾಡಕಛೇರಿಯ ಉಪತಹಶೀಲ್ದಾರ್ ಹುಚ್ಚರಾಯಪ್ಪ, ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ, ಜೆಡಿಎಸ್ ರಾಜ್ಯ ಮುಖಂಡ ಆರ್.ಎ.ಚಾಬುಸಾಬ್, ಕಾಂಗ್ರೆಸ್ ಮುಖಂಡ ಅಮೀರ್ ಹಂಜಾ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ, ಜಿ.ಆರ್.ಕೆ.ಮೂರ್ತಿ ಪ್ರತಿಷ್ಠಾನದ ಸಂಸ್ಥಾಪಕ ಜಿ.ಆರ್.ಗೋಪಾಲಕೃಷ್ಣ, ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಭೇದುಲ್ಲಾ ಷರೀಫ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಹೊಸನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ಅಮೃತ ಗ್ರಾಮ ಪಂಚಾಯ್ತಿ ಸದಸ್ಯ ಸಚಿನ್‌ಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ. ನರಸಿಂಹ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಬಿ.ಮಂಜಪ್ಪ, ಮೆಣಸೆ ಆನಂದ, ಯೋಗೇಂದ್ರಗೌಡ, ಜಾನಪದ ಸಾಂಸ್ಕೃತಿಕ ವೇದಿಕೆ   ಮಂಜುನಾಥ ಕಾಮತ್, ಆರ್.ರಾಘವೇಂದ್ರ, ಗ್ರಾ.ಪಂ ಸದಸ್ಯೆ ಮಂಜುಳಾ , ಮಹಾಲಕ್ಷ್ಮಿ, ಎನ್.ಚಂದ್ರೇಶ್, ಸುಂದರೇಶ್, ವನಮಾಲ, ಡಿ.ಈ.ಮಧುಸೂದನ್, ವಿನೋಧ, ದಾನಮ್ಮ, ಹೆಚ್.ಎಸ್.ಗಣಪತಿ, ಜಿ.ಡಿ.ಮಲ್ಲಿಕಾರ್ಜುನ, ಕೆ.ಪ್ರಕಾಶ್ ಪಾಲೇಕರ್, ವೇದಾವತಿ, ಸರಾಬಿ, ಆಸಿಫ್, ನಿರುಪಮ, ನಿರೂಪ್, ಅಶ್ವಿನಿ, ಆರ್.ಡಿ.ಶೀಲಾ, ಸೀಮಾ, ಲೇಖನ, ಸ್ವಾತಿ, ಶೈಲಾಪ್ರಭು, ಹೆಚ್.ಎನ್.ಉಮೇಶ್, ರಮೇಶ್‌ ಫ್ಯಾನ್ಸಿ, ಬಿ.ಎಸ್.ಎನ್.ಎಲ್. ಶ್ರೀಧರ, ರಾಘವೇಂದ್ರ ದೊಡ್ಡಿನಕೊಪ್ಪ, ರಾಘು ಇನ್ನಿತರರು ಪಾಲ್ಗೊಂಡಿದರು.

Leave A Reply

Your email address will not be published.

error: Content is protected !!