ರೈಲುಗಳಲ್ಲಿ ದಹನಕಾರಿ ವಸ್ತುಗಳನ್ನು ಸಾಗಿಸದಂತೆ ಜಾಗೃತಿ ಕಾರ್ಯಕ್ರಮ

0 43

ಶಿವಮೊಗ್ಗ: ದೀಪಾವಳಿ ಹಬ್ಬ, ಹರಿದಿನಗಳು ಮತ್ತು ಇತ್ತೀಚಿನ ಅಗ್ನಿ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮಂಡಳಿ, ನವದೆಹಲಿ ಮತ್ತು ಆರ್‍ ಪಿಎಫ್ ಹೆಡ್ ಕ್ವಾರ್ಟರ್ಸ್‍ ನ ನಿರ್ದೇಶನದಂತೆ ದಹಿಸುವ ವಸ್ತುಗಳನ್ನು ಸಾಗಿಸುವುದರ ವಿರುದ್ಧ ವಿಶೇಷ ಡ್ರೈವ್ ಮತ್ತು ಸಾಮಾನ್ಯ ಜಾಗೃತಿಯನ್ನು ಇಂದು ಶಿವಮೊಗ್ಗ ರೈಲ್ವೇ ಸ್ಟೇಷನ್‍ನಲ್ಲಿ ಪೋಸ್ಟ್ ಕಮಾಂಡರ್, ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌, ಶಿವಮೊಗ್ಗ ಇವರ ವತಿಯಿಂದ ಆಯೋಜಿಸಲಾಗಿದೆ.
ರೈಲುಗಳಲ್ಲಿ ಅಥವಾ ರೈಲ್ವೇ ಆವರಣದಲ್ಲಿ ಯಾವುದೇ ದಹನಕಾರಿ ವಸ್ತುಗಳು, ಪಟಾಕಿಗಳನ್ನು ಕೊಂಡೊಯ್ಯದಂತೆ ತಿಳಿವಳಿಕೆ ಮೂಡಿಸುವ ಮೂಲಕ ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಪ್ರಯಾಣಿಕರಿಗೆ ಅರಿವು ಮೂಡಿಸಲಾಯಿತು.


ರೈಲುಗಳಲ್ಲಿ ಪಟಾಕಿ, ಸಿಲಿಂಡರ್ ಗ್ಯಾಸ್ ಇತರೆ ದಹನಕಾರಿ ವಸ್ತುಗಳನ್ನು ಸಾಗಿಸುವುದು ಕಂಡು ಬಂದರೆ ರೈಲ್ವೇ ಕಾಯ್ದೆ 164 ವಿಧಿಯ ಪ್ರಕಾರ 3 ವರ್ಷ ಜೈಲು ಶಿಕ್ಷೆ ಅಥವಾ ರೂ.1000 ದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ವೇಳೆ ಆರ್‍ ಪಿಎಫ್ ಇನ್ಸ್‌ಪೆಕ್ಟರ್ ಬಿ ಎನ್ ಕುಬೇರಪ್ಪ, ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಗಾಂವ್ಕರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave A Reply

Your email address will not be published.

error: Content is protected !!