ಶಾಸಕರಾದವರು ಗಂಭೀರತೆಯಿಂದ ಇರಬೇಕು ವಿದೂಷಕನಾಗಬಾರದು ; ಉಮೇಶ್ ಕಂಚುಗಾರ್

0 546

ಹೊಸನಗರ: ಶಾಸಕರು ಜನರೊಂದಿಗೆ, ಮಾಧ್ಯಮದೊಂದಿಗೆ ಮಾತನಾಡುವಾಗ ಗಂಭೀರತೆಯಿಂದ ಇರಬೇಕು ಹಾಗೂ ಯಾರ ವಿರುದ್ಧ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು‌. ಇಡೀ ರಾಜ್ಯದ ಜನರು ನಿಮ್ಮ ಮಾತನ್ನು ಆಲಿಸುತ್ತಿರುತ್ತಾರೆ ಅದನ್ನು ಬಿಟ್ಟು ಯಕ್ಷಗಾನದಲ್ಲಿ ಬರುವ ವಿದೂಷಕನಾಗಬಾರದು (ವಿದೂಷಕ ಬಂದಾಗ ಜನರು ನಗುತ್ತಾರೆ) ಎಂದು ಬಿಜೆಪಿಯ ಹಿರಿಯ ಮುಖಂಡ ಉಮೇಶ್ ಕಂಚುಗಾರ್‌ರವರು ಶಾಸಕ ಬೇಳೂರು ಗೋಪಾಲಕೃಷ್ಣರವರಿಗೆ ಪರೋಕ್ಷವಾಗಿ ಎಚ್ಚರಿಸಿದರು.

ಪಟ್ಟಣದ ಬಿಜೆಪಿ ಕಚೇರಿಯ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರವರ ವಿರುದ್ಧ ಶಿವಮೊಗ್ಗದಲ್ಲಿ ಏಕವಚನದಲ್ಲಿ ಬೈದು ನಂತರ ಹೊಸನಗರದಲ್ಲಿ ಶಂಕುಸ್ಥಾಪನೆ ಕಾಮಗಾರಿಯಲ್ಲಿ ಬಸವಣ್ಣ ಇದ್ದಂತೆ ಎಂಬ ಹೊಗಳಿಕೆಯ ಮಾತಿನ ಮರ್ಮ ಎಲ್ಲರಿಗೂ ಅರಿವಾಗುತ್ತದೆ. ಅದು ಅಲ್ಲದೇ ಇವರಿಗಿಂತ ಹಿರಿಯವರಿಗೆ ಏಕವಚನದಲ್ಲಿ ಬೈಯುವುದು ಇವರ ಕೆಳ ಮಟ್ಟದ ಮಾತಿನಿಂದ ಇಡೀ ಕರ್ನಾಟಕ ರಾಜ್ಯದ ಜನರು ಇವರ ಮಾತನ್ನು ಆಲಿಸುತ್ತಿದ್ದಾರೆ ಇದು ಇವರಿಗೆ ಶೋಭೆ ತರುವುದಿಲ್ಲ ಇವರ ಮಾತಿನಲ್ಲಿ ಹಿಡಿತವಿರಲಿ ಎಂದರು.

ಶಂಕುಸ್ಥಾಪನೆಯಾದ ರಸ್ತೆಗೆ ಪುನಃ ಉದ್ಘಾಟನೆ: ಗಣಪತಿ ಬಿಳಗೋಡು
ರಾಷ್ಟ್ರೀಯ ಹೆದ್ದಾರಿ 766ಸಿ ಬೈಂದೂರಿನಿಂದ ರಾಣೆಬೆನ್ನೂರು ಹೋಗುವ ರಸ್ತೆಯ ಆಯ್ದ ಭಾಗಗಳಲ್ಲಿ (ಕಿ.ಮೀ 24.40 ರಿಂದ 27.27,40,50 ರಿಂದ 49.90, 84.30 ರಿಂದ 88.20, 105.25 ರಿಂದ 112.71, 161.55 ರಿಂದ 166.35, 174.12ರಿಂದ 176,12, 186.55 ರಿಂದ 191.90)ವರೆಗೆ ಒಟ್ಟು 27.80 ಕಿ.ಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿ ದಿನಾಂಕ: 14-02-2022ರಂದು ಎಸ್.ಎಫ್.ಸಿ ಸಭೆಯಲ್ಲಿ 218.93 ಕೋಟಿ ರೂ.ಗಳಿಗೆ ಕೇಂದ್ರ ಭೂ ಸಾರಿಗೆ ಮಂತ್ರಾಲಯದಿಂದ ಮಂಜೂರು ಮಾಡಿಸಿದ್ದು ಈ ಕಾಮಗಾರಿಯು ಶಿವಮೊಗ್ಗ ಹಾಗೂ ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ಬರುತ್ತಿದ್ದು ದಿನಾಂಕ: 28-02-2022ರಂದು ಸಂಜೆ ಮಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಭೂ ಸಾರಿಗೆ ಸಚಿವರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮಂತ್ರಿಗಳ ಸಮ್ಮುಖದಲ್ಲಿ ಕಾಮಾಗಾರಿ ಶಂಕುಸ್ಥಾಪನೆ ನೇರವೇರಿಸಲಾಗಿದೆ ನಂತರ ಟೆಂಡರ್ ಮೂಲಕ ಉದಯ್, ಶಿವಕುಮಾರ್ ದಾವಣಗೆರೆ ಇವರಿಗೆ ಕಾರ್ಯದೇಶ ನೀಡಿ ಸೆಪ್ಟಂಬರ್ 2022ರಲ್ಲಿ ಕಾಮಾಗಾರಿ ಪ್ರಾರಂಭಗೊಂಡಿರುತ್ತದೆ ಇದು ಕೇಂದ್ರ ಸರ್ಕಾರದ ರಸ್ತೆ ಕಾಮಗಾರಿಯಾಗಿದ್ದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರವರು ಮಂಗಳವಾರ ಹೊಸನಗರದ ಪಿಡ್ಲ್ಯೂಡಿ ಕಛೇರಿಯಲ್ಲಿ ಕಾಮಗಾರಿ ನಡೆಯುತ್ತಿರುವಾಗ ಪುನಃ ಶಂಕುಸ್ಥಾಪನೆ ನಡೆಸಿರುವುದು ಹಾಸ್ಯಾಸ್ಪತವಾಗಿದೆ. ಇವರು ರಾಜ್ಯ ಸರ್ಕಾರದಿಂದ ಕಾಮಗಾರಿ ಶಂಕುಸ್ಥಾಪನೆ ಮಾಡಲಿ ಅದನ್ನು ಬಿಟ್ಟು ಕೇಂದ್ರ ಸರ್ಕಾರದ ಕಾಮಗಾರಿಗಳನ್ನು ಅದು ಅಲ್ಲದೇ ಶಂಕುಸ್ಥಾಪನೆಯಾದ ಕಾಮಗಾರಿ ಪುನಃ ಶಂಕುಸ್ಥಾಪನೆ ಮಾಡಿದ್ದಾರೆ. ಮುಂದಿನ ದಿನದಲ್ಲಿ ಇವರ ವಿರುದ್ಧ ಹೋರಾಟ ಅನಿವಾರ್ಯವೆಂದರು.

ಹೊಸನಗರದಲ್ಲಿ ಬೇಳೂರು ಗೋಪಾಲಕೃಷ್ಣರವರ ತಂಡ ಜನರನ್ನು ಹಿಂಸಿಸುತ್ತಿದೆ: ಸುರೇಶ್ ಸ್ವಾಮಿರಾವ್
ಹೊಸನಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣರವರ ತಂಡ ಇವರ ಅಭಿಮಾನಿಗಳನ್ನು ಬಿಟ್ಟು ಬೇರೆ ಎಲ್ಲರನ್ನು ಹಿಂಸಿಸುತ್ತಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್‌ ಸ್ವಾಮಿರಾವ್‌ರವರು ಹೇಳಿದರು.

ಹೊಸನಗರದ ಶಾಸಕರ ಮಾದರಿ ಶಾಲೆಯಿಂದ ಜಯನಗರ ಮಾರ್ಗವಾಗಿ 3.9 ಕಿಮೀ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡುತ್ತಿರುವ ಶಾಸಕ ಬೇಳೂರು ಗೋಪಾಲಕೃಷ್ಣ.

ಬೇಳೂರು ಗೋಪಾಲಕೃಷ್ಣರವರು ಮೂರು ಬಾರಿ ಶಾಸಕರಾಗಿದ್ದರೂ ಇವರಿಗೆ ಇನ್ನೂ ತಿಳುವಣಿಕೆ ಬಂದಿಲ್ಲ ಇವರ ಜೊತೆಗಿರುವವರು ಸ್ವಲ್ಪವೂ ತಿಳುವಳಿಕೆ ಜ್ಞಾನವಿಲ್ಲದವರು ಇವರಿಗೆ ಹಿಂದಿನಿಂದಲೂ ‘ಗುದ್ದಲಿ ಗೋಪಾಲ’ನೆಂದು ಬಿರುದು ಬಂದಿದ್ದು ಇವರ ಕಾರಿನಲ್ಲಿ ಗುದ್ದಲಿ ಜೊತೆಗೆ ಇಟ್ಟುಕೊಂಡು ಹೋಗುತ್ತಾರೆ. ಯಾವುದೇ ಕಾಮಗಾರಿಯಾದರೂ ಸರಿಯೇ ಗುದ್ದಲಿ ಪೂಜೆ ಮಾಡುವುದೊಂದೆ ಇವರ ಕಾಯಕ ಎಂದರು.

ಮರಳು ಮಾಫಿಯಾ ದಂಧೆೆ ಬಲುಜೋರು:

ಹೊಸನಗರ ತಾಲ್ಲೂಕಿನಲ್ಲಿ ಮರಳು ಮಾಫಿಯಾ ದಂಧೆ ಬಲು ಜೋರಾಗಿ ನಡೆಯುತ್ತಿದ್ದು ಶಾಸಕರ ಬೆಂಬಲಿಗರು ಎಷ್ಟು ಬೇಕಾದರೂ ಮರಳು ಮಾಫಿಯಾ ನಡೆಸಬಹುದು ಆದರೆ ಇವರ ವಿರುದ್ಧ ಇರುವವರು ಲೈಸನ್ಸ್ ಪಡೆದು ಮರಳು ದಂಧೆ ನಡೆಸಿದರೆ ಅವರ ಗಾಡಿಯನ್ನು ಹಿಡಿಸುವ ಕಾರ್ಯ ನಡೆಸುತ್ತಿದ್ದಾರೆ. ಇದು ಹೆಚ್ಚು ದಿನ ನಡೆಯದು. ಲಾರಿ ಮಾಲೀಕರು ಈಗಾಗಲೇ ಪರದಾಟ ನಡೆಸುತ್ತಿದ್ದು ಮುಂದಿನ ದಿನದಲ್ಲಿ ಕೂಲಿ ಕಾರ್ಮಿಕರು ಲಾರಿ ಮಾಲೀಕರು ದಂಧೆ ಏಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವಿ. ಮಲ್ಲಿಕಾರ್ಜುನ, ಎನ್.ಆರ್. ದೇವಾನಂದ್, ಗಣಪತಿ ಬಿಳಗೋಡು, ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್, ಮನೋಧರ, ಸಂತೋಷ ಇನ್ನೂ ಮುಂತಾದವರು ಉಪಸ್ಥಿತರಿದ್ದು ತಮಗೆ ಆದ ನೋವಿನ ಅನುಭವವನ್ನು ಹೇಳಿಕೊಂಡರು.

Leave A Reply

Your email address will not be published.

error: Content is protected !!