ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಅಗತ್ಯ

0 37

ರಿಪ್ಪನ್‌ಪೇಟೆ: ಮಕ್ಕಳಿಗೆ ಪರಿಸರದ ಸಂರಕ್ಷಣೆ ಬಗ್ಗೆ ಅರಿವನ್ನು ಮೂಡಿಸುವ ಮೂಲಕ ನಮ್ಮ ಮನೆ ಮತ್ತು ಶಾಲೆಯ ಸುತ್ತ ಗಿಡ-ಮರಗಳನ್ನು ಬೆಳೆಸಿಕೊಂಡು ಸ್ವಚ್ಚತೆಯೊಂದಿಗೆ ಪ್ರಕೃತಿಯನ್ನು ಮುಂದಿನ ಪೀಳಿಗಗೆ ಪರಿಚಯಿಸುವ ಕಾರ್ಯ ಮಾಡಬೇಕಾಗಿದೆ ಎಂದು ಚೋರಡಿ ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಮುರುಘಾರಾಜೇಂದ್ರ ಮಠದ ಎಸ್.ಜೆ.ಜಿ.ಆರ್.ಪ್ರೌಢಶಾಲೆ ಸಂಸ್ಕೃತ ಪಾಠಶಾಲೆ ಮತ್ತು ಬಿಎಡ್ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಲಾದ `ವಿಶ್ವಪರಿಸರ ದಿನಾಚರಣೆ’ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್.ಜೆ.ಜಿ.ವಿದ್ಯಾಪೀಠದ ನಿರ್ದೇಶಕರಾದ ಎಲ್.ವೈ.ದಾನೇಶಪ್ಪಗೌಡ್ರು,ಕಾಲೇಜ್ ಪ್ರಾಚಾರ್ಯರು ಎಸ್.ಜೆ.ಜಿ.ಪ್ರೌಢಶಾಲೆಯ ಮುಖ್ಯೋಪಾದ್ಯಾಯರು ಮತ್ತು ಸಂಸ್ಕೃತ ಪಾಠಶಾಲೆಯ ಶಿಕ್ಷಕ ಸಮೂಹ ಸಿಬ್ಬಂದಿವರ್ಗ ಹಾಗೂ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!