Hosanagara | ಯಾವುದೇ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಒಗ್ಗಟ್ಟಿನಿಂದ ಕನ್ನಡ ರಾಜ್ಯೋತ್ಸವ ಆಚರಿಸಬೇಕು ; ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ

0 229

ಹೊಸನಗರ: ಕನ್ನಡ ದಿನವಾದ ನವೆಂಬರ್ 1 ರಂದು ನಾಡಿನ ಸಮಸ್ತ ಜನತೆ ಯಾವುದೇ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಒಗ್ಗಟ್ಟಿನಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ ಮತ್ತು ಆಚರಿಸಬೇಕು ಎಂದು ಹೊಸನಗರದ ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಹೇಳಿದರು.

ಹೊಸನಗರದ ನೆಹರು ಮೈದಾನದಲ್ಲಿ ವಿವಿಧ ಸಂಘ-ಸಂಸ್ಥೆ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ ಪಟ್ಟಣ ಪಂಚಾಯತಿ ಹಾಗೂ ನಾಡ ಹಬ್ಬಗಳ ಸಂಯುಕ್ತ ಆಶ್ರಯದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ನಮ್ಮ ಕನ್ನಡ ನಾಡು ಶ್ರೀ ಗಂಧದ ಬೀಡು, ಕರುನಾಡು ಕನ್ನಡಾಂಬೆಯ ನಾಡು ಎಂದೆಲ್ಲಾ ಹೆಸರುಗಳಿಂದ ಕರೆಯಲ್ಪಡುತ್ತದೆ. ಹಚ್ಚ ಹಸುರಿನ ಸುಂದರ ಬೆಟ್ಟ ಗುಡ್ಡಗಳು ಜುಳು-ಜುಳು ಹರಿಯುವ ನದಿಗಳು ಮತ್ತು ಸಾಧು ಸಂತರು, ದಾಸರು, ಶಿವಶರಣರು ಹಾಗೂ ಕವಿಗಳಿಂದ ಕಂಗೊಳಿಸುತ್ತಿರುವ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಅಥವಾ ಕನ್ನಡದ ದಿನ ಎಂದು ಆಚರಿಸುತ್ತೇವೆ. ಇದನ್ನು ಕರ್ನಾಟಕ ರಚನೆಯ ದಿನವೆಂದು ಕರೆಯಲಾಗುತ್ತದೆ. 1956 ರಲ್ಲಿ ಭಾರತದ ಎಲ್ಲ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು. ಆಲೂರು ವೆಂಕಟರಾವ್‌ರವರು 1905 ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ 1950 ರಲ್ಲಿ ಭಾರತ ದೇಶವು ಗಣರಾಜ್ಯವಾಯಿತು ನಿರ್ಧಿಷ್ಟ ಪ್ರದೇಶಗಳಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳು ರಚನೆಯಾದವು, ಅದರಲ್ಲಿ ಮೈಸೂರು ರಾಜ್ಯವು ಒಂದು. ನವೆಂಬರ್ 1 1956 ರಂದು ಮೈಸೂರು ಸಂಸ್ಥಾನವು ಹಿಂದಿನ ಮೈಸೂರು ಸಂಸ್ಥಾನದ ಬಹುತೇಕ ಪ್ರದೇಶಗಳನ್ನು ಒಳಗೊಂಡಿತ್ತು‌. ಉತ್ತರ ಕರ್ನಾಟಕದ ಜನರು ಮೈಸೂರು ಎಂಬ ಹೆಸರನ್ನು ಉಳಿಸಿಕೊಳ್ಳಲು ಒಲವು ತೋರಲಿಲ್ಲ ಏಕೆಂದರೆ ಇದು ಹಿಂದಿನ ಸಂಸ್ಥಾನದ ಮತ್ತು ಹೊಸ ರಾಜ್ಯದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಈ ತರ್ಕಕ್ಕೆ ಅನುಗುಣವಾಗಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಹೆಸರನ್ನು ನವೆಂಬರ್ 1 1973 ರಲ್ಲಿ ಬದಲಾಯಿಸಲಾಯಿತು. ಕರ್ನಾಟಕ ಏಕೀಕರಣಕ್ಕೆ ಕೀರ್ತಿ ತಂದ ಇತರೆ ವ್ಯಕ್ತಿಗಳಲ್ಲಿ ಕೆ. ಶಿವರಾಮ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್ ಕೃಷ್ಣರಾವ್ ಮತ್ತು ಬಿ.ಎಂ ಶ್ರೀ ಕಂಠಯ್ಯ ಮುಂತಾದವರ ಕೊಡಿಗೆ ನೀಡಿದ್ದು ಇವರೆಲ್ಲರ ಪರಿಶ್ರಮದಿಂದ ಇಂದು ನಮ್ಮ ಕನ್ನಡ ಭಾಷೆ ಉಳಿದಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ನಾಡಗೀತೆ ಕನ್ನಡ ಗೀತೆ ಹಾಗೂ ಸರ್ಕಾರಿ ಶಾಲೆ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಂದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.


ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿ ಕೃಷ್ಣಮೂರ್ತಿ, ದೈಹಿಕ ಪರೀವಿಕ್ಷಕರಾದ ಬಾಲಚಂದ್ರರಾವ್, ನೌಕರರ ಸಂಘದ ಅಧ್ಯಕ್ಷರಾದ ಬಸವಣ್ಯಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತ.ಮ.ನರಸಿಂಹ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಪ್ರಕಾಶ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಾರುತಿ, ಪಟ್ಟಣ ಪಂಚಾಯತಿ ಆರೋಗ್ಯಾಧಿಕಾರಿ ಪ್ರಶಾಂತ್, ಶಿರಾಸ್ಥೆದಾರ್ ಸುದೇಂದ್ರಕುಮಾರ್, ಕಟ್ಟೆ ಮಂಜುನಾಥ್, ಶಿರಾಸ್ಥೆದಾರ್ ಚಿರಾಗ್, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ವರ್ತಕರ ಸಮಗದ ಅಧ್ಯಕ್ಷರಾದ ವಿಜೇಂದ್ರ ಶೇಟ್, ಧನಂಜಯ, ಸುಹಾಸ್, ರಾಜುಶೆಟ್ಟಿ, ರೆವಿನ್ಯೂ ಇನ್ಸ್‌ಪೆಕ್ಟರ್ ರೇಣುಕಯ್ಯ,ಗ್ರಾಮ ಲೆಕ್ಕಾಧಿಕಾರಿ ಕೌಶಿಕ್, ನವೀನ್, ಸಿದ್ದಪ್ಪ, ಲೋಹಿತ್, ಪಟ್ಟಣ ಪಂಚಾಯತಿಯ ಎಲ್ಲ ಸದಸ್ಯರುಗಳು ಸಿಬ್ಬಂದಿಗಳು ತಾಲ್ಲೂಕು ಆಡಳಿತದ ಎಲ್ಲ ಸಿಬ್ಬಂದಿಗಳು, ತಾಲ್ಲೂಕು ಪಂಚಾಯತಿಯ ಸಿಬ್ಬಂದಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!