Ripponpet | ಏ. 17-19ರ ವರೆಗೆ ಶಿಲಾಮಯ ನೂತನ ಕಟ್ಟಡದಲ್ಲಿ ಚೌಡೇಶ್ವರಿ ದೇವಿಯ ಪುನರ್ ಪ್ರತಿಷ್ಟಾಪನಾ ಮಹೋತ್ಸವ

0 258

ರಿಪ್ಪನ್‌ಪೇಟೆ: ಇಲ್ಲಿನ ಬರುವೆ ಗ್ರಾಮದಲ್ಲಿನ ಶ್ರೀಚೌಡೇಶ್ವರಿ ದೇವಸ್ಥಾನ ಶಿಲಾಮಯ ದೇವಸ್ಥಾನವಾಗಿ ಜೀರ್ಣೋದ್ದಾರಗೊಳಿಸಲಾಗಿದ್ದು ಇದೇ ಏಪ್ರಿಲ್ 17 ರಿಂದ 19ರ ವರೆಗೆ ಜೀರ್ಣೋದ್ದಾರ ಅಷ್ಟಬಂಧ ಸಹಿತ ಪುನರ್ ಸಪರಿವಾರ ಸಹಿತ ಚೌಡೇಶ್ವರಿ ದೇವಿಯ ಮತ್ತು ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮವು ಶಿವಮೊಗ್ಗದ ಶ್ರೀವಸಂತಭಟ್ಟರಯ ಮತ್ತು ಸಂಗಡಿಗರ ಪೌರೋಹಿತದಲ್ಲಿ ಆಯೋಜಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಸುರೇಶ ತಿಳಿಸಿದ್ದಾರೆ.

ಏಪ್ರಿಲ್ 17 ರಂದು ಬೆಳಗ್ಗೆ 9.30 ಕ್ಕೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ದೇವನಂದಿ ಋತ್ವಗ್ವರ್ಣನೆ, ಬಿಂಬಶುದ್ದಿ, ಬಿಂಬ ಜಲಾಧಿವಾಸ ಪೂಜೆ, ಸಂಜೆ 6 ಗಂಟೆಯಿಂದ ಪ್ರಾಸಾದ ಶುದ್ದಿ, ವಾಸ್ತು ರಾಕ್ಷೋಘ್ನ ಹೋಮ, ಪೂಜಾಬಲಿ, ಬಿಂಬ ಜಲೋದ್ದಾರ, ಬಿಂಬ ಶುದ್ಧಿ ಸ್ನಪನ, ಶಯ್ಯಾಧಿವಾಸ ತತ್ವ ಹೋಮ, ಪ್ರತಿಷ್ಠಂಗ ಹೋಮಾದಿಗಳು.

ಏಪ್ರಿಲ್ 18 ರಂದು ಗುರುವಾರ ಬೆಳಗ್ಗೆ 11:35ಕ್ಕೆ ಪರಿವಾರ ದೇವತಾ ಸಹಿತ ಚೌಡೇಶ್ವರಿ ಪ್ರತಿಷ್ಟೆ ಮತ್ತು ಶಿಖರ ಪ್ರತಿಷ್ಠೇ ಪೂಜಾದಿಗಳು. ಸಂಜೆ 6:00 ಗಂಟೆ ಮಂಡಲ ರಚನೆ.108 ಪರಿಕಲಶದ ಸಹಿತ ಬ್ರಹ್ಮ ಕಲಶ ಸ್ಥಾಪನೆ. ಪೂಜಾದಿಗಳು ನಾಗನ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಪೂಜೆ.

ಏಪ್ರಿಲ್ 19 ರಂದು ಬೆಳಗ್ಗೆ ಶುಕ್ರವಾರ ಬೆಳಗ್ಗೆ ಚಂಡಿಕಾ ಹೋಮ, ಕಲಾತತ್ವ ಹೋಮಾದಿಗಳು ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಮಹಾಪೂಜೆ ಮಧ್ಯಾಹ್ನ 12:30ಕ್ಕೆ ಚಂಡಿಕಾ ಹೋಮದ ಪೂರ್ನಾಹುತಿ ತೀರ್ಥಪ್ರಸಾದ ವಿನಿಯೋಗ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಸುರೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 18 ರಂದು ಶ್ರೀ ರಾಮ ವಸಂತ ನವರಾತ್ರಿ
ರಿಪ್ಪನ್‌ಪೇಟೆ: ಇಲ್ಲಿನ ಬ್ರಾಹ್ಮಣ ಸಂಘದವರು ಏಪ್ರಿಲ್ 18 ರಂದು ಗುರುವಾರ ಶ್ರೀರಾಮಮಂದಿರಲ್ಲಿ “ಶ್ರೀರಾಮವಸಂತ ನವರಾತ್ರಿ’’ ಆಯೋಜಿಸಿದ್ದಾರೆ.

ಈ ಕಾರ್ಯಕ್ರಮದ ಅಂಗವಾಗಿ ಶ್ರೀರಾಮದೇವರ ಸನ್ನಿಧಿಯಲ್ಲಿ ಶ್ರೀಸತ್ಯನಾರಾಯಣ ವ್ರತ ಏರ್ಪಡಿಸಲಾಗಿದ್ದು ಈ ಧಾರ್ಮಿಕ ಕಾರ್ಯದ ನಂತರ ತೀರ್ಥ ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ಸಹ ಜರುಗಲಿದೆ ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಸುರೇಶ ಹೆಚ್.ಪಿ.ತಿಳಿಸಿದರು.

Leave A Reply

Your email address will not be published.

error: Content is protected !!