ಕೃಷಿ ಹೊಂಡಕ್ಕೆ ಬಿದ್ದು ಕಾಡುಕೋಣ ಸಾವು !

0 250

ಸೊರಬ : ಜಮೀನಿನ ಕೃಷಿ ಹೊಂಡದಲ್ಲಿ ಕಾಡು ಕೋಣ ಬಿದ್ದು ಮೃತವಾದ ಘಟನೆ ತಾಲೂಕಿನ ಅಂದವಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂದವಳ್ಳಿ ಗ್ರಾಮದ ಸರ್ವೆ ನಂ. 25ರ ರೇಣುಕಮ್ಮ ಕೃಷ್ಣಪ್ಪ ಅವರ ಜಮೀನಿನ ಕೃಷಿ ಹೊಂಡದಲ್ಲಿ ಗುರುವಾರ ರಾತ್ರಿ ವೇಳೆ ನೀರು ಕುಡಿಯಲು ಬಂದ ಸಂದರ್ಭದಲ್ಲಿ ಕಾಡು ಕೋಣ ಮೃತಪಟ್ಟ ಘಟನೆ ಸಂಭವಿಸಿರಬಹುದೆಂದು ಊಹಿಸಲಾಗಿದೆ.

ಮೃತಪಟ್ಟ ಕಾಡುಕೋಣಕ್ಕೆ ಸುಮಾರು 6 ವರ್ಷ ಇರಬಹುದೆಂದು ಮತ್ತು ಒಂದೂವರೆ ಟನ್ ತೂಕ ಇದೆ ಎಂದು ಅಧಿಕಾರಿಗಳು ತಿಳಿಸಿದ್ದು, ಕೃಷಿ ಚಟುವಟಿಕೆಗಾಗಿ ಸಂಗ್ರಹಿಸಿದ್ದ ಕೃಷಿ ಹೊಂಡದಲ್ಲಿ 10 ಅಡಿ ಆಳದ ನೀರು ಇದ್ದ ಕಾರಣ ಆಯತಪ್ಪಿ ನೀರು ಪಾಲಾಗಿ ಮೃತಪಟ್ಟಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿದ್ದಾರೆ.

ಶುಕ್ರವಾರ ಬೆಳಿಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಜೆಸಿಬಿ ಯಂತ್ರದ ಮೂಲಕ ಮೃತ ಕಾಡುಕೋಣವನ್ನು ಕೃಷಿ ಹೊಂಡದಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂದವಳ್ಳಿ ಗ್ರಾಮದ ಕಾಡಿನಲ್ಲಿ ಹೂತು ಹಾಕಲಾಯಿತು.

ಈ ಸಂದರ್ಭದಲ್ಲಿ ಡಿಸಿಎಫ್ ಸಂತೋಷ್ ಕೆಂಚಪ್ಪ, ಎಸಿಎಫ್ ರವಿಕುಮಾರ್ ಮೊದಲಾದವರಿದ್ದರು.

Leave A Reply

Your email address will not be published.

error: Content is protected !!