ನೀತಿ ಸಂಹಿತೆ ಜಾರಿ, ರಾಜಕೀಯ ಸಭೆ ಸಮಾರಂಭಕ್ಕೆ ಪರವಾನಗಿ ಕಡ್ಡಾಯ

0 322

ಚಿಕ್ಕಮಗಳೂರು : ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಚುನಾವಣಾ ಪ್ರಚಾರಕ್ಕೆ ಮಾದರಿ ನೀತಿ ಸಂಹಿತೆ ಶನಿವಾರದಿಂದಲೇ ಜಾರಿಗೆ ಬಂದಿರುವುದರಿಂದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗಳ ಕಛೇರಿ ಅಥವಾ ತಾಲ್ಲೂಕು ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಅಥವಾ ಸುವಿಧಾ ಮೂಲಕ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಮೀನಾ ನಾಗರಾಜ್ ಸಿ.ಎನ್. ತಿಳಿಸಿದ್ದಾರೆ.

ವಾಹನ ಪರವಾನಗಿ, ಸ್ಟಾರ್ ಪ್ರಚಾರಕರು, ಪಕ್ಷದ ಪದಾಧಿಕಾರಿಗಳಿಗೆ ವಾಹನ ಅನುಮತಿ, ರಾಜಕೀಯ ಸಭೆ ಸಮಾರಂಭ, ಪ್ರಚಾರ, ವೀಡಿಯೋ ವ್ಯಾನ್ ಅನುಮತಿಯನ್ನು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳಿಂದ ಪಡೆಯಬೇಕು.

ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್, ಹೊರ ಜಿಲ್ಲೆಗಳ ವಾಹನ ಪರವಾನಗಿ, ರಾಜಕೀಯ ಪಕ್ಷಗಳ ವಾಹನಗಳಿಗೆ ಪರವಾನಗಿ, ಏರ್ ಬಲೂನ್ಸ್ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ಮನೆ ಮನೆ ಪ್ರಚಾರ, ಧ್ವನಿವರ್ಧಕ, ತಾತ್ಕಾಲಿಕ ಪಕ್ಷದ ಕಛೇರಿ ತೆರೆಯಲು, ಕರಪತ್ರ ವಿತರಣೆ, ಸಭೆಗೆ ಅನುಮತಿ, ಧ್ವನಿವರ್ಧಕ ಇಲ್ಲದೆ ಸಭೆ ನಡೆಸಲು, ಸ್ಟ್ರೀಟ್ ಕಾರ್ನರ್ ಸಭೆ, ಮೆರವಣಿಗೆ, ಬ್ಯಾನರ್ ಮತ್ತು ಧ್ವಜಗಳನ್ನು ಪ್ರದರ್ಶಿಸುವುದು, ವಾಹನಗಳಿಗೆ ಧ್ವನಿವರ್ಧಕ ಪರವಾನಗಿ, ಪಕ್ಷದ ಕಾರ್ಯಕರ್ತರಿಗೆ ವಾಹನ ಪರವಾನಗಿ ಮುಂತಾದವುಗಳಿಗೆ ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಸಂಬಂಧಿಸಿದ ಪ್ರಾಧಿಕಾರಗಳಿಂದ ಸುವಿಧಾ ಪೋರ್ಟಲ್ ಮೂಲಕ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾಗಿದ್ದಾರೆ
ಚಿಕ್ಕಮಗಳೂರು: ಸುಮ ಕೋಂ ಪ್ರಶಾಂತ್ 35 ವರ್ಷ, ಇವರು ಮಾರ್ಚ್ 03 ರಂದು ಕಾಣೆಯಾಗಿದ್ದಾರೆ ಎಂದು ಕೊಪ್ಪ ತಾಲ್ಲೂಕಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

05 ಅಡಿ ಎತ್ತರ, ಎಣ್ಣೆಕೆಂಪು ಮೈ ಬಣ್ಣ, ದುಂಡು ಮುಖ, ಮೂಗಿನ ಮೇಲ್ಭಾಗದಲ್ಲಿ ಕಪ್ಪು ಮಚ್ಚೆ ಮತ್ತು ಕುತ್ತಿಗೆಯ ಎಡ ಬಾಗದಲ್ಲಿ ಅಪರೇಷನ್ ಆದ ಗುರುತು ಇರುತ್ತದೆ. ಬಿಳಿ, ಅರಿಶಿನ ಹೂವಿನ ಡಿಸೈನ್ ಚೂಡಿದಾರ ಧರಿಸಿರುತ್ತಾರೆ.

ಕನ್ನಡ ಮತ್ತು ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಇವರು ಪತ್ತೆಯಾದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆ ಅಥವಾ ಹರಿಹರಪುರ ಪೊಲೀಸ್ ಠಾಣೆ (ದೂ.ಸಂ. 08265-274158) ಇವರಿಗೆ ಮಾಹಿತಿ ನೀಡುವಂತೆ ಹರಿಹರಪುರ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!