ಗೀತಾ ಶಿವರಾಜ್‌ಕುಮಾರ್ ರವರ ಆಸ್ತಿ ಎಷ್ಟಿದೆ ಗೊತ್ತಾ ?

0 162

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಸೋಮವಾರ ನಾಮಪತ್ರ ಸಲ್ಲಿಸಿದ್ದು ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ.

ಗೀತಾ ಶಿವರಾಜ್‌ಕುಮಾರ್ ಹೆಸರಿನಲ್ಲಿ ಒಟ್ಟು ಆಸ್ತಿ 40,04,36,321 ರೂ. ಇದೆ. ಪತಿ ಶಿವರಾಜ್‌ಕುಮಾರ್ ಹೆಸರಿನಲ್ಲಿ 49 ಕೋಟಿ 82 ಸಾವಿರದ 893 ರೂ. ಇದೆ ಎಂದು ಘೋಷಿಸಿದ್ದಾರೆ. ಗೀತಾ ಶಿವರಾಜ್ ಕುಮಾರ್ ಕೈಯಲ್ಲಿರುವ ನಗದು 3 ಲಕ್ಷ ರೂ ಇರುವುದಾಗಿ ಪ್ರಕಟಿಸಿಕೊಂಡಿದ್ದಾರೆ.

ಶಿವರಾಜ್‌ಕುಮಾರ್ ಹೆಸರಿನಲ್ಲಿರುವ ನಗದು 22 ಲಕ್ಷದ 58 ಸಾವಿರದ 338 ರೂ. ಗೀತಾ ಹೆಸರಿನಲ್ಲಿ ಸಾಲ 7 ಕೋಟಿ 14 ಲಕ್ಷದ 95 ಸಾವಿರ ರೂ. ಶಿವರಾಜ್‌ಕುಮಾರ್ ಹೆಸರಿನಲ್ಲಿ 17 ಕೋಟಿ 01 ಲಕ್ಷದ 12 ಸಾವಿರ ರೂ. ಸಾಲ ಇದೆ ಎಂದಪ ಘೋಷಿಸಿಕೊಂಡಿದ್ದಾರೆ.

ಗೀತಾ ಹೆಸರಿನಲ್ಲಿ ಚಿನ್ನಾಭರಣ 11, 542 ಗ್ರಾಂ  ಇದ್ದು ಇದರ ಮೌಲ್ಯ 3 ಕೋಟಿ 50 ಲಕ್ಷ, 30 ಕೆಜಿ ಬೆಳ್ಳಿ ಇದ್ದು ಇದರ ಮೌಲ್ಯ 3 ಲಕ್ಷದ 40 ಸಾವಿರ ರೂ.‌

ಕಾರುಗಳು
ಗೀತಾ ಹೆಸರಿನಲ್ಲಿ ಟಯೋಟೋ ಹೈಬ್ರೀಡ್ ಕಾರಿದ್ದು ಇದರ ಮೌಲ್ಯ 1 ಕೋಟಿ 07 ಲಕ್ಷ ರೂ. ಆಗಿದೆ‌. ಶಿವರಾಜ್‌ಕುಮಾರ್ ಹೆಸರಿನಲ್ಲಿ ಟೊಯೋಟಾ ಫಾರ್ಚುನರ್ ಕಾರು, ಮಾರುತಿ ಎರಿಟಿಗಾ, ವೊಲ್ವೋ ಕಾರುಗಳು ಸೇರಿ ಒಟ್ಟು ಮೌಲ್ಯ 87 ಲಕ್ಷದ 70 ಸಾವಿರ ರೂ. ಘೋಷಿಸಿಕೊಂಡಿದ್ದಾರೆ.‌

ಜಮೀನು
ಗೀತಾ ಹೆಸರಿನಲ್ಲಿ ಕನಕಪುರ ಬಳಿ 05 ಎಕರೆ 05 ಗುಂಟೆ ಕೃಷಿ ಭೂಮಿ, ಶಿವರಾಜ್‌ಕುಮಾರ್ ಹೆಸರಿನಲ್ಲಿ ಬೆಂಗಳೂರಿನ ಕೋರಮಂಗಲ ಬಳಿ 03 ಎಕರೆ 26 ಗುಂಟೆ ಜಮೀನು, ಶಿವರಾಜ್‌ಕುಮಾರ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸದ ಮನೆ ಇದೆ.

ಸಾಲ
ಗೀತಾ ಶಿವರಾಜ್‌ಕುಮಾರ್ ಹೆಸರಿನಲ್ಲಿ 07 ಕೋಟಿ 14 ಲಕ್ಷ ರೂ. ಸಾಲ, ಶಿವರಾಜ್‌ಕುಮಾರ್ ಹೆಸರಿನಲ್ಲಿ 17 ಕೋಟಿ 01 ಲಕ್ಷ ರೂ. ಸಾಲ ಇದೆ.

ಚರಾಸ್ತಿ
ಗೀತಾ ಶಿವರಾಜ್‌ಕುಮಾರ್ ಹೆಸರಿನಲ್ಲಿ 05 ಕೋಟಿ 54 ಲಕ್ಷದ ಚರಾಸ್ತಿ, ಶಿವರಾಜ್‌ಕುಮಾರ್ ಹೆಸರಿನಲ್ಲಿ 18 ಕೋಟಿ 82 ಲಕ್ಷದ ಚರಾಸ್ತಿ ಇದೆ.

ಸ್ಥಿರಾಸ್ತಿ
ಗೀತಾ ಶಿವರಾಜ್‌ಕುಮಾರ್ ಹೆಸರಿನಲ್ಲಿ 5 ಕೋಟಿ 92 ಲಕ್ಷ ರೂ. ಸ್ಥಿರಾಸ್ತಿ, ಶಿವರಾಜ್‌ಕುಮಾರ್ ಹೆಸರಿನಲ್ಲಿ 4 ಕೋಟಿ 37 ಲಕ್ಷ ರೂ. ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!