ಅನಾರೋಗ್ಯದಿಂದ ಬಳಲುತ್ತಿದ್ದ ಪತ್ರಕರ್ತ ಮಂಜುನಾಥ್ ಚಿಕಿತ್ಸೆ ಫಲಿಸದೆ ಕೊನೆಯುಸಿರು !

0 380

ತೀರ್ಥಹಳ್ಳಿ : ಮೇಲಿನಕುರುವಳ್ಳಿ ನಿವಾಸಿ ತೀರ್ಥಹಳ್ಳಿ ಮಿತ್ರ ಪತ್ರಿಕೆಯ ಸಂಪಾದಕ ಮಂಜುನಾಥ ಪೂಜಾರಿಯವರು ಕಳೆದ ಕೆಲವು ದಿನಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಮಂಗಳೂರಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ (ಎಂಐಒ) ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಂಜೆ ನಿಧನರಾದರು.

ಮೃತರ ಪಾರ್ಥಿವ ಶರೀರವು ರಾತ್ರಿ ಸುಮಾರು ಒಂದು ಗಂಟೆಗೆ ತೀರ್ಥಹಳ್ಳಿಯ ಮೇಲಿನಕುರುವಳ್ಳಿಯಲ್ಲಿರುವ ಅವರ ನಿವಾಸಕ್ಕೆ ಬರಲಿದ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಮಂಜುನಾಥ್ ರವರು ಪತ್ನಿ ಮತ್ತು ಓರ್ವ ಚಿಕ್ಕ ಮಗಳನ್ನು ಅಗಲಿದ್ದು, ಇತ್ತೀಚೆಗೆ ಅವರ ತಾಯಿ ಸಹ ನಿಧನರಾಗಿದ್ದರು ಎಂದು ತಿಳಿದುಬಂದಿದೆ.

Leave A Reply

Your email address will not be published.

error: Content is protected !!