ಹೊಂಬುಜ ; “ಭಾರತೀಯ ಸನಾತನ ಧರ್ಮ ಪರಂಪರೆಯಮತೆ ಕೃಷಿ ಸಂಸ್ಕೃತಿ ಮತ್ತು ವ್ಯಾಪಾರ ವ್ಯವಹಾರವು ವಿಶ್ವದಲ್ಲಿ ವಿಶಿಷ್ಟವಾದುದು. ವ್ಯವಹಾರ ಭೂಮಿಯನ್ನು ಭೂತಾಯಿ ಎಂದು ಪೂಜಿಸುವ ನಾವು, ಬೀಜಬಿತ್ತಿ ಫಸಲು ಪಡೆಯುವ ಕೃಷಿಕ, ರೈತಾಪಿ ಜನಸಮುದಾಯ ವ್ಯವಸ್ಥಿತ, ಮಾರುಕಟ್ಟೆಯನ್ನು ಅಪೇಕ್ಷಿಸುವುದು ನ್ಯಾಯೋಚಿತವಾಗಿದೆ” ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಪರಂಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ ಮಕ್ಕಳ ಸಂತೆಯನ್ನು ಉದ್ದೇಶಿಸಿ ಭಾರತೀಯ ಕೃಷಿ ಪದ್ಧತಿಯ ಕುರಿತು ಅವಲೋಕಿಸಿದರು.

“ಇಂದಿನ ಮಕ್ಕಳು ತಮ್ಮ ತಂದೆ ತಾಯಿ, ಪೋಷಕರೊಂದಿಗೆ ಊರಿನ ಸಂತೆಗೆ ಹೋಗುವುದಿದೆ. ಹಳ್ಳಿಯಲ್ಲಿ ಬೆಳೆದ ತರಕಾರಿ, ಧಾನ್ಯಗಳನ್ನು ಖರೀದಿಸುವುದನ್ನು ಮರೆಯಬಾರದು. ಮಕ್ಕಳ ಸಂತೆ ಭವಿತವ್ಯ ವಿಕಸನಕ್ಕೆ ನಾಂದಿ” ಎಂದು ಅನುಗ್ರಹ ಪ್ರವಚನವನ್ನು ಸ್ವಸ್ತಿಶ್ರೀಗಳವರು ದಯಪಾಲಿಸಿದರು.

ವಿವಿಧ ಬಗೆಯ ತರಕಾರಿ, ಧಾನ್ಯ, ತಿಂಡಿ ತಿನಸು, ತೆಂಗಿನಕಾಯಿ, ಫಲಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ಆಕರ್ಷಕವಾಗಿತ್ತು.

ಪರಂಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಜಿ. ಮಂಜಪ್ಪ, ಶ್ರೀಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಾವತಿ, ಶಿಕ್ಷಕವೃಂದ, ಸಿಬ್ಬಂದಿ ವರ್ಗದವರು ‘ಮಕ್ಕಳ ಸಂತೆ’ ಆಯೋಜಿಸಿದ್ದರು.

ಮಕ್ಕಳ ಪೋಷಕರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀಗಳವರು ಸಂತೆಯ ಸುತ್ತ ಸರ್ವರೊಂದಿಗೆ ಮಾತನಾಡುತ್ತಾ ಸ್ಪೂರ್ತಿ ತುಂಬಿದರು.



ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





