ಮಕ್ಕಳು ಪ್ರತಿನಿತ್ಯ ಭಗವದ್ಗೀತೆ ಶ್ಲೋಕ ಪಠಿಸಬೇಕು ; ಡಾ. ಶಾಂತರಾಮ ಪ್ರಭು

Written by Mahesha Hindlemane

Published on:

ಹೊಸನಗರ ; ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯವನ್ನು ಸಾಧಿಸುವ ಉದ್ದೇಶದಿಂದ ಭಗವದ್ಗೀತಾ ಅಭಿಯಾನ ಕೈಗೊಳ್ಳಲಾಗಿದೆ. ಮಕ್ಕಳು ಪ್ರತಿನಿತ್ಯ ಗೀತೆಯ ಒಂದು ಶ್ಲೋಕವನ್ನು ಪಠಿಸಬೇಕು ಎಂದು ತಾಲೂಕಿನ ಹಿರಿಯ ಸಾಹಿತಿ, ವಿದ್ವಾಂಸ, ನಿವೃತ ಪ್ರಾಚಾರ್ಯ ಡಾ. ಶಾಂತರಾಮ ಪ್ರಭು ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಲೂಕಿನ ಕಾರಣಗಿರಿ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ತಾಲೂಕು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಏರ್ಪಡಿಸಿದ್ದ, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ, ಶ್ರೀ ಸರ್ವಜ್ಞನೇಂದ್ರ ಸರಸ್ವತಿ ಪ್ರತಿಷ್ಠಾನ (ರಿ) ಶಿರಸಿ ಇವರ ಶ್ರೀ ಭಗವದ್ಗೀತೆ ಕಲಿಕಾ ಸ್ಪರ್ಧೆ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ 18 ವರ್ಷಗಳಿಂದ ನಿರಂತರವಾಗಿ ಶ್ರೀ ಮಠವು ಅಭಿಯಾನ ನಡೆಸುತ್ತಿದೆ. ಗೀತೆಯ ಶ್ಲೋಕಗಳನ್ನು ಮಕ್ಕಳಲ್ಲಿ ಕಂಠಪಾಠ ಮಾಡಿಸಿ ಅದರ ಸಾರವನ್ನು ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ ಸಮಾಜದ ಎಲ್ಲರಿಗೂ ತಲುಪಿಸುವುದು ಈ ಅಭಿಯಾನದ ಸದುದ್ದೇಶ ಎಂದರು.

ತಾಲೂಕಿನಲ್ಲಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಬಾಲ್ಯದಲ್ಲಿಯೇ ಮಕ್ಕಳು ಗೀತೆಯ ಒಂದು ಪುಸ್ತಕಕೊಂಡು ಪ್ರತಿ ಶ್ಲೋಕ ಓದುವ ಅಭ್ಯಾಸ ರೂಢಿಸಿಕೊಂಡು, ನಮ್ಮ ಹಿಂದೂ ಸನಾತನ ಸಂಸ್ಕಾರ, ಸಂಸ್ಕೃತಿ ಬೆಳವಣಿಗೆಗೆ ಸಹಕರಿಸುವಂತೆ ಸಲಹೆ ನೀಡಿದರು.

ಸಮಿತಿಯ ಗೌರವಾಧ್ಯಕ್ಷ ಡಾ. ರಾಮಚಂದ್ರರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ವೇದಿಕೆಯಲ್ಲಿ ಭಗವದ್ಗೀತೆ ಅಭಿಯಾನ ಸಮಿತಿ ಅಧ್ಯಕ್ಷ ವಿಜೇಂದ್ರ ಶೇಟ್, ದೇವಸ್ಥಾನದ ವ್ಯವಸ್ಥಾಪಕ ಶಂಕರ ನಾರಾಯಣ ಭಟ್, ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯಾ ರವಿ, ನಿವೃತ್ತ ಪ್ರಾಚಾರ್ಯ ನಳಿನಚಂದ್ರ, ಅಭಿಯಾನದ ಕಾರ್ಯದರ್ಶಿ ಸದಾಶಿವ ಶೆಟ್ಟಿ ಇದ್ದರು.

ಸಂಚಾಲಕಿ ಅನುಪಮಾ ಸುರೇಶ ನಿರೂಪಿಸಿದರು. ಶ್ರೀಲಕ್ಷ್ಮಿ ಸ್ವಾಗತಿಸಿದರು.

Leave a Comment