ಹಾಲಿನ ಗುಣಮಟ್ಟದ ಉತ್ಪನ್ನಗಳ ಮಾರಾಟದಿಂದ ಗ್ರಾಹಕರಿಗೆ, ರೈತರಿಗೆ ಹೆಚ್ಚು ಲಾಭ ; ವಿದ್ಯಾಧರ್

Written by malnadtimes.com

Published on:

ರಿಪ್ಪನ್‌ಪೇಟೆ ; ಶಿವಮೊಗ್ಗ ಕೆ.ಎಂ.ಎಫ್ ವ್ಯಾಪ್ತಿಗೆ ಮೂರು ಜಿಲ್ಲೆಗಳು ಒಳಪಡುತ್ತಿದ್ದು ಪ್ರತಿ ಜಿಲ್ಲೆಯ ವ್ಯಾಪ್ತಿಯಲ್ಲಿ ತಲಾ 25 ಮಿಲ್ಕ್ ಪಾರ್ಲರ್‌ಗಳನ್ನು ತೆರೆಯುವ ಮೂಲಕ ವಿದ್ಯಾವಂತ ಯುವಕ, ಯುವತಿಯರಿಗೆ ಸ್ವಾವಲಂಬಿ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಶಿವಮೊಗ್ಗ ಶಿಮೂಲ್ ಅಧ್ಯಕ್ಷ ವಿದ್ಯಾಧರ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಮತ್ತು ಸಾಗರ ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಎರಡು ಕೆ.ಎಂ.ಎಫ್ ಮಿಲ್ಕ್ ಪಾರ್ಲರ್‌ಗಳನ್ನು ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋಬಳಿ ಮಟ್ಟದಲ್ಲಿ ಇಂತಹ ಮಿಲ್ಕ್ ಪಾರ್ಲರ್‌ಗಳನ್ನು ಪ್ರಥಮವಾಗಿ ಆರಂಭಿಸುವ ಮೂಲಕ ಗ್ರಾಮೀಣ ರೈತ ನಾಗರೀಕರಿಗೆ ಹಾಲಿನ ಗುಣಮಟ್ಟದ ಉತ್ಪನ್ನಗಳು ಸುಲಭವಾಗಿ ದೊರಕುವಂತೆ ಮಾಡಲಾಗಿದೆ. ಅಲ್ಲದೆ ನಂದಿನ ಹಾಲಿನ ಉತ್ಪನ್ನಗಳಲ್ಲಿ ಸಾಕಷ್ಟು ಗುಣಮಟ್ಟದ ತಿಂಡಿ-ತಿನಿಸು ವಸ್ತು ತಯಾರಿಸಲಾಗುತ್ತಿದ್ದು ಇದರ ಮಾರಾಟದಲ್ಲಿ ಸಹ ದಾಖಲೆ ಮೆರೆದಿದೆ. ಇನ್ನೂ ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಹ ಇಂತಹ ಮಿಲ್ಕ್ ಪಾರ್ಲರ್‌ಗಳು ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಈ ವರ್ಷದಲ್ಲಿ ನಮ್ಮ ಶಿಮೂಲ್ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ತಲಾ 25 ಪಾರ್ಲರ್‌ಗಳನ್ನು ಆರಂಭಿಸಲಾಗುವುದು ಅದಕ್ಕೆ ಸ್ಥಳೀಯಾಡಳಿತ ಸ್ಥಳಾವಕಾಶ ಕಲ್ಪಿಸಿದರೆ ತಕ್ಷಣ ಆರಂಭಿಸುವುದಾಗಿ ಹೇಳಿದರು.

ಹಾಲಿನ ಉತ್ಪಾದನೆಯಲ್ಲಿ ಸಹ ಗಣನೀಯವಾಗಿ ಪ್ರಗತಿ ಹೊಂದಲಾಗಿದು ರೈತರಿಗೆ ಹೈನುಗಾರಿಕೆಯಲ್ಲಿ ಹೆಚ್ಚು ಪ್ರೋತ್ಸಾಹ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ತರಲಾಗುವುದೆಂದ ಅವರು ಹಾಲಿನ ಪೌಷ್ಟಿಕಾಂಶದ ಸಿಹಿ ಮತ್ತು ಖಾರದ ಉತ್ಪನ್ನಗಳನ್ನು ತಯಾರಿಸಲಾಗಿ ಮಾರುಕಟ್ಟೆಯಲ್ಲಿ ಸಹ ಹೆಚ್ಚು ಗ್ರಾಹಕರು ಕೇಳಿ ಪಡೆಯುವಂತೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಸಹಕಾರ ಬ್ಯಾಂಕ್ ಆಧ್ಯಕ್ಷ ಪರಮೇಶ, ಗ್ರಾಮ ಪಂಚಾಯಿತ್ ಸದಸ್ಯ ಎನ್.ಚಂದ್ರೇಶ್, ಪ್ರಕಾಶಪಾಲೇಕರ್, ಶಾಸಕರ ಅಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಶಿವಪ್ಪ ವಡಾಹೊಸಳ್ಳಿ,ಪ್ರಕಾಶಪಾಲೇಕರ್, ಮಹಾಲಕ್ಷ್ಮಿ ಕೆ.ಎಂ.ಎಫ್.ನ ವ್ಯವಸ್ಥಾಪಕರು ಮತ್ತು ಸಿಬ್ಬಂದಿವರ್ಗ ಹಾಜರಿದ್ದರು.

Leave a Comment