RIPPONPETE ; ವಿದ್ಯಾರ್ಥಿಗಳಲ್ಲಿ ಪಾಠದೊಂದಿಗೆ ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮೂಗುಡ್ತಿ ಸರ್ಕಾರಿ ಪ್ರಾಥಮಿ ಶಾಲೆಯ 2024-25ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಶಾಲೆ ಮತ್ತು ಮನೆಯ ಬಳಿ ಸ್ವಚ್ಚತೆ ಹಾಗೂ ಪರಿಸರ ರಕ್ಷಣೆಯನ್ನು ಮಾಡುವುದರಿಂದ ಶುದ್ಧ, ಗಾಳಿ, ಬೆಳಕು, ನೀರು ಪಡೆಯಲು ಸಹಕಾರಿಯಾಗುವುದರ ಬಗ್ಗೆ ಮಕ್ಕಳಲ್ಲಿ ಜಾಗೃತಿಗೊಳಿಸುವ ಕಾರ್ಯ ಇಂದಿನ ಅಗತ್ಯಯೆಂದರು.
ಮನುಷ್ಯನ ದುರಾಸೆಯಿಂದಾಗಿ ಆರಣ್ಯ ನಾಶವಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಮುಂದಿನ ಪೀಳಿಗೆಗೆ ಅರಣ್ಯ ಇತ್ತು ಎಂಬುದನ್ನು ಪುಸ್ತಕದ ಚಿತ್ರದಲ್ಲಿ ತೋರಿಸುವ ಕಾಲ ದೂರವಿಲ್ಲ ಎಂದ ಅವರು ಪರಿಸರ ರಕ್ಷಣೆಯೊಂದಿಗೆ ಶುದ್ಧ, ಗಾಳಿ, ನೀರು, ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಲು ನಮ್ಮ ಮಕ್ಕಳು ಶಾಲೆ ಮನೆಯ ಸುತ್ತ ಮರ-ಗಿಡಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಎಸ್.ಡಿಎಂ.ಸಿ.ಆಧ್ಯಕ್ಷ ಎಂ.ಎಸ್.ಯತೀಶ್ ಅಧ್ಯಕ್ಷತೆ ವಹಿಸಿದ್ದರು. ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿನಂತಿ ರಾಘವೇಂದ್ರ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿಯವರನ್ನು ಸನ್ಮಾನಿಸಿದರು. ಮುಖ್ಯಅತಿಥಿಗಳಾಗಿ ವನಿತಾ, ವಿಶುಕುಮಾರ್, ನಾಗರತ್ನ, ರಂಗನಾಥ, ಶೇಷಾಚಲನಾಯ್ಕ್, ಬಾಲಚಂದ್ರರಾವ್, ಸೋಮಶೇಖರ ಬಂಡಿ, ಹೆಚ್.ಆರ್.ಸುರೇಶ, ಗಂಗಾನಾಯ್ಕ್, ಪುಟ್ಟಸ್ವಾಮಿ, ಬಸವಣ್ಯಪ್ಪ, ಶಿವಮೂರ್ತಿ, ಜಗದೀಶ ಕಾಗಿನಲ್ಲಿ, ಕರಿಬಸಪ್ಪ, ಶಿವಪ್ಪ, ರುದ್ರಪ್ಪಗೌಡ, ಬಸವರಾಜಪ್ಪಗೌಡ, ಗುರುರಾಜಗೌಡ, ವಿನಯ್ ಹೆಗ್ಗೇರೆ, ಮಹೇಶ ಹೆಚ್.ಟಿ, ಸುಮ ಇನ್ನಿತರರು ಹಾಜರಿದ್ದರು.