SHIVAMOGGA ; ತಾಲೂಕಿನ ಆಯನೂರು ಹೋಬಳಿ ಕೂಡಿ ಗ್ರಾಮ ಸರ್ವೆ ನಂಬರ್ 33ರ ಸೀಗೆಹಳ್ಳ ಡ್ಯಾಂ ಹತ್ತಿರ ಮೂರು ಶ್ರೀಗಂಧ ಮರಗಳನ್ನು ಅಕ್ರಮ ಕಡಿತಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು ತಲೆಮರೆಸಿಕೊಂಡ ಇಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ.
ಸೆರೆ ಸಿಕ್ಕ ಆರೋಪಿಯನ್ನು ಅರೆನೆಲ್ಲಿ ಗ್ರಾಮದ ಕಲ್ಲುಬಂಡೆ ಮಂಜಪ್ಪ ಬಿನ್ ಸಿದ್ದಪ್ಪ ಎಂದು ಗುರುತಿಸಲಾಗಿದ್ದು, ಈತನನ್ನು ಹಣಗೆರೆ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಅರವಿಂದ್ ಪಿ ಹಾಗೂ ಅವರ ಸಿಬ್ಬಂದಿಗಳು ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ತಲೆ ಮರೆಸಿಕೊಂಡ ಆರೋಪಿಗಳಾದ ಅರನೆಲ್ಲೆ ಗ್ರಾಮದ ರಾಮಕೃಷ್ಣ ಬಿನ್ ಹನುಮಂತಯ್ಯ ಹಾಗೂ ವಿಜಯ್ ಕುಮಾರ್ ಬಿನ್ ಉಮೇಶ ಇವರುಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಆರ್.ಎಫ್.ಒ. ಅರವಿಂದ್ ಪಿ, ಡಿ.ವೈ.ಆರ್.ಎಫ್.ಒ. ಶಿವಕುಮಾರ್, ಬಿ.ಎಫ್.ಒ ಕೊಟ್ರೇಶ ದಾನಮ್ಮನವರ್, ಎಫ್ಒಗಳಾದ ಮಂಜುನಾಥ್, ಗಿರೀಶ್, ಮಾರುತಿ, ರಾಕೇಶ್ ಭಾಗಿಯಾಗಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.