ಹೊಸನಗರ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಹೊಸನಗರ ತಾಲ್ಲೂಕಿನ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ವಿವಿಧ ತಳಿಯ ಮೇವಿನ ಬೀಜಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ರೈತರಿಗೆ ಅನುಕೂಲವಾಗುವಂತೆ ಹೈಬ್ರಿಡ್ ಮೇವಿನ ಜೋಳ (Hybrid Fodder Sorghum CSH 24 MF – 5 ಕೆ.ಜಿ ಮತ್ತು CSH 43 MF – 5 ಕೆ.ಜಿ) ಹಾಗೂ ಆಫ್ರಿಕನ್ ಟಾಲ್ ಮೆಕ್ಕೆಜೋಳ (African Tall Maize ATM~CS – 6 ಕೆ.ಜಿ) ತಳಿಯ ಮೇವಿನ ಬೀಜಗಳು ಇಲಾಖೆಯಲ್ಲಿ ಲಭ್ಯವಿವೆ.
ಆಸಕ್ತ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿ, ಫ್ರೂಟ್ಸ್ ಐಡಿ (FID) ಮತ್ತು ಪಹಣಿ ನಕಲು ಪ್ರತಿ (RTC) ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ, ರಜಾ ದಿನಗಳನ್ನು ಹೊರತುಪಡಿಸಿ ಕಛೇರಿಯ ಸಮಯದಲ್ಲಿ ಮೇವಿನ ಬೀಜಗಳನ್ನು ಪಡೆದುಕೊಳ್ಳಬಹುದು ಎಂದು ಹೊಸನಗರ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

