ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳು : ತಡೆಗಟ್ಟಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿ – ಡಾ. ಧನಂಜಯ ಸರ್ಜಿ

Written by Koushik G K

Updated on:

ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತ (Sudden Cardiac Arrest/Heart Attack) ಪ್ರಕರಣಗಳು ಕರ್ನಾಟಕದಲ್ಲಿ ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಂಡಿವೆ. ಹೃದಯದ ಕಾಯಿಲೆ ಒಂದು ಮೌನ ಹಂತಕ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದು, ಬದುಕು ಸಾಗಿಸುತ್ತಿರುವ ಹಲವು ಜನರು ಹೃದಯಾಘಾತದಿಂದ ಅಕಸ್ಮಿಕ ಸಾವಿಗೆ ಒಳಗಾಗುತ್ತಿದ್ದಾರೆ. ಯೋಗ್ಯವಾದ ಪರೀಕ್ಷಾ ವ್ಯವಸ್ಥೆ, ತುರ್ತು ಚಿಕಿತ್ಸೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ತುರ್ತು ಅಗತ್ಯವಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ವಿಧಾನ ಪರಿಷತ್ ಅಧಿವೇಶನದಲ್ಲಿ ಶಾಸಕರಾದ ಡಾ. ಧನಂಜಯ ಸರ್ಜಿ ಈ ಕುರಿತಂತೆ ಗಂಭೀರ ವಿಷಯವನ್ನು ಎತ್ತಿಹಿಡಿದು, ರಾಜ್ಯದ ತಾಳೂಕು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಸರಿಯಾದ ಆರೋಗ್ಯ ಮೂಲಸೌಕರ್ಯ ಇಲ್ಲದಿರುವುದನ್ನು ಪ್ರಶ್ನಿಸಿದರು.

ಹೃದಯಾಘಾತ ಪತ್ತೆಗೆ ಇರುವ ಸವಾಲುಗಳು

ಸಾಮಾನ್ಯವಾಗಿ ಹೃದಯ ನೋವು ಅಥವಾ ಹೃದಯಾಘಾತ ಶಂಕೆಯಾದರೆ ಇ.ಸಿ.ಜಿ ಪರೀಕ್ಷೆ (Electrocardiogram) ಅತ್ಯಂತ ಮೂಲಭೂತ ಪರೀಕ್ಷೆ. ಆದರೆ ಕೇವಲ ಇ.ಸಿ.ಜಿ ಮೂಲಕವೇ ಹೃದಯಾಘಾತವನ್ನು ಶೇ 100 ರಷ್ಟು ದೃಢಪಡಿಸಲಾಗುವುದಿಲ್ಲ.

  • ನಿರ್ದಿಷ್ಟ ಹೃದಯ ಕಾಯಿಲೆ ಅಥವಾ ಧೂಮಪಾನದ ಅಭ್ಯಾಸ ಇದ್ದರೆ ಟಿ.ಎಂ.ಟಿ (Treadmill Test) ಮಾಡುವುದು ಅತ್ಯವಶ್ಯಕ.
  • ಆದರೆ ರಾಜ್ಯದ ಯಾವುದೇ ತಾಲೂಕು ಆಸ್ಪತ್ರೆಗಳಲ್ಲಿ ಟಿ.ಎಂ.ಟಿ ವ್ಯವಸ್ಥೆಯೇ ಇಲ್ಲ.

ಹೆಚ್ಚು ನಿಖರವಾದ ಪರೀಕ್ಷೆಯಾದ ಟ್ರೋಪೋನಿನ್-ಐ ಟೆಸ್ಟ್ ಹೃದಯಾಘಾತವನ್ನು ಪತ್ತೆಹಚ್ಚಲು ಅತಿ ಪರಿಣಾಮಕಾರಿ.

  • ಹೃದಯ ಸ್ನಾಯು ಹಾನಿಯಾದಾಗ ರಕ್ತದಲ್ಲಿ ಟ್ರೋಪೋನಿನ್ ಮಟ್ಟ ಹೆಚ್ಚಾಗುತ್ತದೆ.
  • ಈ ಟೆಸ್ಟ್ ನಡೆಸಿದರೆ ತಕ್ಷಣವೇ ಹೃದಯಾಘಾತವನ್ನು ದೃಢಪಡಿಸಲು ಸಾಧ್ಯ.
    ಆದರೆ ವಿಷಾದನೀಯ ಸಂಗತಿ ಏನೆಂದರೆ ರಾಜ್ಯದ ಒಂದು ತಾಲೂಕು ಆಸ್ಪತ್ರೆಯಲ್ಲಿ ಕೂಡ ಈ ಪರೀಕ್ಷೆ ಲಭ್ಯವಿಲ್ಲ.

ಗಂಭೀರ ಅಂಕಿ-ಅಂಶಗಳು

ಆರೋಗ್ಯ ಸಚಿವ ದಿನೇಶ್ ಗುಂಡು ರಾವ್ ನೀಡಿದ ಮಾಹಿತಿಯ ಪ್ರಕಾರ –

  • 2022ರಲ್ಲಿ ರಾಜ್ಯದಲ್ಲಿ 5,800 ಜನರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
  • 2023ರಲ್ಲಿ ಈ ಸಂಖ್ಯೆ 15,000 ಜನರಿಗೆ ಏರಿದೆ.
  • 2024 ರಿಂದ 2025ರ ನಡುವೆ ಈ ಸಂಖ್ಯೆ 17,000 ಜನರಿಗೆ ತಲುಪಿದೆ.

ಅದೇ ರೀತಿ, ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 61,299 ಜನರನ್ನು ತಪಾಸಣೆ ಮಾಡಿದ ವರದಿಯ ಪ್ರಕಾರ:

  • ಶೇ 60% ರೋಗಿಗಳಿಗೆ ಧೂಮಪಾನದಿಂದ ಹಾನಿ
  • 10% ಡಯಾಬಿಟಿಸ್‌ನಿಂದ
  • 10% ಒತ್ತಡದಿಂದ
  • 10% ಅತಿಯಾದ ಜಡತ್ವದಿಂದ
  • 10% ಪೋಷಕರಿಂದ ಬಂದಿರುವ ವಂಶಾನುಗತ ಕಾರಣಗಳಿಂದ ಹೃದಯದ ತೊಂದರೆ ಎದುರಿಸುತ್ತಿದ್ದಾರೆ.

ಈ ಅಂಕಿ–ಅಂಶಗಳೇ ರಾಜ್ಯದ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿ.

ತುರ್ತು ಚಿಕಿತ್ಸೆಗಾಗಿ ಅಗತ್ಯವುಳ್ಳ ವ್ಯವಸ್ಥೆಗಳು

ಡಾ. ಧನಂಜಯ ಸರ್ಜಿ ಅವರು ಸರ್ಕಾರದ ಗಮನಕ್ಕೆ ತಂದ ಕೆಲವು ಪ್ರಮುಖ ಸಲಹೆಗಳು:

  1. ಟಿ.ಎಂ.ಟಿ ಪರೀಕ್ಷೆ ಲಭ್ಯವಾಗಬೇಕು
    • ತಾಲೂಕು ಮಟ್ಟದಲ್ಲಿ ಈ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಬೇಕು.
    • ಸಾಧ್ಯವಿಲ್ಲದಿದ್ದರೆ, ಕ್ಯಾತ್-ಲ್ಯಾಬ್ (Cath Lab) ಇರುವ ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ / ಎ.ಬಿ.ಆರ್.ಕೆ ಯೋಜನೆಗಳಡಿ ಉಚಿತವಾಗಿ ಈ ಪರೀಕ್ಷೆ ಮಾಡಿಸಬೇಕು.
  2. ಟ್ರೋಪೋನಿನ್-ಐ ಪರೀಕ್ಷೆ ಎಲ್ಲೆಡೆ ಲಭ್ಯವಾಗಬೇಕು
    • ಇದನ್ನು ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ನಡೆಸಿದಲ್ಲಿ ಅನೇಕರ ಪ್ರಾಣ ಉಳಿಯಬಹುದು.
  3. ಟೆನೆಕ್ಟೆಪ್ಲೇಸ್ ಇಂಜೆಕ್ಷನ್ (Anti-clot injection)
    • ಹೃದಯಾಘಾತದ ಸಮಯದಲ್ಲಿ ರಕ್ತನಾಳದಲ್ಲಿ ಉಂಟಾಗುವ ‘ಕ್ಲಾಟ್’ ಕರಗಿಸಲು ಬಳಸುವ ಇಂಜೆಕ್ಷನ್.
    • ಇದನ್ನು ಸಮಯಕ್ಕೆ ನೀಡಿದರೆ ಪ್ರಾಣ ಉಳಿಯುವ ಸಾಧ್ಯತೆ ಹೆಚ್ಚು.
    • ಆದರೆ ಪ್ರಸ್ತುತ ಕೆಲವೊಂದು ತಾಲೂಕುಗಳಲ್ಲಿ ಮಾತ್ರ ಇದು ಲಭ್ಯ. ಆದ್ದರಿಂದ ಪ್ರತಿ ತಾಲೂಕು ಆಸ್ಪತ್ರೆಗೆ ಸರ್ಕಾರ ಒದಗಿಸಬೇಕು.
  4. ಸ್ಟಂಟ್ ಹಾಕುವ ವ್ಯವಸ್ಥೆ ಇಲ್ಲದ ಜಿಲ್ಲೆಗಳು
    • ಹಾವೇರಿ, ಸಿರಸಿ, ಮಡಿಕೇರಿ, ಚಾಮರಾಜನಗರ ಜಿಲ್ಲೆಗಳಲ್ಲಿ ‘ಸ್ಟಂಟ್ ಪ್ರೊಸೀಜರ್’ ವ್ಯವಸ್ಥೆಯೇ ಇಲ್ಲ.
    • ಈ ಜಿಲ್ಲೆಗಳಲ್ಲಾದರೂ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಕಡ್ಡಾಯವಾಗಿ ಲಭ್ಯವಾಗಬೇಕೆಂದು ಒತ್ತಾಯಿಸಿದರು.
  5. ಕಾರ್ಡಿಯಾಕ್ ಬೈಪಾಸ್ ಶಸ್ತ್ರಚಿಕಿತ್ಸೆ (Bypass Surgery)
    • ಹೃದಯಾಘಾತ ರೋಗಿಗಳಲ್ಲಿ ಶೇ 10% ಮಂದಿಗೆ ಇದರ ಅಗತ್ಯವಿರುತ್ತದೆ.
    • ಆದರೆ ಪ್ರಸ್ತುತ ಬೆಂಗಳೂರಿನ ಜಯದೇವ ಮತ್ತು ಗುಲ್ಬರ್ಗ ಆಸ್ಪತ್ರೆಗಳಲ್ಲಿ ಮಾತ್ರ ಈ ವ್ಯವಸ್ಥೆಯಿದೆ.
    • ಮಧ್ಯ ಕರ್ನಾಟಕದ ಜನತೆಗೆ ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಬೈಸ್ಪಾಸ್ ಸರ್ಜರಿ ಸೌಲಭ್ಯ ಕಲ್ಪಿಸಬೇಕು.
  6. ಕ್ಯಾತ್ ಲ್ಯಾಬ್ ಆರಂಭಿಸುವುದು ಅಗತ್ಯ
    • ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಶಿರಸಿ ಜಿಲ್ಲೆಗಳಲ್ಲಿ ಇದಿಲ್ಲ.
    • ರಾಷ್ಟ್ರೋತ್ಥಾನ ವೈದ್ಯಕೀಯ ಕಾಲೇಜುಗಳು ಇರುವ ಜಿಲ್ಲೆಗಳಿಗೆ ಸರ್ಕಾರ ಕ್ಯಾತ್ ಲ್ಯಾಬ್ ಆರಂಭಿಸಬೇಕು.
    • ಉಡುಪಿ ಮತ್ತು ಮಂಗಳೂರಿನಲ್ಲಿ ರೋಗಿಗಳು ಹೆಚ್ಚಿರುವುದರಿಂದ ಅಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು.

ಜಾಗೃತಿಯ ಅಗತ್ಯ

ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯ ಮಾಡುವ ಬದಲು, ಹೃದಯಾಘಾತ ತಡೆಗಟ್ಟುವ ಹಾಗೂ ಆರೋಗ್ಯ ಜಾಗೃತಿ ಮೂಡಿಸುವ ಜಾಹೀರಾತುಗಳಿಗೆ ಸರ್ಕಾರ ಹಣ ಬಿಡಬೇಕು ಎಂಬುದಾಗಿ ಶಾಸಕರು ಅಭಿಪ್ರಾಯಪಟ್ಟರು.

  • ಪತ್ರಿಕೆಗಳು, ಟೆಲಿವಿಷನ್ ಚಾನಲ್‌ಗಳು, ಸಾಮಾಜಿಕ ಜಾಲತಾಣಗಳು, ಚಿತ್ರಮಂದಿರಗಳ ಮೂಲಕ ಹೃದಯ ಆರೋಗ್ಯ ಜಾಗೃತಿ ಅಭಿಯಾನ ನಡೆಸಬೇಕೆಂದು ಒತ್ತಾಯಿಸಿದರು.

ಸರ್ಕಾರದ ಪ್ರತಿಕ್ರಿಯೆ

ಆರೋಗ್ಯ ಸಚಿವ ದಿನೇಶ್ ಗುಂಡು ರಾವ್ ಪ್ರತಿಕ್ರಿಯಿಸುತ್ತಾ:

  • ಆಯುಷ್ಮಾನ್ ಯೋಜನೆ ಅಡಿ ಹೆಚ್ಚಿನ ವೈದ್ಯಕೀಯ ಸೇವೆಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ.
  • ಟ್ರೋಪೋನಿನ್-ಐ ಪರೀಕ್ಷೆ ಎಲ್ಲೆಡೆ ಲಭ್ಯವಾಗುವಂತೆ ದಾರಿ ಮಾಡಿಕೊಡಲಾಗುತ್ತದೆ.
  • ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಪ್ರಸ್ತುತ 86 ತಾಲೂಕು ಆಸ್ಪತ್ರೆಗಳಲ್ಲಿ ಇದೆ. ಶೀಘ್ರದಲ್ಲೇ ಪ್ರತಿ ತಾಲೂಕಿಗೂ ಒದಗಿಸುತ್ತೇವೆ ಎಂದರು.
  • ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಜೊತೆ ಸಮಾಲೋಚಿಸಿ, ಅಗತ್ಯ ಜಿಲ್ಲೆಗಳಿಗೆ ಕ್ಯಾತ್ ಲ್ಯಾಬ್ ಸ್ಥಾಪಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.
  • “ಗೃಹ ಆರೋಗ್ಯ ಯೋಜನೆ” ಅಡಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಪತ್ತೆ ಹಾಗೂ ತಡೆ ಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಘೋಷಿಸಿದರು.

Leave a Comment