ಹೊಸನಗರ ; ಹೊಸನಗರ ತಾಲ್ಲೂಕು ದುಮ್ಮ ಗ್ರಾಮದ ವಾಸಿ ಡಾ|| ರೇವಣ್ಣಪ್ಪಗೌಡರಿಗೆ ಅವರ ಸಾಧನೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಸರ್ವೋದಯ ರಾಷ್ಟ್ರೀಯ ಸೇವಾ ಪುರಸ್ಕಾರ ಪ್ರಶಸ್ತಿ ನೀಡಿ ಗೌರವ ಗೌರವಿಸಲಾಗಿದೆ.
ಕರ್ನಾಟಕ ಸರ್ವೋದಯ ಮಂಡಲ ರಾಷ್ಟೀಯ ಸಮ್ಮೇಳನ ಕಾರ್ಯಕ್ರಮವನ್ನು ಈಸೂರಿನಲ್ಲಿ ಹುತಾತ್ಮರ ಸ್ಮಾರಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದಲ್ಲಿ ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು.
ಡಾ|| ಡಿ.ವಿ ರೇವಣಪ್ಪಗೌಡರು ಹೊಸನಗರ ತಾಲ್ಲೂಕಿನ ದುಮ್ಮದವರು. ಸ್ನಾತಕೋತ್ತರ ಪದವಿ ಪಡೆದ ಇವರು ಪೊಲೀಸ್ ವೆಲ್ ಫೇರ್ ವಿಂಗ್ ನ ರಾಜ್ಯ ಕಾರ್ಯದರ್ಶಿಯಾಗಿ, ನವದೆಹಲಿಯ ಮಾನವ ಹಕ್ಕುಗಳು ಮತ್ತು ಲಂಚ ವಿರೋಧಿ ಫೋರಂನ ಸಂಚಾಲಕರಾಗಿ, ಬೆಂಗಳೂರಿನ ನ್ಯೂಸ್ ಪ್ರಿಂಟ್ಸ್ ನ ಸಲಹೆಗಾರರಾಗಿ, ದುಮ್ಮದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾಗಿ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ವಿಶ್ವ ಮಾನವ ಭಾವೈಕ್ಯ ರತ್ನ ಪ್ರಶಸ್ತಿ, ವಿಶ್ವಶ್ರೀ ಶರಣ ಪ್ರಶಸ್ತಿ, ಶರಣ ರತ್ನ ರಾಷ್ಟ್ರೀಯ ಪ್ರಶಸ್ತಿ, ಸಿದ್ದಗಂಗಾ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಇವರ ಅವಿರತ ಸೇವೆಯನ್ನು ಗುರುತಿಸಿ ಸರ್ವೋದಯ ರಾಷ್ಟ್ರೀಯ ಸೇವಾ ಪುರಸ್ಕಾರ ನೀಡಲಾಗಿದೆ.