RIPPONPETE ; ಇಲ್ಲಿನ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನ ಬಳಗದ 4ನೇ ವರ್ಷದ ಸಮಿತಿಗೆ ನೂತನ ಅಧ್ಯಕ್ಷರಾಗಿ ಧನಲಕ್ಷ್ಮಿ ಪ್ರಧಾನ ಕಾರ್ಯದರ್ಶಿಗಳಾಗಿ ನಿರ್ಮಲ ಹರೀಶ್ ಮತ್ತು ಮಹಮ್ಮದ್‌ಹುಸೇನ್ ಆಯ್ಕೆಯಾಗಿದ್ದಾರೆ.
ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕುವೆಂಪು ಸಭಾಂಗಣದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಸರ್ವ ಸದಸ್ಯರ ಸಭೆಯು ಕಳೆದ ಸಾಲಿನ ಅಧ್ಯಕ್ಷ ಉಲ್ಲಾಸ್ ತೆಂಕೋಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಉಲ್ಲಾಸ್ ತೆಂಕೋಲ (ಗೌರವಾಧ್ಯಕ್ಷ), ಆರ್.ಡಿ.ಶೀಲಾ ಖಜಾಂಚಿಯಾಗಿ, ಕೆ.ದೇವರಾಜ್ ಗಣಪತಿ ಗವಟೂರು. ಜಿ.ಡಿ.ಮಲ್ಲಿಕಾರ್ಜುನ, ಸಾಜೀದಾ, ಹನೀಫ್, ಸೀಮಾ, ಭಾಸ್ಕರ್‌ಶೆಟ್ಟಿ, ಯೋಗೇಂದ್ರಪ್ಪಗೌಡ, ಶ್ವೇತಾ ನಿಶಾಂತ್, ಸ್ವಾತಿ, ಲೇಖನ, ನರಸಿಂಹ ಕೆರೆಹಳ್ಳಿ (ಉಪಾಧ್ಯಕ್ಷರು), ಪಿಯೂಸ್ ರೋಡ್ರಿಗಸ್, ಪ್ರಕಾಶ ಪಾಲೇಕರ್, ಈಶ್ವರಪ್ಪಗೌಡ, ಗುಂಡಣ್ಣ, ಅರವಿಂದ ಭಟ್ ಮಂಜುನಾಥ ಕಾಮತ್, ರಾಜೇಶ್ವರಿ, ಲಲಿತಾ ನಾರಾಯಣ್, (ಸಂಘಟನಾ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.