ಟ್ರಂಚ್‌ಗೆ ಬಿದ್ದು ಕಾಡಾನೆ ಸಾವು !

Written by Mahesha Hindlemane

Published on:

SHIVAMOGGA ; ಟ್ರಂಚ್‌ಗೆ ಬಿದ್ದು ಕಾಡಾನೆಯೊಂದು ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ವೀರಗಾರನ ಬೈರನಕೊಪ್ಪ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಆನೆಗಳ ಉಪಟಳ ತಡೆಯಲು ತೆಗೆಯಲಾಗಿದ್ದ ಟ್ರಂಚ್‌ಗೆ ಎರಡು ದಿನದ ಹಿಂದೆಯೇ ಕಾಡಾನೆ ಬಿದ್ದಿದೆ ಎನ್ನಲಾಗಿದ್ದು, ಮೇಲೆ ಬರಲಾಗದೇ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಆನೆ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಆನೆಯ ಕಳೆಬರಹದ ಮರಣೋತ್ತರ ಪರೀಕ್ಷೆ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.

ಇನ್ನು ಶಿವಮೊಗ್ಗ ಗ್ರಾಮಾಂತರ ಭಾಗದ ಸಿರಿಗೆರೆ, ಆಯನೂರು, ಆಲದೇವರ ಹೊಸೂರು, ಪುರದಾಳು ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿತ್ತು. ಈ ಆನೆಗಳನ್ನು ಇಲ್ಲಿಂದ ಓಡಿಸಬೇಕು ಅಥವಾ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು. ಹಾಗಾಗಿ ಸೆಕ್ರೆಬೈಲು ಬಿಡಾರದಿಂದ ಮೂರು ಆನೆಗಳನ್ನು ತಂದು ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ನಡುವೆಯೇ ಆನೆಯೊಂದು ಮೃತಪಟ್ಟಿದೆ.

Leave a Comment