ರಿಪ್ಪನ್ಪೇಟೆ ; ಪಟ್ಟಣ ಪಂಚಾಯಿತ್ ಮಾದರಿಯಲ್ಲಿ ಇಲ್ಲಿನ ನಾಲ್ಕು ತಾಲ್ಲೂಕು, ಜಿಲ್ಲಾ ಕೇಂದ್ರಗಳನ್ನ ಸಂಪರ್ಕಿಸುವ ವಿನಾಯಕ ಸರ್ಕಲ್ ಅನ್ನು 2 ಕೋಟಿ ರೂ. ವೆಚ್ಚದಲ್ಲಿ ಅಗಲೀಕರಣಗೊಳಿಸಿ ಆಭಿವೃದ್ದಿಪಡಿಸಲಾಗುವುದೆಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ರಿಪ್ಪನ್ಪೇಟೆಯಲ್ಲಿಂದು ಸಂಜೆ ಹೊಸನಗರ ತಾಲ್ಲೂಕು ಪಡುಬಿದ್ರೆ-ಚಿಕ್ಕಲಗೋಡು ರಾಜ್ಯ ಹೆದ್ದಾರಿಯ ಸರಪಳಿ 157.90 ಕಿ.ಮೀ ವಿನಾಯಕ ಸರ್ಕಲ್ ಅಭಿವೃದ್ಧಿ ಹಾಗೂ ಇತರ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಟ್ಟಣ ಪಂಚಾಯಿತಿ ಪ್ರಸ್ತಾಪ ಮಾಡಿ ಘೋಷಣೆ ಮಾಡಿದಲ್ಲಿ ಮೊದಲು ರಿಪ್ಪನ್ಪೇಟೆಯನ್ನು ಘೋಷಣೆ ಮಾಡಲಾಗುವುದೆಂದು ಹೇಳಿದ ಅವರು ಅದೇ ಮಾದರಿಯಲ್ಲಿ ಅಭಿವೃದ್ದಿ ಮಾಡುವ ಬಗ್ಗೆ ಆಸಕ್ತಿ ವಹಿಸುವುದಾಗಿ ತಿಳಿಸಿದ ಅವರು, ಈಗಾಗಲೇ ಆನಂದಪುರ-ರಿಪ್ಪನ್ಪೇಟೆ ಮಾರ್ಗದ ಹತ್ತು ಕಿ.ಮೀ ರಸ್ತೆ ಅಭಿವೃದ್ದಿಗೆ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಸಹ ಪೂರ್ಣ ಹಂತದಲ್ಲಿರುವಾಗಲೇ ಮಳೆಗಾಲ ಆರಂಭಗೊಂಡಿದ್ದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿ ಈಗ ಅರ್ಧಕ್ಕೆ ನಿಂತ ಕಾಮಗಾರಿಯನ್ನು ಆರಂಭಿಸಲಾಗಿದೆ. ಇನ್ನೂ ವಿನಾಯಕ ಸರ್ಕಲ್ ಇನ್ನೂ ನಾಳೆಯಿಂದಲೇ ಆರಂಭಗೊಂಡು ಬರುವ ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿ, ಶಿವಮೊಗ್ಗ-ಹೊಸನಗರ ಸಂಪರ್ಕದ ರಾಜ್ಯ ಹೆದ್ದಾರಿ ಮಳೆಗಾಲದಿಂದಾಗಿ ಹೊಂಡ-ಗುಂಡಿಗಳು ಬಿದ್ದಿದ್ದು ಈಗಾಗಲೇ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿಯನ್ನು ಹೆಚ್ಚು ಹೊಂಡ-ಗುಂಡಿ ಬಿದ್ದಿರುವ ಕಡೆಯಲ್ಲಿ ಕಿತ್ತು ಹೊಸದಾಗಿ ಹಂತ-ಹಂತವಾಗಿ ರಸ್ತೆ ಮಾಡಲಾಗುವುದೆಂದರು.
ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಎಪಿಎಂಸಿ.ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಸಾಕಮ್ಮ ಹರತಾಳು, ಎಂ.ಬಿ.ಲಕ್ಷ್ಮಣ ಗೌಡ, ವಾಣಿ ಗೋವಿಂದಪ್ಪಗೌಡ, ರವೀಂದ್ರ ಕೆರೆಹಳ್ಳಿ, ಹಾಗೂ ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಮಧುಸೂಧನ್, ಆಸಿಫ್, ನಿರೂಪ್, ಗಣಪತಿ, ಟಿ.ಚಂದ್ರೇಶ್, ನಿರೂಪಮ ರಾಕೇಶ್, ಸಾರಾಭಿ, ಕೆ.ಪ್ರಕಾಶ್ ಪಾಲೇಕರ್, ವೇದಾವತಿ, ಮಹಾಲಕ್ಷ್ಮಿ, ವಿನೋಧ, ವನಮಾಲ ಕೃಷ್ಣಪ್ಪ, ಹಾಗೂ ಲೋಕೋಪಯೋಗಿ ಇಲಾಖೆಯ ಎಇಇ ಹಾಗೂ ಜೆಇ ಸೇರಿದಂತೆ ಗ್ರಾಮ ಪಂಚಾಯಿತ್ ಅಭಿವೃದ್ದಿ ಅಧಿಕಾರಿ ನಾಗರಾಜ್ ಪಂಚಾಯಿತ್ ಸಿಬ್ಬಂದಿ ವರ್ಗ ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





