ಹೊಸನಗರ

ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ ; ಡಾ. ಹೇಮಂತ್

ಹೊಸನಗರ : ಪರಿಸರವು ನಮ್ಮ ಬದುಕಿನ ಆಧಾರ, ಗಾಳಿ ನೀರು ಮಣ್ಣು ಮತ್ತು ಮರಗಳು ಜೀವಿಗಳಿಗೆ ಮನುಷ್ಯನಿಗೆ ಅತ್ಯಮೂಲ್ಯವಾಗಿದ್ದು, ಆದರೆ ಮಾಲಿನ್ಯ ಮತ್ತು ಅರಣ್ಯ ನಾಶದಿಂದ ಪ್ರಕೃತಿ ಸಮತೋಲನ ಹಾಳಾಗುತ್ತಿದೆ. ಮರ ನೆಡುವುದು ನೀರು ಮತ್ತು ವಿದ್ಯುತ್ ಉಳಿಸುವುದು ಪರಿಸರ ರಕ್ಷಣೆಗೆ ಸಹಾಯಕ. ಪರಿಸರವನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಹಸಿರು ಪರಿಸರವೇ ಸುಖಿ ಭವಿಷ್ಯದ ಮೂಲ ಎಂದು ಹೊಸನಗರ ತಾಲ್ಲೂಕು ಸಾರ್ವಜನಿಕ ಅಸ್ಪತ್ರೆಯ ವೈದ್ಯಾಧಿಕಾರಿ ಡಾ. ಹೇಮಂತ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಿಸರ ದಿನಾಚರಣೆಯ ಪ್ರಯುಕ್ತ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಗಿಡನೆಟ್ಟು ನೀರು ಹಾಕಿ ಮಾತನಾಡಿದರು.

ಪರಿಸರ ದಿನಾಚರಣೆಯ ದಿನವಾಗಿ ಜೂನ್ ತಿಂಗಳಲ್ಲಿ ಗಿಡಗಳನ್ನು ನೆಟ್ಟು ಬಿಡಬಾರದು. ನೆಟ್ಟ ಗಿಡಗಳನ್ನು ಬೆಳೆಸುವ ಪ್ರಯತ್ನ ಮಾಡಬೇಕು ಎಂದರು.

ಸಾರ್ವಜನಿಕ ಅಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಾಂತರಾಜ್‌ ಗಿಡನೆಟ್ಟು ಮಾತನಾಡಿ, ನಾವು ನೆಟ್ಟು ಬೆಳೆಸಿದ ಗೀಡ ಮರವಾಗಿ ಬೆಳೆದ ನಂತರ ಆ ಮರ ನೆರಳು ನೀಡುತ್ತದೆ ಉತ್ತಮ ಪರಿಸರ ನೀಡುತ್ತದೆ ಜೊತೆಗೆ ಹಣ್ಣು-ಹಂಪಲು ನೀಡುತ್ತದೆ. ಆದರೆ ನೆಟ್ಟವರೆ ಬೆಳೆಸಬೇಕೆಂದಿಲ್ಲ. ನಾವು ವರ್ಷದಿಂದ ವರ್ಷಕ್ಕೆ ವರ್ಗಾವಣೆ ಹೊಂದುತ್ತಿರುತ್ತೇವೆ. ಆದರೆ ಯಾವುದೊ ಒಂದು ದಿನ ನಾವು ಬಂದಾಗ ನಾವೇ ನೆಟ್ಟ ಗಿಡ ಮರವಾಗಿ ನೋಡಿದಾಗ ನಮ್ಮ ಮಕ್ಕಳೆ ನೆನಪಿಗೆ ಬರುತ್ತಾರೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ದಂತ ವೈದ್ಯೆ ಆತ್ಮ ಮಾತನಾಡಿ, ಪರಿಸರದಿಂದ ನಮಗೆ ಎಲ್ಲ ರೀತಿಯಲ್ಲಿಯೂ ಲಾಭವಿದೆ. ಪರಿಸರವಿಲ್ಲದಿದ್ದರೆ ಈ ಭೂಮಿಯೇ ಇಲ್ಲ ಯಾವುದೇ ಜೀವಿಯೂ ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಅದನ್ನು ಮರವಾಗಿ ಬೆಳೆಸಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಡಾ. ಪ್ರವೀಣ್‌ಕುಮಾರ್, ಸಿಬ್ಬಂದಿಗಳಾದ ವಸಂತ, ಮನೋಹರ, ಅನನ್ಯ, ಕೋಕಿಲ, ರಾಹುಲ್, ಅಭಿಜಿತ್, ದೀಪ ಸುಕೇಶ್, ದೀಪ ಕುಲಾಲ್, ಲತಾ, ಸುಹನ, ಉಷಾ, ಅನುಷಾ, ಅಶ್ವಿನಿ, ವಿನೋಧ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]