ಮಾಜಿ ಸಚಿವ ಹರತಾಳು ಹಾಲಪ್ಪಗೆ ಮಾತೃ ವಿಯೋಗ

Written by Koushik G K

Published on:

ಬೆಂಗಳೂರು: ಮಾಜಿ ಸಚಿವ ಹರತಾಳು ಹಾಲಪ್ಪ ಅವರ ತಾಯಿ ಮಂಜಮ್ಮ (94) ಅವರು ಇಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಯೋಸಹಜವಾಗಿ ಇಹಲೋಕ ತ್ಯಜಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಂಜಮ್ಮನವರಿಗೆ ಒಟ್ಟು 12 ಮಂದಿ ಮಕ್ಕಳು ಇದ್ದು, 9 ಮಂದಿ ಗಂಡು ಮಕ್ಕಳು ಹಾಗೂ 3 ಮಂದಿ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಅವರಲ್ಲಿ ಹರತಾಳು ಹಾಲಪ್ಪ ಸೇರಿದಂತೆ ಕುಟುಂಬದ ಎಲ್ಲರೂ ಸಮಾಜ ಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.

ಮಂಜಮ್ಮನವರ ಬದುಕು ಸರಳತೆ, ಮೌಲ್ಯಗಳು ಹಾಗೂ ಕುಟುಂಬದ ಒಗ್ಗಟ್ಟಿನಿಂದ ಕೂಡಿದ್ದು, ಮಕ್ಕಳಿಗೆ ಸದಾ ಪ್ರೇರಣೆಯಾಗಿತ್ತು ಎಂದು ಆಪ್ತರು ತಿಳಿಸಿದ್ದಾರೆ. ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲದೆ, ಆಪ್ತರು, ಬಂಧು-ಬಳಗ ಮತ್ತು ಪರಿಚಿತರಿಗೆ ಅಪಾರ ದುಃಖ ತಂದಿದೆ.

ಮೃತರ ಅಂತ್ಯಕ್ರಿಯೆ ನಾಳೆ (ಸೆಪ್ಟೆಂಬರ್ 18) ಸ್ವಗ್ರಾಮ ಹೊಳೆಕೊಪ್ಪದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

Leave a Comment