HOSANAGARA ; ಯಾವುದೇ ವ್ಯಕ್ತಿಯ ನಿಜರೂಪ ಅನಾವರಣಗೊಳ್ಳುವುದು ಆತನಿಗೆ ಅಧಿಕಾರ ಕೊಟ್ಟಾಗ ಮಾತ್ರವೇ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ, ಶಿಕ್ಷಕ ಬಂಡಿ ಸೋಮಶೇಖರ್ ಹೇಳಿದರು.
ಶನಿವಾರ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಮಾಣ ಪತ್ರ ವಿತರಣೆ ಹಾಗು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ತಾಲೂಕಿನಲ್ಲಿ ಒಟ್ಟಾರೆ 1157 ಸರ್ಕಾರಿ ನೌಕರರಿದ್ದು, ಸಂಘ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನೌಕರರ ಹಿತಾಸಕ್ತಿ ಕಾಪಾಡಲು ಶ್ರಮಿಸುತ್ತಿದೆ. ಈಗಾಗಲೇ ಹಲವು ಗಣ್ಯರು ಅಧ್ಯಕ್ಷಗಾಧಿ ಅನುಭವಿಸಿದ್ದಾರೆ. ಮೊದಲ ಬಾರಿ ಚುನಾವಣೆ ಎದುರಿಸಿದ್ದ ನಾನು ಕಳೆದೆರೆಡು ಬಾರಿಯಿಂದ ನಿರಂತರವಾಗಿ ಅವಿರೋಧ ಆಯ್ಕೆಗೊಂಡಿದ್ದೇನೆ. ಸಂಘ ಎಂಬುದು ಒಂದು ವ್ಯವಸ್ಥೆ. ಇಲ್ಲಿ ಭಿನ್ನಾಭಿಪ್ರಾಯ ಸಹಜ. ಹಿಂದೆ ಏನಾಯಿತು ಎನ್ನುವುದಕ್ಕಿಂತ ಮುಂದೇನು ಎಂಬುದೇ ಪ್ರಮುಖ ಸಂಗತಿ. ಪ್ರತಿಯೊಬ್ಬರೂ ಸೋಲು-ಗೆಲುವನ್ನು ಸಕರಾತ್ಮಕವಾಗಿ ತೆಗೆದುಕೊಳ್ಳುವುದನ್ನು ಮೊದಲು ರೂಢಿಸಿಕೊಳ್ಳಬೇಕಿದೆ. ನೂತನ ನಿರ್ದೇಶಕರು ಇಲಾಖೆಯಲ್ಲಿನ ಸಮಸ್ಯೆಗಳ ಪರಿಹಾರ ನಿಮ್ಮ ಗುರುತರ ಜವಾಬ್ದಾರಿ ಎಂಬ ಅಂಶವನ್ನು ಮನದಟ್ಟು ಮಾಡಕೊಂಡು ಧನಾತ್ಮಕ ಚಿಂತನೆಯೊಂದಿಗೆ ಸಾಗಬೇಕಿದೆ ಎಂಬ ಸಲಹೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ, ಹಾಲಿ ನಿರ್ದೇಶಕ ಬಸವಣ್ಯಪ್ಪ ಮಾತನಾಡಿ, ಸರ್ಕಾರಿ ನೌಕರರು ಒತ್ತಡದ ನಡುವೆ ಕಾರ್ಯ ನಿರ್ವಹಿಸಬೇಕಿದೆ. ಆದರೆ, ಇತ್ತೀಚಿನ ದಿನಮಾನಗಳಲ್ಲಿ ಆರ್ಥಿಕ ಸಬಲತೆ ಹೊಂದಿದ್ದೇವೆ. ಸಂಘದಲ್ಲಿ ಆರ್ಥಿಕ ಸಿಸ್ತು ಬಹಳ ಮುಖ್ಯವಾಗಿದ್ದು, ಅದು ಸಾಧನೆಗೆ ಪ್ರೇರಣೆಯಾಗಿದೆ. ಸಂಘವು ಸ್ವಂತ ಕಟ್ಟಡ ಹೊಂದಿದ್ದು, ವಾರ್ಷಿಕ 6 ಲಕ್ಷ ರೂ. ಆದಾಯವಿದೆ. ಕಟ್ಟಡ ನಿರ್ಮಾಣಕ್ಕೆ ಪಡೆದಿದ್ದ ಬ್ಯಾಂಕ್ ಸಾಲ ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣಗೊಳ್ಳಲಿದೆ. ಇದಕ್ಕಾಗಿ ವಾರ್ಷಿಕ 2.50 ಲಕ್ಷ ರೂ. ವ್ಯಯವಾಗುತ್ತಿದೆ ಎಂಬ ಅಭಿಪ್ರಾಯ ಮುಂದಿಟ್ಟರು.
ಇದೇ ಸಂದರ್ಭದಲ್ಲಿ 2024-29ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವಿವಿಧ ಪದಾಧಿಕಾರಿಗಳ ಸ್ಥಾನಕ್ಕೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ನಿರ್ದೇಶಕರಾಗಿ ವಿವಿಧ ಇಲಾಖೆಗಳ ಆಯ್ಕೆಯಾದ ನೂತನ ನಿರ್ದೇಶಕರಿಗೆ ಚುನಾವಣಾಧಿಕಾರಿ ಸಮ್ಮುಖದಲ್ಲಿ ಚುನಾವಣಾ ಪ್ರಮಾಣ ಪತ್ರ ವಿತರಿಸಿ ಅಭಿನಂದನೆ ಸಲ್ಲಿಸಲಾಯಿತು.
ಶಿಕ್ಷಣ ಇಲಾಖೆಯ ಪೃಥ್ವಿರಾಜ್ ಅವರು ಸಂಘದ ಕಾರ್ಯದರ್ಶಿಯಾಗಿ ನೇಮಕಗೊಂಡರು. ಒಟ್ಟಾರೆ 28 ನಿರ್ದೇಶಕ ಹುದ್ದೆಗಳಲ್ಲಿ ಆರು ಸ್ಥಾನಗಳಿಗೆ ಚುನಾವಣೆ ನಡೆದರೆ, ಉಳಿದೆಲ್ಲಾ ಅವಿರೋಧ ಆಯ್ಕೆ ನಡೆದಿತ್ತು. ಚುನಾವಣಾ ಅಧಿಕಾರಿಗಳಾಗಿ ಪಶುವೈದ್ಯ ಇಲಾಖೆ ನಿವೃತ್ತ ನೌಕರ ಮಲ್ಲಿಕಾರ್ಜುನ ಸ್ವಾಮಿ, ಸಂಗಮೇಶ್ ಯಶಸ್ವಿಯಾಗಿ ನಡೆಸಿಕೊಟ್ಟ ಹಿನ್ನಲೆಯಯಲ್ಲಿ ಸಂಘ ಅತ್ಮೀಯವಾಗಿ ಅಭಿನಂದಿಸಿತು.
ವೇದಿಕೆಯಲ್ಲಿ ಇಒ ನರೇಂದ್ರ ಕುಮಾರ್, ಟಿಹೆಚ್‌ಓ ಸುರೇಶ್ ಉಪಸ್ಥಿತರಿದ್ದರು.
2024-29ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ಹೊಸನಗರ ತಾಲೂಕು ಶಾಖೆಯ ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳಾಗಿ ವಿವಿಧ ಇಲಾಖಾವಾರು ಸಿಬ್ಬಂದಿಗಳ ವಿವರ :
ಸೋಮಶೇಖರ್ ಬಿ.ಪಿ. (ಶಿಕ್ಷಣ-ಅಧ್ಯಕ್ಷರು), ಪ್ಲಥ್ವಿರಾಜ್ ಜಿ.ಜೆ (ಶಿಕ್ಷಣ-ಕಾರ್ಯದರ್ಶಿ),
ಕೆ.ಎಸ್. ಗಣೇಶ್ (ಶಿಕ್ಷಣ-ಖಜಾಂಚಿ), ಹನಮಪ್ಪ ಟಿ ಪಾಟೀಲ (ನ್ಯಾಯಾಂಗ-ರಾಜ್ಯ ಪರಿಷತ್ ಸದಸ್ಯರು), ನಿರ್ದೇಶಕರಾಗಿ ಎಂ.ಎಸ್.ಮಾರುತಿ (ಕೃಷಿ), ಎಸ್.ಸಿ. ಧನಂಜಯ (ಪಶುವೈದ್ಯ), ರಶ್ಮಿ (ತಹಶೀಲ್ದಾರ್), ಆರ್.ಪಿ. ಸುರೇಶ್ (ಪಿಡಿಓ), ಪಂಡಿತಾರಾಧ್ಯ (ಎಫ್‌ಡಿಎ), ಯೋಗೇಂದ್ರ( ಜಿಲ್ಲಾ ಪಂಚಾಯತಿ), ಜಗದೀಶ ಕಾಗಿನಲ್ಲಿ (ಶಿಕ್ಷಣ), ಬಸವಣ್ಯಪ್ಪ (ಶಿಕ್ಷಣ), ಶಿವಪ್ಪ ಹೆಚ್.ಸಿ. (ಶಿಕ್ಷಣ), ಕೆ.ಎಸ್. ರಾಘವೇಂದ್ರ (ಹಾಸ್ಟಲ್), ಮಿಥುನ್ ಐ.ಕೆ.(ಹಾಸ್ಟಲ್), ಕೆ.ಎಂ. ಅಕ್ಷಯಕುಮಾರ್ (ಅರಣ್ಯ), ಎ.ಎನ್. ಗಣೇಶ್(ಆರೋಗ್ಯ), ಡಾ|| ಸುರೇಶ್ (ಆರೋಗ್ಯ), ಐ.ಬಿ.ಸುಕನ್ಯಾ (ಆರೋಗ್ಯ), ಆರ್.ಪ್ರಭಾಕರ್ (ಆರೋಗ್ಯ), ಚಂದ್ರಶೇಖರ್ (ತೋಟಗಾರಿಕೆ), ಎನ್.ಎಂ.ಸುರೇಖಾ (ಸಿಡಿಪಿಓ), ಎಂ.ಕೆ.ರಾಜು (ಭೂಮಾಪನ), ಕೆ.ಜಿ.ಶಿವಕುಮಾರ್ (ತಾಲೂಕು ಪಂಚಾಯತಿ), ಎಂ.ಆರ್. ಸಂತೋಷ್ (ಪಿಡಿಓ), ಎಂ.ವಿಜಯ (ಮಹಿಳಾ ಮೇಲ್ವಿಚಾರಕಿ), ನಾಗರಾಜ (ಆಹಾರ ಇಲಾಖೆ), ನ್ಯಾನ್‌ರಾಜ್ (ಎಸ್‌ಡಿಎ) ಆಯ್ಕೆಯಾಗಿದ್ದಾರೆ.