ಸಾಗುವಾನಿ ಮರಗಳ ಅಕ್ರಮ ಕಡಿತ : ಅರಣ್ಯಾಧಿಕಾರಿಗಳು ಭಾಗಿ ಶಂಕೆ !

Written by Koushik G K

Published on:

ಶಿವಮೊಗ್ಗ :ತಾಲೂಕಿನ ಸಿರಿಗೆರೆ ವನ್ಯಜೀವಿ ವಲಯದಲ್ಲಿ ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದು ಕಳ್ಳ ಸಾಗಾಟ ಮಾಡಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯು ಈ ಅಕ್ರಮದಲ್ಲಿ ಪಾಲ್ಗೊಂಡಿರುವ ಶಂಕೆ ವ್ಯಕ್ತವಾಗಿದೆ.

WhatsApp Group Join Now
Telegram Group Join Now
Instagram Group Join Now

ಮೂಲಗಳ ಪ್ರಕಾರ, ಸಿರಿಗೆರೆ ವನ್ಯಜೀವಿ ವಲಯದ ಮಲೇಶಂಕರ ಕಡೆಗೆ ಸಾಗುವ ಅರಣ್ಯ ಪ್ರದೇಶದಲ್ಲಿ ಐದಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಕಡಿದು, ಹೆಚ್ಚಿನ ಮೌಲ್ಯದ ಮರಗಳನ್ನು ಕಳ್ಳಸಾಗಾಟ ಮಾಡಲಾಗಿದೆ. ಈ ಮರಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ.

ಹೆಚ್ಚು ಚರ್ಚೆಗೆ ಗ್ರಾಸವಾದ ಅಂಶವೆಂದರೆ, ಕಡಿತಗೊಂಡ ಮರಗಳ ಮೇಲೆ ಹಾಕಲಾಗಿರುವ ಚಾಪಾ(ಹ್ಯಾಮರ್) ಕ್ಕೂ, ಇಲಾಖೆಯಲ್ಲಿ ದಾಖಲೆಗೂ ವ್ಯತ್ಯಾಸ ಕಂಡುಬಂದಿದೆ. ಅಲ್ಲದೆ ಮರಗಳ ಅಕ್ರಮ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಿಗೆರೆ ವನ್ಯಜೀವಿ ವಲಯದಲ್ಲಿ ದಾಖಲಾಗಿರುವ ಪ್ರಕರಣಕ್ಕೂ ವ್ಯತ್ಯಾಸ ಕಂಡು ಬಂದಿದೆ

ಅಲ್ಲದೆ, ಕೂಡಿ ಸೆಕ್ಷನ್‌ನ ಸರ್ವೆ ನಂ. 34 ಮತ್ತು 31ರ ಅರಣ್ಯ ಪ್ರದೇಶಗಳಲ್ಲಿ ಕಳೆದ ಒಂದು ವರ್ಷದಿಂದ ಯಥೇಚ್ಛವಾಗಿ ಸಾಗುವಾನಿ ಮರಗಳ ಅಕ್ರಮ ಕತ್ತಿ ಕಳ್ಳಸಾಗಾಟ ನಡೆಯುತ್ತಿದ್ದು, ಈ ಭಾಗದಲ್ಲಿ ಚೆಕ್‌ಪೋಸ್ಟ್ ಇಲ್ಲದಿರುವುದರಿಂದಲೇ ನಾಟು ವಾಹನಗಳು ಸುಲಭವಾಗಿ ಮರದ ಚೀಲಗಳನ್ನು ಸಾಗಿಸುತ್ತಿರುವ ಸಾಧ್ಯತೆಗಳಿವೆ.

ಸ್ಥಳೀಯರು ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಹಾಗೂ ಅಕ್ರಮ ಕಟಾವುಗಳಿಗೆ ಅನುವು ಮಾಡಿಕೊಟ್ಟ ಅಧಿಕಾರಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು ಎಂಬ ಆಗ್ರಹ ವ್ಯಕ್ತಪಡಿಸಿದ್ದಾರೆ.

ತನಿಖೆ ಅವಶ್ಯಕ:

ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕೃತ ತನಿಖೆ ನಡೆಸಬೇಕಾಗಿರುವುದು ಅತೀ ಅಗತ್ಯವಾಗಿದೆ. ನೈಸರ್ಗಿಕ ಸಂಪತ್ತುಗಳ ಕಳ್ಳಸಾಗಾಟ ತಡೆಯುವುದು ಅಧಿಕಾರಿಗಳ ಜವಾಬ್ದಾರಿಯಾಗಿರುವಾಗಲೇ ಅವರೇ ಭಾಗಿಯಾಗಿರುವ ಶಂಕೆ ಹುಟ್ಟಿರುವುದು ದುಃಖದ ಸಂಗತಿ.

Read More

ಬೆಂಗಳೂರಿನಿಂದ ಶಿವಮೊಗ್ಗ, ಸಾಗರ, ತಾಳಗುಪ್ಪಕ್ಕೆ ಈ ದಿನ ವಿಶೇಷ ರೈಲು : ಪ್ರವಾಸಿಗರಿಗೆ ಅನುಕೂಲ

ಹೊಸನಗರ: ಮೂಕಾಂಬಿಕ ಅಭಯಾರಣ್ಯದ ಜಲಪಾತ ವೀಕ್ಷಣೆಗೆ ಅಕ್ರಮ ಪ್ರವೇಶ ನಿಷಿದ್ಧ

Leave a Comment

WhatsApp

Malnad Times

Join Our Whatsapp channel

Powered by Webpresshub.net