HOSANAGARA ; ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ಗೌರವಾಧ್ಯಕ್ಷರಾದ ಕೆ ಲಕ್ಷ್ಮಿನಾರಾಯಣ (86) ಬೆಂಗಳೂರಿನ ಅವರ ನಿವಾಸದಲ್ಲಿ ನಿಧನರಾಗಿದ್ದು ಹೊಸನಗರದ ಕೋಟೆಗಾರ್ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಪಟ್ಟಣದ ಸೀತಾರಾಮಚಂದ್ರ ಸಭಾಭವನದಲ್ಲಿ ಸಂತಾಪ ಸಭೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್‌ನಾಯ್ಕ್, ಕೆ ಲಕ್ಷ್ಮಿನಾರಾಯಣರಾವ್‌ರವರು ಸಮಾಜದ ಏಳಿಗೆಗಾಗಿ ಸಾಕಷ್ಟು ಸೇವೆ ಮಾಡಿದ್ದು ಇದರ ಜೊತೆಗೆ ಶಾಸಕರಾದ ಸಂದರ್ಭದಲ್ಲಿ ಯಾವುದೇ ಜಾತಿ-ಮತ ಪಂಥ ಭೇದವಿಲ್ಲದೇ ಎಲ್ಲ ಜಾತಿಯವರಿಗೂ ಒಳ್ಳೆಯದು ಮಾಡಿದ್ದಾರೆ ಇವರ ನೆನಪು ಸದಾ ಕಾಲ ಈ ರಾಜ್ಯದಲ್ಲಿ ಇರುತ್ತದೆ. ಇವರನ್ನು ಕಳೆದುಕೊಂಡಿರುವುದರಿಂದ ಸಮಾಜಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಈ ಸಂತಾಪ ಸಭೆಯಲ್ಲಿ ಡಾ|| ದಿನಮಣಿ, ಪಿ.ಆರ್. ಸಂಜೀವ, ಹೆಚ್.ಆರ್. ಸುರೇಶ್, ಗುತ್ತಿಗೆದಾರ ಹೆಚ್.ವಿ.ಮಹಾಬಲ, ಹೆಚ್.ಶ್ರೀನಿವಾಸ್, ಅನಿಲ್, ಸುಬ್ರಹ್ಮಣ್ಯ, ಗಣೇಶ್, ಮಂಜುನಾಥ್, ರಾಘವೇಂದ್ರ, ಕೆ.ಜಿ.ನಾಗೇಶ, ಶಾರದ ರಾಜು, ಸುವರ್ಣ ಹಿರಿಯಣ್ಣ, ಮೂಕಾಂಬಿಕಾ, ಸಂತೋಷ್‌ಕುಮಾರ್, ಭಾಗಿರಥಿ, ಸುಜಾತ, ನೇತ್ರಾವತಿ, ಅನುಪಮಾ, ಭಾರತಿ, ಸಂತೋಪ ಚಂದ್ರಶೇಖರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.