HOSANAGARA ; ಶಾಲಾ ಶಿಕ್ಷಣ ಇಲಾಖೆ, ಬಿಇಒ ಕಚೇರಿ, ಸಿದ್ದಾಂತ್ ಫೌಂಡೇಶನ್ ಉಡುಪಿ, ಶ್ರೀ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಗುರೂಜಿ ಇಂಟರ್‌ನ್ಯಾಶನಲ್ ವಸತಿ ಶಾಲೆ ಸಹಯೋಗದಲ್ಲಿ ಇದೇ ನವೆಂಬರ್ 22ರ ಶುಕ್ರವಾರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಬೆಳಗ್ಗೆ 9-30ರಿಂದ ಸಂಜೆ 4 ಗಂಟೆವರೆಗೆ 2024-25ನೇ ಸಾಲಿನ ತಾಲೂಕಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಪ್ರೇರಣಾ-24-25 ಶೈಕ್ಷಣಿಕ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ‘ಎಸ್.ಎಸ್.ಎಲ್.ಸಿ. ನಂತರ ಮುಂದೇನು…?’ ಎಂಬ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಗೆ ನುರಿತ ಶೈಕ್ಷಣಿಕ ತಜ್ಞರು ಉತ್ತರಿಸಿ ಮಾರ್ಗದರ್ಶನ ನೀಡಲಿದ್ದಾರೆ.
ಬಿಇಒ ಹೆಚ್.ಆರ್. ಕೃಷ್ಣಮೂರ್ತಿ ಕಾರ್ಯಗಾರ ಉದ್ಘಾಟಿಸಲಿದ್ದು, ಉಡುಪಿ ಪ್ರೇರಣಾ ಟ್ರಸ್ಟ್, ಸಿದ್ದಾಂತ್ ಫೌಂಡೇಶನಿನ ಶಿಕ್ಷಣ ತಜ್ಞರಾದ ಡಾ.ಮುರಳಿಧರ್ ಕಿರಣ್ಕೆರೆ, ಪ್ರೊ.ಧೀರಜ್ ಬೆಲ್ಲಾರಿ, ಪ್ರೊ. ಸಂಪತ್‌ರಾಜ್, ಸಿ.ಎ.ಗೋಪಾಲಕೃಷ್ಣ ಭಟ್ ಸೇರಿದಂತೆ ಆರು ಸರಕಾರಿ ಅಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ಸೂಕ್ತ ಮಾಹಿತಿ ನೀಡಲಿದ್ದಾರೆ.
ತಾಲೂಕಿನ ಖಾಸಗಿ ಹಾಗೂ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ತಪ್ಪದೇ ಭಾಗವಹಿಸುವಂತೆ ಶ್ರೀ ಗುರುಜೀ ಶಾಲೆಯ ಮುಖ್ಯಸ್ಥ ಸುದೇಶ್ ಕಾಮತ್ ವಿನಂತಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕಾರ್ಯಗಾರದ ವೇಳೆ ಉಚಿತ ಊಟ, ಚಹ ಒದಗಿಸಲಾಗುವುದು.