ಉತ್ತಮ ಸಾಹಿತ್ಯದಿಂದ ದೇಶಾಭಿಮಾನ ಹೆಚ್ಚಳ ; ತಹಸೀಲ್ದಾರ್ ಭರತ್‌ರಾಜ್

Written by Mahesha Hindlemane

Published on:

ಹೊಸನಗರ ; ಸಾಹಿತ್ಯವು ಮನುಷ್ಯನ ಆಂತರಿಕ ಭಾವನೆಗಳನ್ನು ಅಕ್ಷರಗಳು ಮೂಲಕ ಹೊರ ಜಗತ್ತಿಗೆ ವ್ಯಕ್ತಪಡಿಸುವ ಅತ್ಯುತ್ತಮ ಸಾಧನವಾಗಿದೆ ಎಂದು ತಹಸೀಲ್ದಾರ್ ಭರತ್‌ರಾಜ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಅವರು, ಇದೇ ಎಪ್ರಿಲ್ 24ರಂದು ನಡೆಯಲಿರುವ ತಾಲೂಕು ಮಟ್ಟದ 11ನೇ ಕಸಾಪ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯ ರಚನೆ ಹಾಗು ಓದಿನಿಂದ ಪ್ರತಿಯೊಬ್ಬರ ಮನಸ್ಸು ಪ್ರಫುಲ್ಲಗೊಳುತ್ತದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಸಾಹಿತ್ಯವು ದೇಶಭಕ್ತಿ, ದೇಶಾಭಿಮಾನ ಹೆಚ್ಚಳಕ್ಕೆ ಕಾರಣವಾಯಿತು. ಇಂತಹ ಸಾಹಿತ್ಯ ಸಮ್ಮೇಳನವು ಪ್ರತಿಭೆಗಳ ಉಗಮಕ್ಕೆ ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನಗಳು ನಮ್ಮ ಮುಂದಿನ ಜನಾಂಗಕ್ಕೆ ಸಾಹಿತ್ಯದ ಸದಾಶಯವನ್ನು ತಿಳಿಸುವ ಮಾರ್ಗದರ್ಶಿ ಆಗಬೇಕೆಂದು ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಗಣೇಶ್ ಮೂರ್ತಿ ನಾಗರಕೊಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ನಿಕಟಪೂರ್ವ ಅಧ್ಯಕ್ಷ ಕೆ. ಇಲ್ಯಾಸ್, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಚಂದ್ರಶೇಖರ ಶೇಟ್, ಕಾರ್ಯದರ್ಶಿ ಕೆ.ಜಿ.ನಾಗೇಶ್, ಉಪ ಕಾರ್ಯದರ್ಶಿ ಅಶ್ವಿನಿ ಪಂಡಿತ್, ಪ್ರಮುಖರಾದ ನಿವೃತ್ತ ಪ್ರಾಚಾರ್ಯ ಪ್ರೊ. ನವೀನ ಚಂದ್ರ, ನಿವೃತ್ತ ಕೃಷಿ ಅಧಿಕಾರಿ ಹೆಚ್.ಎಂ. ಸುಬ್ರಹ್ಮಣ್ಯ, ಆಹಾರ ನಿರೀಕ್ಷಕ ಬಾಲಚಂದ್ರ ಗೌಡ, ಪತ್ರಕರ್ತ ಶ್ರೀಕಂಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಗೇಣಿ ಹೋರಾಟದ ಉತ್ತರಾರ್ಧದ ‘ಎರಡು ಖಂಡುಗ’ ಕಾದಂಬರಿ ಬಿಡುಗಡೆ

ಹೊಸನಗರ : ಸಾಗರದ ಯುವ ಬರಹಗಾರ ಶ್ರೀಧರ ಕೆ.ಎ. ಕೆಳದಿಪುರ ರಚಿಸಿರುವ, ಗೇಣಿ ಹೋರಾಟದ ಉತ್ತರಾರ್ಧದ ನಾಡಾಡಿ ‘ಎರಡು ಖಂಡುಗ’ ಹೊಸ ಕಾದಂಬರಿಯನ್ನು ಮಾಜಿ ಶಾಸಕ ಬಿ.ಸ್ವಾಮಿರಾವ್ ಇತ್ತೀಚೆಗೆ ಸೊನಲೆಯ ತಮ್ಮ ನಿವಾಸ ಪುಣ್ಯವತಿಯಲ್ಲಿ ಬಿಡುಗಡೆ ಮಾಡಿದರು.

ಈ ವೇಳೆ ಕಾದಂಬರಿಕಾರ ಶ್ರೀಧರ ಕೆಳದಿಪುರ, ಡಾ.ಗಣಪತಿಯಪ್ಪ ಸೇವಾ ಟ್ರಸ್ಟ್‌ನ ಅಧ್ಯಕ್ಷ ಉಮೇಶ್ ಗಣಪತಿಯಪ್ಪ, ಸಮಾಜ ಸೇವಕ, ಹೋರಾಟಗಾರ ಕಬಸೆ ಅಶೋಕ್ ಮೂರ್ತಿ, ಪ್ರವೀಣ್ ಉಪಸ್ಥಿತರಿದ್ದರು.

Leave a Comment