ಶಿವಮೊಗ್ಗ | “ಹಾಲಿನ ದರ ಏರಿಕೆಗೆ ರಸ್ತೆಗಿಳಿದಿದ್ದ ಬಿಜೆಪಿ ಇದೀಗ ರೈತರಿಗೆ ಕಷ್ಟವಾಗುತ್ತಿರುವ ರಸಗೊಬ್ಬರದ ಬೆಲೆ ಏರಿಕೆಗೆ ಮೌನ ಯಾಕೆ?” ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “160 ರಿಂದ 180 ರೂಪಾಯಿ ತನಕ ರಸಗೊಬ್ಬರ ಚೀಲದ ಬೆಲೆ ಹೆಚ್ಚಾಗಿದೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಬಿಜೆಪಿ ಸಂಸದರು ಅಥವಾ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ರೈತರ ಪರವಂತೆ ಮಾತನಾಡುವ ಪ್ರಧಾನಿ ಮೋದಿ ಅವರ ನಿಜವಾದ ನಿಲುವು ಏನು?” ಎಂದು ಪ್ರಶ್ನಿಸಿದರು.
ಅವರಂತೆ, “ಈ ಬಿಜೆಪಿ ನಾಯಕರು ಹಿಂದೊಮ್ಮೆ ಹಾಲಿನ ದರ ಏರಿಕೆಗೆ ಪ್ರತಿಭಟನೆ ಮಾಡಿದ್ದರು, ಆದರೆ ಈಗ ರೈತರ ಮೊದಲ ಅವಶ್ಯಕತೆ ಆದ ರಸಗೊಬ್ಬರದ ದರ ಏರಿದರೂ ಮೌನ ವಹಿಸಿದ್ದಾರೆ. ಇವರು ರಾಜ್ಯ ಮತ್ತು ದೇಶದ ಪರವಲ್ಲ, ರಾಜಕೀಯ ಲಾಭಕ್ಕಷ್ಟೇ” ಎಂದು ಗಂಭೀರವಾಗಿ ಟೀಕಿಸಿದರು
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
Read More:ಸಮಾಜದ ಸಮಗ್ರ ಅಭಿವೃದ್ದಿಗೆ ನಿಖರ ಸಮೀಕ್ಷೆ ಅವಶ್ಯಕ: ಮಧು ಬಂಗಾರಪ್ಪ

