RIPPONPETE ; ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಗೋ ಪೂಜೆಯನ್ನು ಪರಂಪರಾಗತವಾಗಿ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸೋಂದಾ ಜೈನ ಮಠದ ಪರಮಪೂಜ್ಯ ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಉಪಸ್ಥಿತರಿದ್ದರು.
ಗೋಶಾಲೆಯಲ್ಲಿ ವಿಶೇಷ ಪ್ರಾರ್ಥನೆ, ಪೂಜಾ ವಿಧಿ ಬಳಿಕ ಪೂಜ್ಯ ಸ್ವಾಮೀಜಿಯವರು ಹಣ್ಣು, ಧಾನ್ಯಗಳನ್ನು ಶಕರ ಬೆಲ್ಲದೊಂದಿಗೆ ಸೇವಿಸಲು ನೀಡಿದರು. ಜತೆಗೆ ಶ್ರೀಮಠದ ಗಜರಾಣಿ ಐಶ್ವರ್ಯ, ಅಶ್ವಗಳಿಗೆ ಕಜ್ಜಾಯ ಅರ್ಪಿಸಿದರು.
ಶ್ರೀಮಠದ ಗುರುಕುಲ ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಊರ ಶ್ರಾವಕ-ಶ್ರಾವಿಕೆಯರು, ಪರಊರ ಭಕ್ತರು ಗೋವುಗಳಿಗೆ ಹಣ್ಣು ಹಂಪಲು ನೀಡಿ ಧನ್ಯರಾದರು.
ಸ್ವಾಮೀಜಿಯವರು “ಕಾಮಧೇನು ಸ್ವರೂಪವಾಗಿರುವ ಗೋವು ನಮ್ಮೆಲ್ಲರನ್ನೂ ಸಲಹಿ, ಪೋಷಿಸುವ ಸೌಜನ್ಯ ತೋರುವ ಮಾತೃ ಸಮಾನ” ಎಂದು ಹೇಳಿದರು. “ಪ್ರಾಣಿ ದಯಾ ಭಾವ ನಮ್ಮೆಲ್ಲರಲ್ಲೂ ಇರಬೇಕು. ಜೀವಿಗಳಲ್ಲಿ ವಾತ್ಸಲ್ಯ ಸದಾ ಇದ್ದರೆ ನಮ್ಮನ್ನು ಪ್ರಾಣಿಯಾದರೂ ಕುಟುಂಬದ ಸದಸ್ಯರಂತೆ ಸಹಜೀವನ ನಡೆಸುತ್ತದೆ” ಎಂಬ ಧರ್ಮ ಮರ್ಮ ತಿಳಿಸಿದರು.