ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಯಶಸ್ಸು ಸಮೃದ್ಧಿ ಭಾಗ್ಯ ಕರುಣಿಸಲಿ ; ಹೊಸನಗರ ತಹಸೀಲ್ದಾರ್ ರಶ್ಮಿ ಹಾಲೇಶ್

Written by Mahesha Hindlemane

Published on:

ಹೊಸನಗರ : ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯು ಎಲ್ಲ ಜನರಿಗೂ ಯಶಸ್ಸು ಸಮೃದ್ಧಿ ಭಾಗ್ಯ ಕರುಣಿಸಲೀ ಎಂದು ಹೊಸನಗರದ ತಹಶೀಲ್ದಾರ್ ರಶ್ಮಿ ಹಾಲೇಶ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಹಾನವಮಿಯ ಮೊದಲ ಮೂರು ದಿನ ದುರ್ಗೆಯನ್ನು ನಂತರ ಮೂರು ದಿನ ಲಕ್ಷ್ಮಿಯನ್ನು ತದನಂತರ ಮೂರು ದಿನಗಳಂದು ಸರಸ್ವತಿಯನ್ನು ಪೂಜಿಸಲಾಗಿದ್ದು ಇಂದು ದಸರಾದ ಕೊನೆಯ ದಿನವಾದ ವಿಜಯದಶಮಿ ಪೂಜೆಯನ್ನು ಹೊಸನಗರದ ತಾಲ್ಲೂಕು ಕಛೇರಿಯ ಆವರಣದಲ್ಲಿ ಉಪಖಜಾನೆಗೆ ಹಾಗೂ ತಾಲ್ಲೂಕು ಕಛೇರಿಯ ಆವರಣದಲ್ಲಿ ಚಾಮುಂಡೇಶ್ವರಿ ದೇವರಿಗೆ ಪೂಜೆ ಸಲ್ಲಿಸಿ ಹೊಸನಗರದ ಹಳೇ ಸಾಗರ ರಸ್ತೆಯ ಈಶ್ವರ ದೇವಸ್ಥಾನವಾದ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಯುವ ಜನತೆಯು ಹಿಂದಿನ ಸಂಪ್ರದಾಯಗಳನ್ನು ಹಬ್ಬ ಹರಿದಿನಗಳ ಸಂಭ್ರಮಗಳನ್ನು ಆಚರಿಸದೇ ನೆಪ ಮಾತ್ರಕ್ಕೆ ಹಬ್ಬ ಆಚರಿಸುವ ಸಂಪ್ರದಾಯ ಬೆಳೆಯುತ್ತಿದ್ದು ಯುವ ಪೀಳಿಗೆಯು ನಮ್ಮ ಹಿರಿಯರಿಂದ ಸಂಪ್ರದಾಯಗಳನ್ನು ಕಲಿತು ಇನ್ನೂ ಹೆಚ್ಚಿನ ಆಡಂಬರದಿಂದ ಹಬ್ಬಗಳನ್ನು ಆಚರಿಸಲಿ ಎಂದರು.

ಮೈಸೂರಿನ ರಾಜವಂಶಸ್ಥರು ಅರಮನೆಯ ಮೈದಾನದಲ್ಲಿ 10 ದಿನವೂ ವಿಶೇಷ ಪೂಜೆಯ ಸಲ್ಲಿಸುವಂತೆ ಇನ್ನೂ ನಮ್ಮ ರಾಜ್ಯದ ಪ್ರತಿ ಹಳ್ಳಿ-ಹಳ್ಳಿಗಳಲ್ಲಿಯು ಈ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ಎಂಬುದಕ್ಕೆ ನಮ್ಮ ಹೊಸನಗರ ತಾಲ್ಲೂಕಿನಲ್ಲಿ ಈಗ ನಡೆಯುತ್ತಿರುವ ಹಬ್ಬವೇ ಸಾಕ್ಷಿಯಾಗಿದೆ.
ವಿಜಯದಶಮಿಯೆಂದು ನಾಡಿನಾದ್ಯಂತ ಪ್ರತಿ ಹಳ್ಳಿ-ಹಳ್ಳಿಗಳಲ್ಲಿ ದೇವಾಲಯಗಳಲ್ಲಿ ದೇವಿಯನ್ನು ಪೂಜಿಸುತ್ತಾ 10ನೇ ದಿನದಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಎಲ್ಲ ಕುಟುಂಬಗಳ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬಾಳುಬಂಗಾರವಾಗಲಿ ಎಂದು ಹರ್ಷ ಪಡುವ ಈ ದಿನದ ವಿಶೇಷತೆಯಾಗಿದ್ದು ಎಲ್ಲರ ಬಾಳು ಬಂಗಾರವಾಗಲಿ ತಾಲ್ಲೂಕಿನ ಎಲ್ಲ ಜನತೆಗೆ ದೇವಿಯು ಸುಖ-ಸಂತೋಷ ಆರೋಗ್ಯ ಸಂಪತ್ತು ಸಮೃದ್ಧಿ ನೀಡಲಿ ಎಂದು ಆಶಿಸಿದರು.

ಈ ದಸರಾ ಮೆರವಣಿಗೆ ಕಾರ್ಯಕ್ರಮದಲ್ಲಿ ದಸರಾ ಹಬ್ಬದ ಸಮಿತಿಯ ಅಧ್ಯಕ್ಷ ದುಮ್ಮ ವಿನಯ್‌ಕುಮಾರ್ ಮಾತನಾಡಿ, ಪ್ರತಿ ವರ್ಷಕ್ಕಿಂತ ಹೆಚ್ಚು ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸುಮಾರು 16 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ನಾವು ದಸರಾ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಿ ಹೊಸನಗರ ತಾಲ್ಲೂಕಿನ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ, ಅದು ಅಲ್ಲದೇ ವರ್ಷಕ್ಕೆ ಒಂದೇ ಬಾರಿ ಬರುವ ಈ ಹಬ್ಬ ತಾಲ್ಲೂಕಿನ ಜನತೆ ಕಣ್ತುಂಬಿಕೊಳ್ಳಲಿ ಎಂದು ಆಚರಿಸುತ್ತಿದ್ದು ಮುಂದಿನ ವರ್ಷ ಇನ್ನೂ ಹೆಚ್ಚಿನ ರೀತಿಯಲ್ಲಿ ಹಬ್ಬ ಆಚರಿಸಲಿದ್ದು ತಾಯಿ ಚಾಮುಂಡೇಶ್ವರಿ ಪ್ರತಿಯೊಬ್ಬರಿಗೂ ಸುಖ-ಸಂತೋಷ ನಿಮ್ಮದಿ ನೀಡುವುದರ ಜೊತೆಗೆ ನಾಡು ಸುಖ-ಶಾಂತಿಯಿಂದ ನೆಲೆಸುವಂತೆ ಮಾಡಲಿ ಎಂದರು.

ಈ ದಸರಾ ಕಾರ್ಯಕ್ರಮಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಆಗಮಿಸಿ ತಾಯಿ ಚಾಮುಂಡೇಶ್ವರಿ ತಾಯಿ ಎಲ್ಲ ಜನಾಂಗದವರಿಗೆ ಸುಖ ಸಂತೋಷ ನೀಡುವುದರ ಜೊತೆಗೆ ನೆಮ್ಮದಿಯಿಂದ ಜೀವನ ಸಾಗಿಸಲು ದಾರಿ ತೋರಿಸಲಿ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷ ಗೈರು !

ಹೊಸನಗರದ ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ ದಸರಾ ಸಮಾರಂಭದಲ್ಲಿ ಭಾಗವಹಿಸಿದೆ ನಾಪತ್ತೆಯಾಗಿದ್ದು ಕಾರಣ ತಿಳಿದು ಬಂದಿಲ್ಲ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್, ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ಪಟ್ಟಣ ಪಂಚಾಯಿತಿ ನೌಕರ ವರ್ಗ, ಪಟ್ಟಣ ಪಂಚಾಯಿತಿ ಎಲ್ಲ ಸದಸ್ಯರು ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ವರ್ತಕರ ಸಂಘದ ಅಧ್ಯಕ್ಷ ಪೂಣೇಶ್ ಹಾಗೂ ಎಲ್ಲ ಸದಸ್ಯರು, ತಾಲ್ಲೂಕು ಕಛೇರಿಯ ಗ್ರೇಡ್2 ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ, ಪ್ರಥಮ ದರ್ಜೆ ಗುಮಾಸ್ಥ ಚಿರಾಗ್, ಶಿರಾಸ್ಥೆದಾರ್ ಸುಧೀಂದ್ರ ಕುಮಾರ್, ಆರ್.ಐ ಅಂಜನೇಯ, ಚಿರಾಗ್, ರೇಣುಕಯ್ಯ, ಲೋಹಿತ್, ಸಿದ್ದಪ್ಪ, ಸಬ್ ಇನ್ಸ್‌ಪೆಕ್ಟರ್ ಶಂಕರ ಗೌಡ ಪಾಟೀಲ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಪೊಲೀಸ್ ಸಿಬ್ಬಂದಿ ವರ್ಗ, ಪಟ್ಟಣ ಪಂಚಾಯಿತಿ ಎಲ್ಲ ಸದಸ್ಯರು ಸಿಬ್ಬಂದಿಗಳು ಹೆಚ್. ಶ್ರೀನಿವಾಸ್, ಹೆಚ್. ಮಹಾಬಲ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಚಿದಂಬರ, ಜಿ.ಟಿ ಈಶ್ವರಪ್ಪ ಗೌಡ, ಮೀಲ್ ಈಶ್ವರಪ್ಪ ಗೌಡ, ಮುರುಳಿಧರ, ಹಾಗೂ ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment