ಅಡಿಕೆಗೆ ಮತ್ತೆ ಕ್ಯಾನ್ಸರ್‌ಕಾರಕ ಪಟ್ಟ ; WHO ವರದಿಯಿಂದ ಕಂಗಾಲಾದ ಬೆಳೆಗಾರರು !

Written by malnadtimes.com

Published on:

Arecanut ; ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಮತ್ತೆ ಕ್ಯಾನ್ಸರ್‌ಕಾರಕ ಪಟ್ಟ ನೀಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಹೌದು, ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯೊಂದು ಅಡಿಕೆ ಬಳಕೆಯನ್ನು ನಿಯಂತ್ರಣ ಮಾಡಿದಲ್ಲಿ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ಕಡಿಮೆ ಮಾಡಬಹುದಾಗಿದೆ ಎಂದು ವರದಿ ಸಲ್ಲಿಸಿದ್ದು, ಇದು ಅಡಿಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಆತಂಕ ಮೂಡಿಸಿದೆ.

ತಂಬಾಕು ಮಾದರಿಯಲ್ಲಿ ಅಡಿಕೆ ನಿಯಂತ್ರಣಕ್ಕೆ ಕಾರಣವಾಗುವ ಆತಂಕ ಇದೀಗ ಅಡಿಕೆ ಬೆಳೆಗಾರರಲ್ಲಿ ಮೂಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಡಿಕೆಯ ಕುರಿತು ಮತ್ತೆ ಮಹತ್ವದ ವರದಿ ಸಲ್ಲಿಸಲಾಗಿದ್ದು, ಅಡಿಕೆ ಕ್ಯಾನ್ಸರ್‌ಕಾರಕ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಳಕೆಗೆ ನಿಯಂತ್ರಣ ಹೇರಲು ಶಿಫಾರಸು ಮಾಡಲಾಗಿದೆ. ಅಡಿಕೆ ಬಳಕೆಯನ್ನು ನಿಯಂತ್ರಿಸಿದರೆ ಬಾಯಿ ಕ್ಯಾನ್ಸರ್ ತಗ್ಗಿಸಬಹುದೆಂದು ವರದಿ ಸಲ್ಲಿಸಲಾಗಿದೆ. ಅಡಿಕೆ ಕ್ಯಾನ್ಸರ್‌ಕಾರಕ ಎಂಬುದರ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಈಗಾಗಲೇ ಕಾನೂನು ಸಮರ ನಡೆಯುತ್ತಿದ್ದು, ಅಡಿಕೆಯು ಆರೋಗ್ಯದಾಯಕ ಎಂದು ಸಾಬೀತುಪಡಿಸಲಾಗಿದೆ. ಇದರ ನಡುವೆ ಇಂತಹುದೊಂದು ವರದಿ ಸಲ್ಲಿಕೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಂಘ ಸಂಸ್ಥೆ ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಅಂಡ್ ಕ್ಯಾನ್ಸರ್ 2024ರ ಅಕ್ಟೋಬರ್ 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಅಡಿಕೆ ಕ್ಯಾನ್ಸರ್‌ಕಾರಕ ಎಂದು ಹೇಳಲಾಗಿದೆ. ಈ ವರದಿ ದಿ ಲ್ಯಾನ್ಸೆಟ್ ಅಂಕಾಲಜಿ ಎಂಬ ಅಂತರಾಷ್ಟ್ರೀಯ ಜರ್ನಲ್ ನಲ್ಲಿ ಈ ವರದಿ ಪ್ರಕಟವಾಗಿದೆ.

ಮಲೆನಾಡು ಮತ್ತು ಕರಾವಳಿಯ ಆಚರಣೆಗಳಲ್ಲೂ ಅಡಿಕೆಗೆ ಮಹತ್ವದ ಸ್ಥಾನ ಇದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಇಲ್ಲಿನ ಆರ್ಥಿಕ ವ್ಯವಹಾರಗಳಲ್ಲಿ ಅಡಿಕೆಗೆ ಮಹತ್ವದ ಸ್ಥಾನವಿದೆ.

ಪದೇಪದೆ ಅಡಿಕೆ ಕುರಿತು ಪ್ರಕಟವಾಗುತ್ತಿರುವ ಭೀತಿ ಹುಟ್ಟಿಸುವ ವರದಿಗಳು ಮತ್ತು ಹೇಳಿಕೆಗಳು ಬೆಲೆಯ ಮೇಲೆ ಪರಿಣಾಮ ಬೀರಿ ಅಡಿಕೆ ಬೆಳೆಗಾಗರರು ಆತಂಕ ಎದುರಿಬೇಕಾಗುತ್ತದೆ. ಹಲವು ಸಲ ಸಂಸತ್ತಿನಲ್ಲೂ ಅಡಿಕೆ ಹಾನಿಕಾರಕ ಎಂದು ಉಲ್ಲೇಖಿಸಲಾಗಿತ್ತು.

Leave a Comment