ಸಿಗಂದೂರು ಹೇಳಿಕೆ : ಮಧು ಬಂಗಾರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಚಿವ ಹರತಾಳು ಹಾಲಪ್ಪ

Written by Koushik G K

Updated on:

ಶಿವಮೊಗ್ಗ ; ಮಾಜಿ ಸಚಿವ ಹರತಾಳು ಹಾಲಪ್ಪ, ಜಿಲ್ಲೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯವಾಗಿ ಸಿಗಂದೂರು ಸೇತುವೆ ಕುರಿತು ಸಚಿವರ ಹೇಳಿಕೆಗಳನ್ನು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ಸಿಗಂದೂರು ಸೇತುವೆ ಮತ್ತು ದೇವಾಲಯ ಸಂಬಂಧಿಸಿದಂತೆ ನೀಡಿರುವ ಮಧು ಬಂಗಾರಪ್ಪ ಅವರ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. “ಒಂದು ತಿಂಗಳಲ್ಲಿ ಸಿಗಂದೂರು ದೇವಾಲಯವನ್ನು ಹಾಳು ಮಾಡುತ್ತೇನೆ ಎಂಬ ಹೇಳಿಕೆಯನ್ನು ಅವರು ನೀಡಿದ್ದಾರೆ. ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ಮಧು ಬಂಗಾರಪ್ಪ ನಿಲ್ಲಿಸಬೇಕು. ಪುಣ್ಯಾತ್ಮ ಬಂಗಾರಪ್ಪನವರ ಹೊಟ್ಟೆಯಲ್ಲಿ ಹುಟ್ಟಿದ ಮೇಲೆ ಸರಿಯಾಗಿ ಇರಬೇಕು” ಎಂದು ಟೀಕಿಸಿದರು.

“ನಾವು ವಿಡಿಯೋವನ್ನು ತಿರುಚಿದ್ದೇವೆ ಎಂಬ ಆರೋಪ ಕೇಳಿಬಂದಿದೆ. ಆದರೆ ನಾವು ತಿರುಚಿದ್ದೇವೆ ಎನ್ನುವುದಾದರೆ, ಅದನ್ನು ಎಫ್‌ಎಸ್‌ಎಲ್‌ಗೆ ನೀಡಿ ತನಿಖೆ ಮಾಡಿಸಲಿ,” ಎಂದು ಅವರು ಸವಾಲು ಹಾಕಿದರು. “ಸಿಗಂದೂರು ದೇವಾಲಯವನ್ನು ಯಾರ ಕೈಯಿಂದಲೂ ಹಾಳು ಮಾಡುವುದು ಸಾಧ್ಯವಿಲ್ಲ” ಎಂದು ಹಾಲಪ್ಪ ಹೇಳಿದರು.

ಮಧು ಬಂಗಾರಪ್ಪ ಅವರ ಕ್ಷೇತ್ರದಲ್ಲಿ ನಡೆಯುತ್ತಿರುವ ಇಸ್ಪೀಟ್ ಕ್ಲಬ್‌ಗಳ ಕುರಿತು ಮಾತನಾಡಿದ ಅವರು, “ನಗರ ಅಥವಾ ಪಟ್ಟಣಗಳಲ್ಲ, ‘ಸಿಟಿ ಕ್ಲಬ್’ಗಳ ಹೆಸರಿನಲ್ಲಿ ಐದು ಇಸ್ಪೀಟ್ ಕ್ಲಬ್‌ಗಳು ನಡೆಯುತ್ತಿವೆ. ಪುಣ್ಯಾತ್ಮ ಬಂಗಾರಪ್ಪ ಅವರ ಕ್ಷೇತ್ರದಲ್ಲೇ ಇವು ನಡೆಯುತ್ತಿವೆ. ನಲವತ್ತು ಸಾವಿರ ಮತಗಳಿಂದ ಗೆದ್ದು, ವಿದ್ಯಾಮಂತ್ರಿಯಾದವರು ಕ್ಲಬ್ ನಡೆಸಬಹುದಾ ಹಾಗಾದರೆ? ಇಸ್ಪೀಟ್ ಕ್ಲಬ್‌ಗಳು ನಡೆದರೂ ಎಸ್‌ಪಿ ಏನು ಮಾಡುತ್ತಿದ್ದಾರೆಂದು ಗೊತ್ತಿಲ್ಲ ಎಂದರು 

Read More :ಹುಲಿಕಲ್ ಘಾಟ್‌ನಲ್ಲಿ ಡಿಸೇಲ್ ಖಾಲಿಯಾಗಿ ನಿಂತ ಕೆ.ಎಸ್.ಆರ್.ಟಿ.ಸಿ ಬಸ್, ಟ್ರಾಫಿಕ್ ಜಾಮ್

Leave a Comment