ಶಿವಮೊಗ್ಗ

ಇಷ್ಟ್ ದಿನ ಸಗಣಿ ತಿಂತಿದ್ನಂತಾ ಹಾಲಪ್ಪ ; ಸಚಿವ ಮಧು ಬಂಗಾರಪ್ಪ ಕಿಡಿ

ಶಿವಮೊಗ್ಗ ; ಶರಾವತಿ ಸಂತಸ್ತರ ಸಮಸ್ಯೆ ಬಗೆಹರಿಸಲು ಸಂಸದ ಬಿ.ವೈ.ರಾಘವೇಂದ್ರ ಕಾರಣ ಎಂಬ ಹರತಾಳು ಹಾಲಪ್ಪ ಹೇಳಿಕೆಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರತಾಳು ಹಾಲಪ್ಪ ಇಷ್ಟು ದಿನ ಏನು ಸಗಣಿ ತಿಂತಾ ಇದ್ನಾ? ಹೊಸನಗರದಲ್ಲಿದ್ದಾಗ ಹಾಲಪ್ಪ ವೋಟ್ ಹಾಕಿಸಿಕೊಂಡಿದ್ರಲ್ಲ, ಆಗ ಏನ್ ಮಾಡಿದ್ರು? ಏನ್ ಮಾತಾಡ್ತಾ ಇದ್ದಾರೆ, ಪುಕ್ಸಟ್ಟೆ ಭಾಷಣ ಮಾಡ್ಲಿಕ್ಕೆ ಬಹಳಷ್ಟು ಜನ ಇದ್ದಾರೆ. ಯಾರು ಮಾಡುತ್ತಿದ್ದಾರೆ ಏನು ಮಾಡುತ್ತಿದ್ದಾರೆ ಎಂದು ಜನರಿಗೆ ಗೊತ್ತಿದೆ ಎಂದರು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/r/1LivSo44ru/

ಕಾಗೋಡು ತಿಮ್ಮಪ್ಪನವರಿಗೆ ಡಬಲ್ ಡಾಕ್ಟರೇಟ್ ಕೊಟ್ಟ ಸಂದರ್ಭದಲ್ಲೂ ಕೂಡ ಶರಾವತಿ ಸಂತ್ರಸ್ತರ ಸಮಸ್ಯೆ ಇನ್ನೂ ಇದೆ, ಸಮಸ್ಯೆ ಬಗೆಹರಿಸುವಲ್ಲಿ ರಾಘವೇಂದ್ರರ ಹರಸಾಹಸ ಎಲ್ಲಿ ಎಂದು ವ್ಯಂಗ್ಯವಾಡಿದರು. ಇನ್ನು ಸಮಸ್ಯೆ ಬಗೆಹರಿದಿದೆ ಎಂದು ಯಾರು ಹೇಳಿದ್ದಾರೆ ನಿಮಗೆ? ಸುಪ್ರೀಂಕೋರ್ಟ್‌ನಲ್ಲಿ ಎರಡು ಮೂರು ವಾರಗಳ ನಂತರ ವಿಚಾರಣಾ ದಿನಾಂಕ ಕೊಟ್ಟಿದ್ದಾರೆ. ಕೇಂದ್ರ ಸಚಿವರು ಮಧು ಬಂಗಾರಪ್ಪ ಪತ್ರ ಬರೆದಿದ್ದಾರೆ ಎಂದು ಉಲ್ಲೇಖ ಮಾಡಿದ್ದು ಅವರು ಸಹಕಾರ ನೀಡುವುದಾಗಿ ಹೇಳಿದ್ದಾರೆ. ಶರಾವತಿ ನದಿ ಸಂತ್ರಸ್ತರಿಗೆ ಅನ್ಯಾಯವಾಗಿದ್ದು ಸರಿಪಡಿಸುವ ಭರವಸೆ ಕೇಂದ್ರ ಸಚಿವರು ನೀಡಿದ್ದಾರೆ ಎಂದರು.

ಶಾಸಕ ಚೆನ್ನಿ ಬೇಸರದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಚನ್ನಬಸಪ್ಪರಿಗೆ ಅವಸರದಲ್ಲಿ ಗೋವಿಂದಪುರದ ಆಶ್ರಯ ಮನೆಗಳ ಉದ್ಘಾಟನೆ ಆಗಬೇಕಿತ್ತು, ಆದರೆ ಹಾಗಾಗುವುದಿಲ್ಲ. ದುಡ್ಡು ತಂದು ಮಾಡಬೇಕಿತ್ತು ಹಾಗೆ ಉದ್ಘಾಟನೆ ಮಾಡಲಾಗುವುದಿಲ್ಲ. ಅಪೂರ್ಣಗೊಂಡಿರುವುದನ್ನು ಉದ್ಘಾಟನೆ ಮಾಡಿದರೆ ನನಗೂ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ಮನೆ ಗೃಹಪ್ರವೇಶ ಮಾಡಿ ನೀರಿಲ್ಲ, ಕರೆಂಟ್ ಇಲ್ಲ ಎಂದರೆ ಅದು ಗೃಹಪ್ರವೇಶ ಹೇಗಾಗುತ್ತೆ? ಎಂದು ಪ್ರಶ್ನಿಸಿದ ಅವರು, ನಮ್ಮ ಸರ್ಕಾರದಲ್ಲಿ ಶಾಸಕ ಚೆನ್ನಿ ಹೇಳಿದಂತೆ ಮಾಡಲಾಗುವುದಿಲ್ಲ. ನಾನು ಚೆನ್ನಿ ಸ್ನೇಹಿತರು ಅವಾಗವಾಗ ಹಾಗೆ ತೋರಿಸಿಕೊಳ್ಳುತ್ತಾರೆ ನಾನು ಅವರು ಸ್ನೇಹಿತರು. ಆದಷ್ಟು ಬೇಗ ಅನುದಾನ ತಂದು ಜನರಿಗೆ ಕೊಡುವುದು ನನ್ನ ಕರ್ತವ್ಯ. ಪುಕ್ಸಟ್ಟೆ ಭಾಷಣ ಮಾಡಿದ ತಪ್ಪಾಗುತ್ತೆ ನಾನೇ ಖುದ್ದು ಪರಿಶೀಲನೆ ನಡೆಸುತ್ತೇನೆ. ಸಚಿವ ಜಮೀರ್ ಅಹಮ್ಮದ್ ರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದೇನೆ. ಅಪೂರ್ಣಗೊಂಡ ಕಾಮಗಾರಿ ಉದ್ಘಾಟಿಸಲು ನನಗಂತೂ ಇಷ್ಟ ಇಲ್ಲ. ಸಚಿವರಿಗೆ ಉದ್ಘಾಟಿಸಲು ಆಹ್ವಾನ ನೀಡುವುದು ಶಾಸಕರ ಕರ್ತವ್ಯ. ಮಾಧ್ಯಮದವರು ಸಚಿವರಾಗಿ ನೀವೇನು ಮಾಡುತ್ತೀರಾ? ಎಂದು ನನ್ನನ್ನೇ ಪ್ರಶ್ನೆ ಮಾಡುತ್ತೀರಾ ಎಂದರು.

ಇನ್ನೂ ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರವಾಗಿ ಮಾತನಾಡಿದ ಸಚಿವರು, ಕೂತ್ಕೊಂಡ್ ಕೇಳಿ ಒಂದು ದಾರ ತೆಗೆದು ಕೊಂಡು ದೊಡ್ಡದಾಗಿ ಹೆಣೆಯುತ್ತೀರಾ. ಈ ಬಗ್ಗೆ ಹೆಚ್ ಕೆ ಪಾಟೀಲ್ ಹೇಳಿದ್ದಾರೆ ಅಷ್ಟೇ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಮೈಸೂರ್ ಒಡೆಯರ ಆಸ್ತಿ ಕುರಿತ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಒಡೆಯರ್ ಕುಟುಂಬ ಮತ್ತು ಸರ್ಕಾರದ ಮಧ್ಯೆ ಇರುವ ವಿಚಾರ ಅದೀಗ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದರೆ ತಪ್ಪಾಗುತ್ತದೆ ಎಂದರು.

ಮೈಕ್ರೋ ಫೈವ್ ಫೈನಾನ್ಸ್ ಹಾವಳಿ ವಿಚಾರವಾಗಿ ಮಾತನಾಡಿ, ಇಡೀ ರಾಜ್ಯದಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಫೈನಾನ್ಸ್ ದಂಧೆಯ ಹಾವಳಿ ಬೇರೆ ಬೇರೆ ರೂಪಕ್ಕೆ ಪಡೆದುಕೊಳ್ಳುತ್ತಿದೆ ಇದೆಲ್ಲವೂ ನಿಲ್ಲಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಸಭೆ ಕರೆದಿದ್ದು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಜನರು ಈ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ ಅವರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು. ಈ ಬಗ್ಗೆ ಕಠಿಣ ಕಾನೂನು ತರಬೇಕು ಎಂಬುವುದು ನನ್ನಾಸೆ ಎಂದರು.

ಚಿತ್ರನಟ ಶಿವಣ್ಣ ಆಗಮನ ವಿಚಾರವಾಗಿ ಮಾತನಾಡಿ, ನಾನು ಸ್ವಲ್ಪ ಹೊತ್ತಿನ ಮುಂಚೆ ಶಿವಣ್ಣ ಜೊತೆ ಮಾತನಾಡಿದ್ದೇನೆ ಫ್ಲೈಟ್ ನಲ್ಲಿ ಕುಳಿತುಕೊಂಡಿದ್ದಾರೆ ನಾಳೆ ಬೆಂಗಳೂರಿಗೆ ಬರುತ್ತಾರೆ. ಶಿವಣ್ಣ ಬರುವುದನ್ನು ಎಲ್ಲರೂ ಕಾಯುತ್ತಿದ್ದಾರೆ ಹಾಗೆ ನಾನು ಕಾಯುತ್ತಿದ್ದೇನೆ. ಅಭಿಮಾನಿ ದೇವರುಗಳ ಆಶೀರ್ವಾದ ಹಾರೈಕೆಯಿಂದ ಶಿವಣ್ಣ ಗುಣಮುಖರಾಗಿದ್ದಾರೆ. ಶಿವಣ್ಣ ಒಂದು ತಿಂಗಳ ಬಳಿಕ ಶಿವಮೊಗ್ಗಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ದೇವರು ಶಿವಣ್ಣನನ್ನು ರಕ್ಷಣೆ ಮಾಡಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಆಶೀರ್ವಾದ ಸಹಕಾರದಿಂದ ಗುಣಮುಖರಾಗಿ ವಾಪಸ್ ಬಂದಿದ್ದಾರೆ ಎಂದರು.

ಮೈಕ್ರೋ ಫೈನಾನ್ಸ್ ಬಗ್ಗೆ ಜಿಲ್ಲೆಯಾದ್ಯಂತ ದೂರಿನ ವಿಚಾರ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳು ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಲ್ಲಿ ರಾಜ್ಯಾದ್ಯಂತ ಅದನ್ನು ಅನುಷ್ಠಾನಗೊಳಿಸಲಾಗುತ್ತದೆ. ಸಾಮಾನ್ಯ ಜನರಿಗೆ ರಕ್ಷಣೆ ಮಾಡುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಹಿನ್ನೆಲೆ ವರದಿ ಕೇಳಿದ್ದೇನೆ. ಮುಂಬರುವ ದಿನಗಳಲ್ಲಿ ನಾನೇ ಪರಿಶೀಲನಾ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ. ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆರೋಪಗಳು ಸಾಬೀತಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ನೋಟಿಸ್ ಕೊಡುವುದು ಈಗ ನಿಂತಿದೆ. ಆಡಳಿತದಲ್ಲಿ ಭ್ರಷ್ಟಾಚಾರ ಕಂಡು ಬಂದಲ್ಲಿ ನಿರ್ದಾಕ್ಷಿಣಕ್ರಮ ಕೈಗೊಳ್ಳುತ್ತೇನೆ ಎಂದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!