ಹೊಸನಗರ ; ರಾಜ್ಯದ ಪ್ರಮುಖ ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ವರ್ಷಧಾರೆಗೆ ರಾಜ್ಯದ ಪ್ರಮುಖ ಜಲಾಶಯ ಭರ್ತಿ ಆಗುತ್ತಿದ್ದು ಜಲಾಶಯಕ್ಕೆ 50,576 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ನಿನ್ನೆ ಒಂದೇ ದಿನ 3.30 ಅಡಿಗಳಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿದ್ದು ಕಳೆದ ಬಾರಿಗಿಂತ 25 ಅಡಿಗಳಷ್ಟು ಹೆಚ್ಚಿನ ನೀರಿನ ಸಂಗ್ರಹವಾಗಿದೆ.
ಇನ್ನೂ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 213 ಮಿ.ಮೀ ಮಳೆ ದಾಖಲಾಗಿದೆ.
ಉಳಿದಂತೆ ಹುಲಿಕಲ್ 201 ಮಿ.ಮೀ., ಮಾಣಿ 164 ಮಿ.ಮೀ., ಯಡೂರು 156 ಮಿ.ಮೀ., ಚಕ್ರಾನಗರ 148, ಸಾವೆಹಕ್ಲು 127 ಮಿ. ಮೀ., ಬಿದನೂರುನಗರ 114 ಮಿ.ಮೀ, ಹುಂಚ 66 ಮಿಲಿ ಮೀಟರ್ ಮಳೆ ದಾಖಲಾಗಿದೆ.

