ರಿಪ್ಪನ್‌ಪೇಟೆ ; ಹಿಂದೂ ಜಾಗರಣ ವೇದಿಕೆ ವಿನಾಯಕ ಪೇಟೆ ಘಟಕದಿಂದ ಪಂಜಿನ ಮೆರವಣಿಗೆ ಮಾಡುವ ಮೂಲಕ ಅಖಂಡ ಭಾರತ ಸಂಕಲ್ಪದಿನ ಆಚರಣೆ ಮಾಡಲಾಯಿತು.
ಇಲ್ಲಿನ ಶ್ರೀ ಸಿದ್ದಿವಿನಾಯಕ ದೇವಸ್ಥಾನದಿಂದ ಪಂಜಿನ ಮೆರವಣಿಗೆ ಹೊರಟು ಶಿವಮೊಗ್ಗ – ತೀರ್ಥಹಳ್ಳಿ – ಹೊಸನಗರ – ಸಾಗರ ಪ್ರಮುಖ ರಸ್ತೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ಜನಾಕರ್ಷಣೆಗೆ ಕಾರಣರಾದರು.
ಈ ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ದೇವರಾಜ್ ಅರಳಹಳ್ಳಿ ಮಾತನಾಡಿ, ಅಖಂಡ ಭಾರತವು ಇಂದಿನ ಅಫ್ಘಾನಿಸ್ತಾನದಿಂದ ಇಂಡೋನೇಷ್ಯಾದ ತನಕ ಹಬ್ಬಿತ್ತು. ಕಾಲಾನಂತರದಲ್ಲಿ ಆಕ್ರಮಣದಿಂದ ಮತ್ತು ವಸಾಹತುಶಾಹಿಗಳಿಮದ ಭಾರತ ಛಿದ್ರ ಛಿದ್ರವಾಯಿತು. ಹಿಂದೂಗಳಿಗೆ ಅಂತ ಇರುವ ದೇಶ ಭಾರತ ಒಂದೇ ನಾವೆಲ್ಲ ಈ ಹಿಂದೂಸ್ಥಾನವನ್ನು ಉಳಿಸಿಕೊಳ್ಳಬೇಕು. ಹಿಂದೂಗಳೆಲ್ಲ ಸಂಘಟಿತರಾಗಿ ಗೋ ಸಂರಕ್ಷಣೆ ಲವ್ ಜಿಹಾದ್ ತಡೆಯುವುದು ದೇಶ ರಕ್ಷಣೆಗೆ ಒಂದಾಗಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಬ್ಯಾಂಕ್ ನೌಕರ ರತ್ನಾಕರ್ ವಹಿಸಿದ್ದರು.
ತಾಲ್ಲೂಕು ಸಂಘದ ಸಂಚಾಲಕ ಶ್ಯಾಮಸುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಿವೃತ್ತ ಯೋಧರಿಗೆ ಸನ್ಮಾನಿಸಿದರು.
ಹಿಂದು ಜಾಗರಣಾ ವೇದಿಕೆಯ ಪ್ರಮುಖ ಕುಷನ ದೇವರಾಜ್ ಕೆರೆಹಳ್ಳಿ, ಮಂಜು ಆಚಾರ್, ಆರ್.ರಾಘವೇಂದ್ರ, ಎಂ.ರಾಘವೇಂದ್ರ, ಅಶ್ವತ್ ಮುಗುಡ್ತಿ, ಕೆರೆಹಳ್ಳಿ ದೇವು, ಎನ್.ಸತೀಶ್, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ ಅಧ್ಯಕ್ಷ ಪಿ.ಸುಧೀರ್, ಮುರುಳಿ ಕೆರೆಹಳ್ಳಿ, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ್, ಪದ್ಮಾಸುರೇಶ್, ನಾಗರತ್ನ ದೇವರಾಜ್, ಶೈಲಾ ಡಿ.ಪ್ರಭು, ಎ.ಟಿ.ನಾಗರತ್ನ ನಾಗರಾಜ್, ರೇಖಾ ರವಿಕುಮಾರ್, ಅಶ್ವಿನಿ ರವಿಶಂಕರ್, ಇನ್ನಿತರರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.