HOSANAGARA ; ದೇಶದ ಭವಿಷ್ಯದಲ್ಲಿ ಇತಿಹಾಸ ಮುಖ್ಯವಲ್ಲ ದೇಶದ ಭವಿಷ್ಯ ಮುಖ್ಯ ದೇಶದ ಭವಿಷ್ಯ ಪ್ರತಿಯೊಬ್ಬ ಮತದಾನದ ಮೇಲೇಯೇ ನಿರ್ಭರವಾಗಿದೆ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಮತದಾನದ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿನಿಯರಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ಮತದಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಏಕೆಂದರೆ ಇದು ಪ್ರಗತಿ ಮತ್ತು ಅಭಿವೃದ್ಧಿಯನ್ನು ಚಾಲನೆ ಮಾಡಲು ದೃಷ್ಟಿ ಸಾಮರ್ಥ್ಯ ಮತ್ತು ಬದ್ದತೆಯನ್ನು ಹೊಂದಿರುವ ನಾಯಕರನ್ನು ಆಯ್ಕೆ ಮಾಡಲು ಸಹಕಾರಿಯಾಗುತ್ತದೆೆಂದರು.
ಪ್ರತಿಯೊಬ್ಬರು 18 ವರ್ಷ ಮೇಲ್ಪಟ್ಟು ಮತದಾನ ಮಾಡಬಹುದು ಮತದಾನಕ್ಕೆ ಕನಿಷ್ಟ 18 ವರ್ಷವಾಗಿರಬೇಕು. ಆದರೆ ಮತದಾನಕ್ಕೆ ಗರಿಷ್ಟ ವಯೋಮಿತಿ ಇರುವುದಿಲ್ಲ. ತಾವು ಮತದಾನ ಮಾಡುವುದರಿಂದ ನಮ್ಮ ದೇಶದ ಮುಖ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಲು ಮತದಾರರಿಗೆ ಸ್ವಂತ ಹಕ್ಕು ಇದೆ ತಮಗೆ ಬೇಕಾದಂಥಹ ನಾಯಕರನ್ನು ಆಯ್ಕೆ ಮಾಡಿಕೊಳ್ಳಬಹುದು ಪ್ರತಿಯೊಬ್ಬರು ಮತದಾನ ಮಾಡಬೇಕು ಹಾಗೂ ತಮಗೆ ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು ನೀವು ಒಂದು ಮತ ಚಾಲಾಯಿಸುವುದರಿಂದ ಇಡೀ ಪ್ರಜಾಪ್ರಭುತ್ವದ ಭವಿಷ್ಯವೇ ನಿಮ್ಮ ಕೈಯಲ್ಲಿದ್ದು ಪ್ರತಿಯೊಬ್ಬರು ಮತದಾನ ಮಾಡುವುದರ ಜೊತೆಗೆ ಅಕ್ಕ-ಪಕ್ಕದ ಮನೆಯವರನ್ನು ಚುನಾವಣೆ ನಡೆಯುವ ಸ್ಥಳಕ್ಕೆ ಕರೆದುಕೊಂಡು ಬಂದು ಮತದಾನ ಮಾಡಿಸಿ ಅದರೆ ಯಾವುದೇ ಗೊಡ್ಡು ಬೆದರಿಕೆಗಳಿಗೆ ಹಣದ ಆಮಿಷಕ್ಕೆ ಬಲಿಯಾಗದೇ ಉತ್ತಮ ನಾಯಕರನ್ನು ಆಯ್ಕೆ ಮಾಡಿ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸ್ವಾಮಿರಾವ್ ವಹಿಸಿ ಮತದಾನದ ಬಗ್ಗೆ ಮತನಾಡಿದರು.
ಈ ಕಾರ್ಯಕ್ರಮದಲ್ಲಿ ಸಿ.ಡಿ.ಸಿ ಉಪಾಧ್ಯಕ್ಷರಾದ ಎಂ.ಪಿ.ಸುರೇಶ್, ಉಪನ್ಯಾಸಕರಾದ ದಾಮೋದರ್ ಶಣೈ, ತಾಲ್ಲೂಕು ಚುನಾವಣೆ ಸಂಚಾಲಕರಾದ ಜನಾರ್ಧನ್ ನಾಯ್ಕ್, ಹುಂಚ ಕಾಲೇಜಿನ ವಾಣಿ, ಜಯಪ್ಪ, ರೂಪ, ಡೆಲ್ವಿನ್ ಕ್ಲೈವರ್ಡ್ ಮಾಂತೇಶ್ ಟಿ.ಎಸ್, ಅಶೋಕ್‌ಕುಮಾರ್ ಸಂತೋಷ ಕೆ,ಎನ್, ಉಪನ್ಯಾಸರಾದ ಶಂಕ್ರಪ್ಪ ಹಾಗೂ ವಿವಿಧ ಕಾಲೇಜಿನಿಂದ ಪ್ರಬಂಧ ಸ್ಪರ್ಧೆಗಾಗಿ ಆಗಮಿಸಿದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.