ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ | ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸಮರ್ಪಿಸಿದ ಉಡಿ, ಭಕ್ತರ ಇಷ್ಟಾರ್ಥ ಸಿದ್ಧಿಸಲಿ ; ಶ್ರೀಗಳು

Written by malnadtimes.com

Published on:

RIPPONPETE | ಶ್ರೀ ಕ್ರೋಧಿನಾಮ ಸಂವತ್ಸರದ ಶ್ರಾವಣ ಮಾಸದ ಪ್ರಥಮ ಶುಭ ಶುಕ್ರವಾರದಂದು ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಂಪರಾನುಗತ ಆಗಮೋಕ್ತ ಪೂಜಾ ವಿಧಿ-ವಿಧಾನಗಳು ಸಾಂಗವಾಗಿ ನೆರವೇರಿದವು. ದೇಶದ ವಿವಿದೆಡೆಗಳಿಂದ ಆಗಮಿಸಿದ ಭಕ್ತರು ಭಕ್ತಿಪೂರ್ವಕ ‘ಉಡಿ’ ಸಮರ್ಪಿಸಿದರು.

WhatsApp Group Join Now
Telegram Group Join Now
Instagram Group Join Now

Gruha Lakshmi DBT Status : ಸೇವಾ ಸಿಂಧುವಿನಲ್ಲಿ ಗೃಹಲಕ್ಷ್ಮಿ ಡಿಬಿಟಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ?

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಶ್ರೀ ನೇಮಿನಾಥ ಸ್ವಾಮಿ, ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ ಸಾನಿಧ್ಯದಲ್ಲಿ ಪೂಜೆ ಸಲ್ಲಿಸಿ ಮಹಾಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ 108 ವೈವಿಧ್ಯಮಯ ಶರ್ಕರ ನೈವೇದ್ಯೆಗಳನ್ನು ಅರ್ಪಿಸಿದರು. ಫಲ ಪುಷ್ಪಗಳಿಂದ ಶೋಭಾಯಮಾನವಾಗಿ ಜಿನಮಂದಿರವನ್ನು ಅಲಂಕರಿಸಲಾಗಿತ್ತು.

HOSANAGARA | ಎರಡು ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆಗೆ ಶರಣಾದ ತಾಯಿ !

ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಭಕ್ತವೃಂದದವರು ಭಕ್ತಿಯಿಂದ ಅರ್ಪಿಸಿದ ಉಡಿ, ಭಕ್ತರ ಇಷ್ಟಾರ್ಥ ಸಿದ್ಧಿಸುವಂತಾಗಲೆಂದು ಪೂಜ್ಯ ಸ್ವಸ್ತಿಶ್ರೀಗಳವರು ಪ್ರಾರ್ಥಿಸಿ, ಭಕ್ತರನ್ನು ಶ್ರೀಮಂತ್ರಾಕ್ಷತೆ ನೀಡಿ ಹರಸಿದರು.

ನಾಗರಪಂಚಮಿ ಆಚರಣೆ :

ಶ್ರಾವಣ ಮಾಸದ ಮೊದಲ ಪರ್ವವಾಗಿರುವ ನಾಗರಪಂಚಮಿಯನ್ನು ಶ್ರೀಕ್ಷೇತ್ರದ ಶ್ರೀ ನಾಗಸನ್ನಿಧಿಯಲ್ಲಿ ಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ, ಸಾನಿಧ್ಯದಲ್ಲಿ ನೆರವೇರಿಸಲಾಯಿತು. ಪ್ರಕೃತಿಯ ಸಂಪತ್ತನ್ನು ಸಂರಕ್ಷಿಸುವ ನಾಗದೇವರ ಶ್ರೀರಕ್ಷೆ ಸರ್ವರಿಗೂ ಲಭಿಸಲೆಂದು ಆಶೀರ್ವದಿಸಿದರು.

Leave a Comment