ರಿಪ್ಪನ್‌ಪೇಟೆ ; ‘ಜೈನ ಧರ್ಮದ ಮೂಲ, ಸಿದ್ದಾಂತಗಳ ಅನುಷ್ಠಾನಗಳ ಪ್ರತಿಪಾದಕರಾಗಿ ಚಾರಿತ್ರ್ಯ ಚಕ್ರವರ್ತಿ ಆಚಾರ್ಯ ಶ್ರೀ ಶಾಂತಿಸಾಗರ ಮುನಿಶ್ರೀಯವರಾಗಿದ್ದರು. ಧರ್ಮ ಪ್ರಸಾರದ ಅಗ್ರಪಂಕ್ತಿಯಲ್ಲಿನ ದಿಗಂಬರ ಮುನಿಚರ್ಯೆಯ ಐತಿಹ್ಯದ ಕುರಿತ ಅವರ ಪ್ರತಿಪಾದನೆಯು ಅನುಕರಣೀಯವಾದುದು’ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು.
ಶ್ರೀಕ್ಷೇತ್ರದಲ್ಲಿ ಸೋಮವಾರದಂದು ಆಚಾರ್ಯ ಮುನಿಶ್ರೀ ಶಾಂತಿಸಾಗರ ಮಹಾರಾಜರ ಪದಾರೋಹಣದ ಶತಮಾನೋತ್ಸವ ಸಂಸ್ಮರಣ ಕಾರ್ಯಕ್ರಮದಲ್ಲಿ, ‘ಜೈನಾಚಾರವು ವಿಶ್ವದ ಸರ್ವ ಸಂಕಷ್ಟಗಳಿಗೆ ಪರಿಹಾರ ನೀಡುವ ಸೂತ್ರವನ್ನು ಪ್ರತಿಪಾದಿಸುತ್ತದೆ’ ಎಂದು ಶ್ರೀಗಳವರು ವಿವರಿಸಿ, ಸ್ಮರಿಸಿ, ವಿನಯಾಂಜಲಿ ಅರ್ಪಿಸಿದರು.
ಆಚಾರ್ಯ ಮುನಿಶ್ರೀ ಶಾಂತಿಸಾಗರ ಮಹಾರಾಜರ ಭಾವಚಿತ್ರಕ್ಕೆ ಶ್ರೀಗಳವರು, ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.